ಹರಿತಲೇಖನಿ ದಿನಕ್ಕೊಂದು ಕಥೆ: ಹೆಗ್ಗಣ ಕಲಿಸಿದ ಪಾಠ

ಒಂದು ದಟ್ಟ ಕಾಡಿತ್ತು. ಅ ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅ ಮರ ಬಹಳ ವರ್ಷಗಳಿಂದ ಜೀವಿಸಿದ್ದರಿಂದ ಹಿರಿಯನಂತೆ ವರ್ತಿಸುತ್ತಿತ್ತು. ಅದೇ ವಿಷಯವಾಗಿ ಅದಕ್ಕೆ ತುಂಬಾ ಜಂಬವಿತ್ತು. ಕಾಡಿಗೆ ತಾನೇ ಹಿರಿದಾದ ಮರ, ತನ್ನಷ್ಟು ಹಿರಿಯ ಮರ ಎಲ್ಲೂ ಇಲ್ಲ, ಆದ್ದರಿಂದ ಎಲ್ಲರೂ ತನ್ನ ಮಾತು ಕೇಳಬೇಕು ಎಂದು ಮೆರೆಯುತ್ತಿತ್ತು.

ತನ್ನ ನೆರಳಿನ ಆಶ್ರಯಕ್ಕೆ ಬಂದ ಪ್ರಾಣಿಗಳ ಬಳಿ “ಇಷ್ಟು ವಯಸ್ಸಾಗಿದ್ದರೂ ನನ್ನ ರೆಂಬೆ ಕೊಂಬೆಗಳು ಹಸಿರಿನಿಂದ ನಳನಳಿಸುತ್ತಿದೆ ನೋಡಿ’ ಎಂದು ನಲಿಯುತ್ತಿತ್ತು.

ಒಂದು ದಿನ ಪುಟ್ಟ ಗುಬ್ಬಿ ಮರದ ಮೇಲೆ ಕುಳಿತಿತು. ಹಿರಿಯ ಮರ ಮಾತ್ರ ಮಾತಾಡಲೇ ಇಲ್ಲ. ಯಾವತ್ತೂ ತಾನಾಗಿಯೇ ಮಾತು ಶುರುಮಾಡುತ್ತಿದ್ದ ಮರ ಇವತ್ತೇಕೆ ಸುಮ್ಮನಿದೆ ಎಂದು ಗುಬ್ಬಿ ಆಶ್ಚರ್ಯ ವ್ಯಕ್ತಪಡಿಸಿತು.

ತುಂಬಾ ಹೊತ್ತು ಸುಮ್ಮನಿದ್ದ ಗುಬ್ಬಿ “ನೀನು ಯಾವಾಗಲೂ ಸಂತೋಷದಿಂದ ಇರುತ್ತಿದ್ದೆಯಲ್ಲಾ. ಇಂದು ಯಾಕೆ ಬೇಸರದಿಂದ ಇದ್ದೀಯಾ?’ ಎಂದು ಕೇಳಿತು. ಮರ “ನನ್ನ ಬೇರು ನೋಡಿದ್ದೀಯ? ಎಷ್ಟು ಕೊಳಕಾಗಿದೆ. ನನ್ನ ಎತ್ತರ, ನನ್ನ ಸೌಂದರ್ಯ ಇಷ್ಟು ಬೃಹತ್ತಾಗಿದ್ದರೂ ಬೇರುಗಳು ಮಾತ್ರ ಕೊಳಕಾಗಿದ್ದರೆ ಏನು ಚೆನ್ನ?!’.

ಅದನ್ನು ಕೇಳಿ ಪುಟ್ಟ ಗುಬ್ಬಿ ನಕ್ಕು “ಅಯ್ಯೋ ಮರವೇ… ನಿನ್ನ ಎತ್ತರ, ಸೌಂದರ್ಯ ಇವೆಲ್ಲವಕ್ಕೂ ಮುಖ್ಯ ಕಾರಣ ಇವೇ ಇದೇ ಕೆಸರು ಮೆತ್ತಿದ ಬೇರು. ಅದಿಲ್ಲದೇ ಇರುತ್ತಿದ್ದರೆ ನೀನು ಬೆಳೆಯುವುದಕ್ಕೆ ಪೋಷಕಾಂಶ ಎಲ್ಲಿಂದ ಬರಬೇಕು? ಈಗ ಅದನ್ನೇ ದೂಷಿಸುತ್ತಿರುವೆಯಲ್ಲ. ಇದು ಸರಿಯೇ?’ ಎಂದು ಕೇಳಿತು.

