ಚನ್ನಪಟ್ಟಣ: ರಾಜ್ಯದ ಮೂರು ಕ್ಷೇತ್ರಗಳ ಉಪಸಮರ ಕಾವು ದಿನೇ ದಿನೇ ತೀವ್ರಗೊಂಡಿದ್ದು, ಅದರಲ್ಲಿಯೂ ಚನ್ನಪಟ್ಟಣ ಉಪಚುನಾವಣೆ (channapatna by election) ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಕಣವಾಗಿದೆ.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಮತಯಾಚನೆಗೆ ಹಾಲಿ ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಕೇಂದ್ರ, ರಾಜ್ಯದ ಸಚಿವರು ಸೇರಿದಂತೆ ಗಟಾನುಗಟಿ ಮುಖಂಡರು ತೊಡಗಿದ್ದಾರೆ.
ಅಂತೆಯೇ ಇಂದು ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ದೊಡ್ಡಬಳ್ಳಾಪುರ ತಾಲೂಕಿನ ಜೆಡಿಎಸ್-ಬಿಜೆಪಿ ಮುಖಂಡರು ತೆರಳಿ ಮತಯಾಚನೆ ಮಾಡಿದರು.
ಗ್ರಾಮದ ಮಹಿಳೆಯರು ನಿಖಿಲ್ ಅವರಿಗೆ ಅರತಿ ಬೆಳಗಿ ಬರಮಾಡಿಕೊಂಡರೆ, ಜನರಿಗೆ ಎರಡೂ ಕೈ ಜೋಡಿಸುತ್ತಾ ಒಬ್ಬ ಯುವಕನಿಗೆ ಆಶೀರ್ವಾದ ಮಾಡಿ ಎಂದು ನಿಖಿಲ್ ಮನವಿ ಮಾಡಿದರು.
ಈ ಪ್ರಚಾರ ಕಾರ್ಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು ವಿಶೇಷ.
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಜೆಡಿಎಸ್ ಯುವ ಮುಖಂಡರಾದ ಎ.ಸಿ.ಹರೀಶ್, ಕೆಂಪರಾಜು, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಶ್ರೀಧರ್, ನಾಗರಾಜ್ ಅವರಯ ನಿಖಿಲ್ ಅವರಿಗೆ ಮತ ನೀಡುವ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.