ದೊಡ್ಡಬಳ್ಳಾಪುರ; ತಾಲೂಕಿನ ಸುತ್ತಹಳ್ಳಿ ತಾಂಡ ಗ್ರಾಮದಲ್ಲಿ ನಡೆಯುತ್ತಿದ್ದ ಮದ್ಯ ಅಕ್ರಮ ಮಾರಾಟ ಖಂಡಿಸಿ ಗ್ರಾಮಸ್ಥರು ನಡೆಸಿರುವ ಪ್ರತಿಭಟನೆ ತಾಲೂಕಿನಾಧ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಬಕಾರಿ (excise) ಇಲಾಖೆ ಅಧಿಕಾರಿಗಳು ಸುತ್ತಹಳ್ಳಿ ತಾಂಡ ಗ್ರಾಮದ ಅಂಗಡಿಗಳ ಮೇಲೆ ದಾಳಿ (excise inspector raid) ನಡೆಸಿದ್ದು, ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ ಇನ್ಸ್ಪೆಕ್ಟರ್ (excise inspector) ರಾಘವೇಂದ್ರ .ಬಿ.ವಿ., ಅವರ ನೇತೃತ್ವದಲ್ಲಿ ಸುತ್ತಹಳ್ಳಿ ತಾಂಡಾದಲ್ಲಿನ ಚಿಲ್ಲರೆ ಅಂಗಡಿಗಳ ಮೇಲೆ ದಾಳಿ (excise inspector raid) ನಡೆಸಿರುವ ಅಧಿಕಾರಿಗಳು, ಶೋಧನೆ ಮಾಡಿದ್ದಾರೆ. ಆದರೆ ಈ ವೇಳೆ ಯಾವುದೇ ಅಬಕಾರಿ ವಸ್ತುಗಳು ಪತ್ತೆಯಾಗಿಲ್ಲ.
ಈ ವೇಳೆ ಮದ್ಯ ಅಕ್ರಮ ಮಾರಾಟದ ಕುರಿತು ಅಂಗಡಿ ಮಾಲೀಕರಿಗೆ ಅಬಕಾರಿ ಕಾನೂನಿನ ಅರಿವು ಮೂಡಿಸಿದ ಅಧಿಕಾರಿಗಳು, ನಿಯಮ ಮೀರಿ ಮದ್ಯ ಮಾರಾಟ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಅಬಕಾರಿ ಇಲಾಖೆ ಸಿಬ್ಬಂದಿಗಳಾದ ವಿನಯ್.ಎಂ.ಆರ್., ಚಿಕ್ಕಮುತ್ತಯ್ಯ, ಹನುಮಂತರಾಜು ಇದ್ದರು.