
ಬೆಂಗಳೂರು ನಗರ ಜಿಲ್ಲೆ; ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಚುನಾವಣಾ ವೇಳಾಪಟ್ಟಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಗದೀಶ.ಜಿ ರವರು ಪ್ರಕಟಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ದೊಡ್ಡಜಾಲ, ಅರಕೆರೆ, ಚಿಕ್ಕಜಾಲ, ಕಸಘಟ್ಟಪುರ.
ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ.
ಆನೇಕಲ್ ತಾಲ್ಲೂಕಿನ ಬಳ್ಳೂರು, ಸಮಂದೂರು, ನೆರಿಗಾ ಮತ್ತು ನೆರಳೂರಿನಲ್ಲಿ ಉಪ ಚುನಾವಣೆಗಳು ನಡೆಯಲಿವೆ.
ಯಲಹಂಕ ತಾಲ್ಲೂಕಿನ ದೊಡ್ಡಜಾಲ ಗ್ರಾಮ ಪಂಚಾಯ್ತಿಯ ಮೀಸಗಾನಹಳ್ಳಿ- ಸಾಮಾನ್ಯ, ಅರಕೆರೆ ಗ್ರಾಮ ಪಂಚಾಯ್ತಿಯ ಶ್ಯಾನಭೋಗನಹಳ್ಳಿ- ಸಾಮಾನ್ಯ, ಚಿಕ್ಕಜಾಲ ಗ್ರಾಮ ಪಂಚಾಯ್ತಿಯ 04-ಚಿಕ್ಕಜಾಲ-ಸಾಮಾನ್ಯ, ಕಸಘಟ್ಟಪುರ ಗ್ರಾಮ ಪಂಚಾಯ್ತಿಯ ಕುಂಬಾರಹಳ್ಳಿ ಸಾಮಾನ್ಯ.
ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ ಗ್ರಾಮ ಪಂಚಾಯ್ತಿಯ ಬಂಡಾಪುರ-ಸಾಮಾನ್ಯ ಮಹಿಳೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯ್ತಿಯ 01-ತಾವರೆಕೆರ- ಸಾಮಾನ್ಯ, 06-ತಾವರೆಕೆರೆ ಸಾಮಾನ್ಯ, 07-ತಾವರೆಕೆರೆ- ಸಾಮಾನ್ಯ
ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯ್ತಿಯ 01-ಬಳ್ಳೂರು- ಸಾಮಾನ್ಯ, ಸಮಂದೂರು ಗ್ರಾಮ ಪಂಚಾಯ್ತಿಯ 01-ಸಮಂದೂರು- ಹಿಂದುಳಿದ ವರ್ಗ ‘ಅ’ (ಮಹಿಳೆ), ನೆರಿಗಾ ಗ್ರಾಮ ಪಂಚಾಯ್ತಿಯ 01-ನೆರಿಗಾ ಸಾಮಾನ್ಯ.
ನೆರಳೂರು ಗ್ರಾಮ ಪಂಚಾಯ್ತಿಯ 03-ಯಡವನಹಳ್ಳಿ–ಅನುಸೂಚಿತ ಜಾತಿ ರವರಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ನವೆಂಬರ್ 06 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳು ನಾಮಪತ್ರಗಳನ್ನು ನವೆಂಬರ್ 12 (ಮಂಗಳವಾರ) ರೊಳಗೆ ಸಲ್ಲಿಸಬಹುದು. ನವೆಂಬರ್ 13 ರಂದು (ಬುಧವಾರ) ನಾಮಪತ್ರಗಳನ್ನು ಪರಿಶೀಲಿಸಲಾಗುವುದು.
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 15 (ಶುಕ್ರವಾರ) ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ನವೆಂಬರ್ 23 ರಂದು (ಶನಿವಾರ) (ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರಿಗೆ) ಮತದಾನ ನಡೆಯಲಿದೆ.
ಮರು ಮತದಾನ ಅವಶ್ಯವಿದ್ದರೆ ನವೆಂಬರ್ 25 ರಂದು (ಸೋಮವಾರ) (ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರಿಗೆ) ಮತದಾನ ನಡೆಸಬಹುದು.
ನವೆಂಬರ್ 26 ರಂದು (ಮಂಗಳವಾರ) ಬೆಳಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						