
ಲಂಡನ್: ಮಿಸ್ ವರ್ಲ್ಡ್ ಗ್ರ್ಯಾಂಡ್ ಶೋನಲ್ಲಿ ಪಾಕಿಸ್ತಾನಿ ಮಾಡೆಲ್ ಒಬ್ಬರು ಬಿಕನಿ ಧರಿಸಿ ಭಾಗವಹಿಸಿದ್ದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನಿ ಮಾಡೆಲ್ ರೋಮಾ ಮೈಕೆಲ್ ಅವರ ಬಿಕನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋಗೆ ಅನೇಕರು ಪರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೌಲ್ಯಕ್ಕೆ ಮಹತ್ವದ ಪಾತ್ರವನ್ನು ವಹಿಸುವ ಪಾಕಿಸ್ತಾನದಂತಹ ಸಂಪ್ರದಾಯವಾದಿ ಸಮಾಜದಲ್ಲಿ ಈ ರೀತಿಯ ಉಡುಗೆಗೆ ಕೆಲವರಿಂದ ಟೀಕೆ ವ್ಯಕ್ತವಾಗಿದೆ.
ओह लगदी लाहौर दिया! एक खूबसूरत पाकिस्तानी मॉडल ने मिस वर्ल्ड ग्रैंड शो में बिना हिजाब के हिस्सा लिया।
— Shani (@Shani6496943902) October 23, 2024
वह महिलाओं के कपड़े चुनने के अधिकार का सशक्त संदेश देती हैं। pic.twitter.com/1Xf0UdLB7K
ನೆಟ್ಟಿಗರು ಈ ಬಗ್ಗೆ ಟೀಕಿಸಿದ್ದು ಒಂದು ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಈ ರೀತಿಯಲ್ಲಿ ಭಾಗವಹಿಸುವುದು ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಗೆ ಅಗೌರವವನ್ನು ತೋರುತ್ತದೆ ಎಂದು ಕಿಡಿಕಾರಿದರೇ ಇನ್ನೂ ಕೆಲವರು ಮಾಡೆಲ್ ಒಬ್ಬ ಕ್ರಿಶ್ಚಿಯನ್ ಮತ್ತು ಆಕೆಯ ಹೆಸರು ರೋಮಾ ಮ್ಯಾಕೆಲ್ ಆಗಿರುವುದರಿಂದ ತಪ್ಪು ಮಾಹಿತಿ ನೀಡಬೇಡಿ.
ಕ್ರಿಶ್ಚಿಯನ್ನರು ಹೆಂಗಸರು ಸಾಂಪ್ರದಾಯಿಕವಾಗಿ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುವ ಅಗತ್ಯವಿಲ್ಲ. ಪಾಕಿಸ್ತಾನವು ಇಸ್ಲಾಮಿಕ್ ದೇಶವಾಗಿದ್ದರೂ ಸಾಂಪ್ರದಾಯಿಕ ಇಸ್ಲಾಮಿಕ್ ಆಚರಣೆಗಳು ಮುಸ್ಲಿಮರಿಗೆ ಮಾತ್ರ ಅನ್ವಯಿಸುತ್ತವೆ ಎಂದಿದ್ದಾರೆ.
ಇನ್ನೂ ಕೆಲವು ನೆಟ್ಟಿಗರು ರೋಮಾ ಮೈಕೆಲ್ ಅವರ ಪರ ಬೆಂಬಲವನ್ನು ವ್ಯಕ್ತಪಡಿಸಿದರು. ಜಾಗತಿಕೆ ವೇದಿಕೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಪ್ರಶಂಸಿದರು.