ಆದರೆ ಮರಕ್ಕೆ ಅದು ನಾಟಲಿಲ್ಲ. ಅದು ತನ್ನ ಮೊಂಡುವಾದವನ್ನೇ ಹಿಡಿಯಿತು. “ಆದರೂ ಈ ಬೇರುಗಳು ಮಣ್ಣು ಮೆತ್ತಿಕೊಂಡಿರದೇ ಇದ್ದರೇ ಚೆಂದವಿತ್ತು’ ಎಂದು ಮತ್ತೆ ಬೇಸರಪಟ್ಟುಕೊಂಡಿತು. ಇದಕ್ಕೆ ಎಷ್ಟು ಹೇಳಿದರೂ ಅಷ್ಟೆ ಎಂದು ಅರಿತ ಗುಬ್ಬಿ ಮತ್ತೆ ಏನನ್ನೂ ಹೇಳದೆ ಅಲ್ಲಿಂದ ಹಾರಿಹೋಯಿತು.

ಕೆಲವು ದಿನಗಳ ನಂತರ ಕಾಡಿನಲ್ಲಿ ಹೊಸದೊಂದು ಸಮಸ್ಯೆ ಪ್ರಾರಂಭವಾಗಿತ್ತು. ಅದೆಲ್ಲಿಂದಲೋ ಹೆಗ್ಗಣದ ಸೈನ್ಯ ಕಾಡಿಗೆ ನುಗ್ಗಿಬಿಟ್ಟಿತು. ಸಿಕ್ಕ ಸಿಕ್ಕ ಮರಗಳನ್ನೆಲ್ಲಾ ಕಡಿದು ಹಾಕುತ್ತಿದ್ದವು. ಅವು ಕಾಡಿನ ನೆಲದಲ್ಲಿ ಬಿಲ ತೋಡಲು ಸೂಕ್ತವಾದ ಮರವನ್ನು ಹುಡುಕುತ್ತಿದ್ದವು. ಅದೇ ಸಮಯಕ್ಕೆ ಹಿರಿಯ ಮರ ಹೆಗ್ಗಣಗಳನ್ನು ತನ್ನ ಬಳಿಗೆ ಕರೆಯಿತು. ಅವುಗಳಿಂದ ತನ್ನ ಬೇರನ್ನು ಸ್ವತ್ಛ ಮಾಡಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು.

ಆ ಹಿರಿಯ ಮರದ ಎತ್ತರ ಮತ್ತು ಬೃಹತ್‌ ಗಾತ್ರ ನೋಡಿದ ಹೆಗ್ಗಣಗಳ ಸೈನ್ಯದ ಮುಖಂಡ “ಈ ಮರದ ಕೆಳಗೆ ಬಿಲ ತೋಡಿದರೆ ತಮ್ಮ ಸೈನ್ಯದ ಸದಸ್ಯರೆಲ್ಲರೂ ವಾಸಿಸಬಹುದು’ ಎಂದಿತು. ತಮ್ಮ ಮುಖಂಡ ಹಾಗೆ ಹೇಳಿದ್ದೇ ತಡ ಹೆಗ್ಗಣಗಳು ಮರದ ಬುಡದ ಮೇಲೆ ಮುಗಿಬಿದ್ದವು.

ಸ್ವಲ್ಪ ಹೊತ್ತಿನಲ್ಲಿ ಮರಕ್ಕೆ ನೋವಾಗತೊಡಗಿತು. ಬಹಳ ಬೇಗ ಹೆಗ್ಗಣಗಳು ಹಿರಿಯ ಮರದ ಬೇರನ್ನು ಕಡಿದು ಕಡಿದು ಸಡಿಲ ಮಾಡಿದವು. ಮರ ದೊಪ್ಪನೆ ಉರುಳಿಬಿತ್ತು. ತನ್ನ ಬೆಳವಣಿಗೆಗೆ ಕಾರಣವಾದ ಬೇರನ್ನೇ ದ್ವೇಷಿಸಿದ ಮರಕ್ಕೆ ತಕ್ಕ ಶಾಸ್ತಿಯಾಗಿತ್ತು.

ಕೃಪೆ: ಯುಎಚ್‌ಎಮ್ ಗಾಯತ್ರಿ (ಸಾಮಾಜಿಕ ಜಾಲತಾಣ)

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!