ಬೆಂಗಳೂರು: ಎಟುಕದ ದ್ರಾಕ್ಷಿ ಉಳಿ ಎಂಬಂತೆ ಪಕ್ಷದ ನಾಯಕ ಯೋಗೇಶ್ವರ್ ಅವರಿಗೆ (channapatna by election) ಟಿಕೆಟ್ ಕೊಡಿಸಲಾಗದೆ, ಕೈಸುಟ್ಟುಕೊಂಡು ಹತಾಶರಾಗಿರುವ ಬಿಜೆಪಿಯ ನಾಯಕರು, ಕಾಂಗ್ರೆಸ್ ಯಶಸ್ವಿ ನಾಯಕರಾದ ಡಿಕೆ ಶಿವಕುಮಾರ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ ಅವರು ವಾಗ್ದಾಳಿ ಕುರಿತು ಪ್ರತಿಕ್ರಿಯೆ ನೀಡಿ, ಯಾರಾದ್ರೂ ಇತರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದರೆ ಮೋದಿ ಅಭಿವೃದ್ಧಿ ಮೆಚ್ಚಿ, ಬಿಜೆಪಿ ಸಿದ್ದಾಂತ ಮೆಚ್ಚಿ ಬಂದಿದ್ದಾರೆ ಎನ್ನವ ಆರ್.ಅಶೋಕ ಅವರು, ಯಾರಾದ್ರೂ ಪಕ್ಷ ಬಿಟ್ಟಾಗ ಈ ರೀತಿಯ ಮಾಸಲು ಡೈಲಾಗ್ ಹಾಕೋದು ಸರ್ವೆ ಸಾಮಾನ್ಯವಾಗಿದೆ.
ಸಕ್ರಿಯ ರಾಜಕಾರಣ ಮಾಡಿ, ಜೆಡಿಎಸ್ ಪ್ರಭಾವದ ನಡುವೆಯೂ ಅಡ್ರಸ್ ಇಲ್ಲದ ಬಿಜೆಪಿಯನ್ನು ಚನ್ನಪಟ್ಟಣನದಲ್ಲಿ ಕಟ್ಟಿ ಬೆಳೆಸಿದಕ್ಕೆ ಯೋಗೇಶ್ವರ್ ಅವರಿಗೆ ಪಕ್ಷ ನೀಡಿದ ಕಾಣಿಕೆ ಏನು ಎಂಬುದು ಅಶೋಕ್ ಅವರು ತಿಳಿದು ಮಾತಾಡಲಿ.
ಕಾಂಗ್ರೆಸ್ ಪಕ್ಷ ಆಲದ ಮರವಿದ್ದಂತೆ ಇತರೆ ಪಕ್ಷಗಳಿಂದ ಅನ್ಯಾಯಕ್ಕೆ ಒಳಗಾದವರು ಬಂದು ಆಶ್ರಯ ಪಡೆಯುತ್ತಾರೆ. ಏಕೆ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರ ಕೈಕಾಲು ಹಿಡಿದು ಮತ್ತೆ ಬಿಜೆಪಿ ಸೇರ್ಪಡೆ ಮಾಡಿಕೊಂಡಿದ್ದು, ಬಿಜೆಪಿ ಮುಖಂಡರು ಮರೆತು ಮಾತಾಡುತ್ತಿದ್ದಾರೆ.
ಈಶ್ವರಪ್ಪ, ಪ್ರತಾಪ್ ಸಿಂಹ, ಬಸನ ಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ರಾಜ್ಯ ಬಿಜೆಪಿಯ ಅಸಮರ್ಥ ನಾಯಕತ್ವದ ವಿರುದ್ಧ ಮಾತನಾಡುವವರ ಲೀಸ್ಟ್ ದೊಡ್ಡದಿದೆ.
ಡಿಕೆ ಶಿವಕುಮಾರ್ ಅವರು ಪಕ್ಷ ಸಂಘಟನೆ ಚತುರ, ಬಿಜೆಪಿ ಮಾಡುವ ತಂತ್ರದಂತೆ ನಮ್ಮ ಪಕ್ಷದ ಅಧ್ಯಕ್ಷರು ಚುನಾವಣೆಗೆ ಬೇಕಾದ ರಣತಂತ್ರ ರೂಪಿಸಿ, ಯಶಸ್ವಿಯಾಗಿದ್ದಾರೆ.
ಯೋಗೇಶ್ವರ್ ಅಂತಹ ನಾಯಕನಿಗೆ ಟಿಕೆಟ್ ಕೊಡಿಸಲಾಗದ ದುಸ್ಥಿತಿಗೆ ರಾಜ್ಯ ಬಿಜೆಪಿ ಬಿಂದಿದ್ದು, ಪಕ್ಷ ತ್ಯಜಿಸುವ ನಾಯಕರ ಉಳಿಸಿಕೊಳ್ಳಲಾಗದ ಆರ್.ಅಶೋಕ್ ಮತ್ತು ಇತರೆ ನಾಯಕರು ಫಸ್ಟ್ರೇಟೇಡ್ ಆಗಿ ಮಾತನಾಡುತ್ತಿದ್ದು, ಇವರ ನಾಟಕ ರಾಜ್ಯದ ಜನರ ಎದುರಿಗೆ ಬಯಲಾಗಿದೆ ಎಂದು ಶರತ್ ಪಟೇಲ್ ಲೇವಡಿ ಮಾಡಿದ್ದಾರೆ.