
ಚಿಕ್ಕಬಳ್ಳಾಪುರ: ತಾಲೂಕಿನ ಮೋಟ್ಟೂರು ಬಳಿ ಕೊಳೆತ ಸ್ಥಿತಿಯಲ್ಲಿರುವ ಅಪರಿಚಿತ ಶವ (unidentified dead body spotted) ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು ಐವತ್ತು ವರ್ಷ ಮೇಲ್ಪಟ್ಟ ಪುರುಷನದಾಗಿದೆ.
ರಸ್ತೆ ಬದಿಯಲ್ಲಿ ಕೊಳತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಸಾಗಿಸಲಾರದಷ್ಟು ಕೊಳೆತು ಹೋಗಿದ್ದರಿಂದ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ಜೆಸಿಬಿ ತರಿಸಿ ಪಕ್ಕದಲ್ಲಿಯೇ ಗುಣಿ ತೆಗೆಸಿ ಸಮಾದಿ ಮಾಡಿಸಿದ್ದಾರೆಂದು ವರದಿಯಾಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						