
ಹಾವೇರಿ: ಕಾಂಗ್ರೆಸ್ ಸರ್ಕಾರ ಕೊಡುತ್ತಿರುವುದು ತಾತ್ಕಾಲಿಕ ಗ್ಯಾರೆಂಟಿ ನಮ್ಮದು ಶಾಸ್ವತ ಗ್ಯಾರೆಂಟಿ ಎಂದು ಶಿಗ್ಗಾವಿ ಸವಣೂರು (shiggaon by election) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ.
ಅವರು ಭಾನುವಾರ ಕ್ಷೇತ್ರದ ಮಣ್ಣೂರು, ನಂದಿಹಳ್ಳಿ, ತೆಗ್ಗಿಹಳ್ಳಿ, ಹೊಸ ನೀರಲಗಿ, ಗುಂಡೂರು, ತಾಂಡಾ, ಮಂತ್ರೋಡಿ, ಜೇಕಿನಕಟ್ಟಿ, ಕಾರಡಗಿ, ಗೋನಾಳ, ಚವಡಾಳ, ಚಿಲ್ಲೂರ ಬಡ್ನಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಟಾಂಗ್ ಕೊಟ್ಟ ಅವರು, ಕಾಂಗ್ರೆಸ್ ಸರ್ಕಾರ ಕೊಟ್ಟಿರುವುದು ತಾತ್ಕಾಲಿಕ ಗ್ಯಾರಂಟಿ. ನಮ್ಮದು ಪರ್ಮನೆಂಟ್ ಗ್ಯಾರಂಟಿ
ನಾವು ಇಲ್ಲಿ 5000 ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ. ಇದು ಪರ್ಮನೆಂಟ್ ಗ್ಯಾರಂಟಿ, ಅದನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ. 
ಕಾಂಗ್ರೆಸ್ ಸರ್ಕಾರ ಕೊಟ್ಟಿರೋದು ಟೆಂಪರರಿ ಗ್ಯಾರಂಟಿ. ಅವರು ಅಧಿಕಾರಕ್ಕೆ ಬರಲು ನೀಡಿದ ಗ್ಯಾರಂಟಿಗಳು ಚುನಾವಣಾ ಗ್ಯಾರೆಂಟಿಗಳು. ನಾವು ಪರ್ಮನೆಂಟ್ ಗ್ಯಾರಂಟಿ ಕೊಟ್ಟಿದ್ದೇವೆ. ರೈತರಿಗೆ ನೀರಾವರಿ , ಕುಡಿಯಲು ನೀರು, ಕೊಟ್ಟಿದ್ದೇವೆ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡುವುದು ಎಂದರು.
ನಾನು ಹಿಂದೆ 2018 ಮತ್ತು 2023 ರಲ್ಲಿ ನಮ್ಮ ತಂದೆಯವರ ಪರ ಪ್ರಚಾರ ಮಾಡಿದ್ದೆ ಎಲ್ಲಾ ಊರು, ಪಟ್ಟಣ ಓಡಾಡಿದ್ದೆ. ಈಗ ನನಗೆ ಆಶೀರ್ವಾದ ಮಾಡಿ ಅಂತ ಜನರನ್ನು ಕೇಳ್ತಿದಿನಿ ತಂದೆಯವರ ಮೂರ್ನಾಲ್ಕು ಕನಸಿದೆ, ಅದನ್ನು ನನಸು ಮಾಡುವೆ.
ಯುವಕನಾಗಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವೆ
ನಮ್ಮ ತಂದೆ ನ್ಯಾಷನಲ್ ಪಾರ್ಲಿಮೆಂಟರಿ ಕಮಿಟಿ ಸ್ಕಿಲ್ ಡೆವಲಪ್ಮೆಂಟ್ ಚೇರ್ಮನ್ ಇದ್ದಾರೆ. ಇಲ್ಲಿ ಇನ್ನಷ್ಟು ಕೈಗಾರಿಕೆ ತರುವ ಉದ್ದೇಶ ಇದೆ. ಎಲ್ಲಾ ಕಡೆ ಒಳ್ಳೆ ಪ್ರತಿಕ್ರಿಯೆ ಇದೆ. ಕಾರ್ಯಕರ್ತರು, ಎಲ್ಲಾ ಸಮುದಾಯದ ಜನ ಬೆಂಬಲ ವ್ಯಕ್ತ ಪಡಿಸಿದ್ದಾರೆ. ತಂದೆ ಕೆಲಸಗಳ ಬಗ್ಗೆ ಜನ ಹೇಳುವುದು ಕೇಳಿ ಹೆಮ್ಮೆ ಆಗಿದೆ. ನಮ್ಮ ತಂದೆಯ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವೆ ಎಂದು ಹೇಳಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						