ಬೆಂಗಳೂರು: ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ತೀವ್ರ ಸ್ವರೂಪಪಡೆದಿದ್ದು, ತಮಿಳುನಾಡಿನ ನಗರಗಳು ತತ್ತರಿಸುತ್ತಿರುವ ಬೆನ್ನಲ್ಲೇ, ಬೆಂಗಳೂರಲ್ಲಿ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ (manyatatechpark).
ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬೆಂಗಳೂರಿನ ಹೆಬ್ಬಾಳದ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಅಕ್ಷರಶಃ ನದಿಯಂತಾಗಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಮಂಡಿ ಮಟ್ಟ ನೀರಿದ್ದು, ವಾಹನ ಸವಾರರ ಪರದಾಡು ವಂತಾಗಿದೆ.
ಬೆಂಗಳೂರಿನ ದೊಡ್ಡ ಐಟಿ ಹಬ್ ಎಂದು ಕರೆಸಿಕೊಳ್ಳುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ (manyatatechpark) ನೂರಾರು ದೊಡ್ಡ ಕಂಪನಿಗಳ ಕಚೇರಿ ಇದೆ. ಇದು ನಿರ್ಮಾಣವಾಗುವುದಕ್ಕೂ ಮುನ್ನ ಇದೊಂದು ಕೆರೆ ಎಂಬ ಮಾತುಗಳು ಇತ್ತು. ಈಗ ಭಾರಿ ಮಳೆಯಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನೀರು ತುಂಬಿದ್ದು ಮತ್ತೆ ಕೆರೆಯಂತಾಗಿದೆ.
It’s not Manyatha tech park ❌
— Titan 🔯🦁 (@Charan_PK_MSD) October 16, 2024
It’s Manyatha water park✅
pic.twitter.com/qle5Myfehh
ಸಾಮಾಜಿಕ ಜಾಲತಾಣದಲ್ಲಿ ನೀರು ಹರಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೆರೆಯಿದ್ದ ಜಾಗ (manyatatechpark) ಈಗ ಮತ್ತೆ ಕೆರೆಯಾಗಿ ಮಾರ್ಪಾಡಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ಜಾಡಿಸಿದ್ದಾರೆ.
ಮುಂದಿನ 2 ದಿನಗಳ ಕಾಲ ಬೆಂಗಳೂರಲ್ಲಿ ಮತ್ತಷ್ಟು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.