
ಹಾಸನ; ಚನ್ನಪಟ್ಟಣ ಉಪಸಮರ ಒತ್ತಡದ ನಡುವೆಯೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದರು.
ಹಾಸನದ ಹಾಸನಾಂಬೆ ದರ್ಶನ ಪಡೆದ ಬಳಿಕ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಂಗಳಾರತಿ ಬೆಳಗುವ ವೇಳೆ ಸಿದ್ದೇಶ್ವರ ಸ್ವಾಮಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ.
ಪೂಜೆ ವೇಳೆ ಬಲಗಡೆ ಹೂ.. ಕುಮಾರಸ್ವಾಮಿ ಕುಟುಂಬಕ್ಕೆ ಶುಭ ಸೂಚನೆ..?#hdkumaraswamy#LatestUpdates#Channapatnabyelection pic.twitter.com/zrnIAMx1IS
— Harithalekhani (@harithalekhani) October 27, 2024
ಪ್ರಾರ್ಥನೆ ಮಾಡುವಾಗ ಹೂವು ಬೀಳುವುದು ಒಳ್ಳೆಯ ಸೂಚನೆ ಎಂದು ಭಾವಿಸಲಾಗುತ್ತದೆ, ಹೀಗಾಗಿ ಸಿದ್ದೇಶ್ವರ ಸ್ವಾಮಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಶುಭ ಸೂಚನೆ ನೀಡಿದ್ರಾ ಎನ್ನುವ ಕುತೂಹಲ ಹೆಚ್ಚಿಸಿದೆ.
ದೇವರ ಬಲಭಾಗದಿಂದ ಹೂ ಬೀಳುವುದನ್ನು ಅನಿತಾ ಕುಮಾರಸ್ವಾಮಿ ಅವರು HD ಕುಮಾರಸ್ವಾಮಿ ಅವರಿಗೆ ತೋರಿಸಿದರು.
ಚನ್ನಪಟ್ಟಣದಲ್ಲಿ ಉಪಚುನಾವಣೆಯ ಕಣ ತೀವ್ರ ಕುತೂಹಲ ಮೂಡಿಸುತ್ತಿದೆ, ರಾಜ್ಯ ಮಾತ್ರವಲ್ಲ ಇಡೀ ದೇಶದ ಗಮನವನ್ನು ಚನ್ನಪಟ್ಟಣ ಉಪಚುನಾವಣೆ ಸೆಳೆಯುತ್ತಿದೆ. ಇತ್ತ ಸ್ವಕ್ಷೇತ್ರದಲ್ಲಿ ಮಗನನ್ನು ಗಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಕುಮಾರಸ್ವಾಮಿ ಅವರಿಗೆ ದೇವರು ಹೂ ನೀಡಿರುವುದು ಶುಭ ಸೂಚನೆ ಎನ್ನಲಾಗುತ್ತಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						