
ದೊಡ್ಡಬಳ್ಳಾಪುರ: ತಾಲೂಕಿನ ಉಜ್ಜನಿ ಹೊಸಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಭಾರತೀ ತೀರ್ಥ ಮಹಾದ್ವಾರ, ಶ್ರೀಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿ ಉದ್ಘಾಟನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು Vidhushekhara Bharati Mahaswamiji ನೇತೃತ್ವದಲ್ಲಿ ಅದ್ಧೂರಿಯಾಗಿ ನೆರವೇರಿತು.
ಭಾರತೀ ತೀರ್ಥ ಮಹಾದ್ವಾರವನ್ನು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀಸ್ವಾಮಿಜಿ (Vidhushekhara Bharati Mahaswamiji) ಅವರು ಉದ್ಘಾಟಿಸಿದರು.

ನಂತರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ 54 ಕಳಶಗಳಿಂದ ಅಭಿಷೇಕ ಮಹಾಪೂಜೆ, ನೂತನ ಉತ್ಸವ ಮೂರ್ತಿ ಚರಪ್ರತಿಷ್ಠೆ ಮತ್ತು ರಾಜಗೋಪುರ ಕುಂಭಾಭಿಷೇಕ ಹಾಗೂ ಶಂಕರ ಭಗವತ್ಪಾದಾಚಾರ್ಯರ ಚರಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಲಾಯಿತು.
ಸಂಜೆ ಮೆರವಣಿಗೆ, ಗುರುವಂದನೆ, ಧೂಳಿಪಾದಪೂಜೆ, ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರನದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತ ಅಧಿಕಾರಿ ಶ್ರೀಮುರಳಿ, ಶ್ರೀರಂಗಪಟ್ಟಣದ ಶಾಶ್ವತಿ ಅಧ್ಯಕ್ಷರಾದ ಭಾನು ಪ್ರಕಾಶ್ ಶರ್ಮ, ಧರ್ಮಪತ್ನಿ ಸಮೇತರಾಗಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು,ಲೋಕೋಪಯೋಗಿ ಇಲಾಖೆಯ ನಾಗಯ್ಯ, ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಸೇರಿದಂತೆ ಅನೇಕ ಗಣ್ಯರು, ವಿಪ್ರರು ಭಾಗವಹಿಸಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						