ದೊಡ್ಡಬಳ್ಳಾಪುರ: ನಗರದ ಕಾರ್ಮಲ್ ಜ್ಯೋತಿ ಪ್ರೌಢ ಶಾಲೆಯಲ್ಲಿ ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ವಿ.ಸಿ.ಜ್ಯೋತಿ ಕುಮಾರ್, ವಿವಿಧ ಸಂಸ್ಥೆಗಳ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಏಳು ಸಂಸ್ಥೆಗಳನ್ನ 07 ನವಂಬರ್ 1950 ರಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿಲೀನಗೊಳಿಸಲಾಯಿತು. ಈ ಸವಿನೆನಪಿಗಾಗಿ ಇಂದು ದೇಶಾದ್ಯಂತ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ದೇಶಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಈ ಸಂಸ್ಥೆ ಸ್ವಾತಂತ್ರ್ಯ ಪೂರ್ವದಿಂದಲೂ ಅತಿವೃಷ್ಟಿ, ಅನಾವೃಷ್ಟಿ ಕಾಲದಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದೆ ಎಂದರು.
ಜಿಲ್ಲಾ ಸಂಘಟಕ ಬಿ.ವಿ.ಶಿವಕುಮಾರ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿಸಿ. ತಾಲ್ಲೂಕಿನ ಪ್ರತಿ ಶಾಲೆಯಲ್ಲೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಖೆಯನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಸಂಸ್ಥಾಪನ ದಿನದ ಪ್ರಯುಕ್ತ ರಾಷ್ಟ್ರೀಯ ಸಂಸ್ಥೆಯಿಂದ ದ್ವಜ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಸ್ಕೌಟ್ ಗೈಡ್ಸ್ ನ ಪ್ರಾರ್ಥನ ಗೀತೆ, ಸಂಸ್ಥಾಪಕರ ಕುರಿತು ಭಾಷಣ, ಗೀತ ಗಾಯನ ಹಾಗೂ ನಗರದ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಲಾಯಿತು,
ಈ ಸಂದರ್ಭದಲ್ಲಿ ತಾಲ್ಲೂಕ್ ಸಂಘಟಕ ನೀಮಕೊಪ್ಪಲ್, ಮುಖ್ಯ ಶಿಕ್ಷಕಿ ರೇಣುಕಾ.ಎಸ್., ಹಿರಿಯ ಶಿಕ್ಷಕ ದ್ವಾರಕನಾಥ್, ಸ್ಕೌಟ್ ಅಂಡ್ ಗೈಡ್ ಶಿಕ್ಷಕಿ ರಾಜೇಶ್ವರಿ.ಯು., ಸುಝಾನ, ರೂಥಲ್ ಮತ್ತಿತರರಿದ್ದರು.