ಬುಧವಾರ, ನವೆಂಬರ್ 13, 2024, ದೈನಂದಿನ ರಾಶಿ ಭವಿಷ್ಯ / astrology predictions
ಮೇಷ ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ವಾಹನ ಚಾಲನೆ ವೇಳೆ ಎಚ್ಚರವಿರಲಿ.
ವೃಷಭ ರಾಶಿ: ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳ ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. ಹೊಸ ವಾಹನ ಖರೀದಿ ನಿಮ್ಮ ಉದ್ಯೋಗಕ್ಕೆ ಸಹಕಾರಿ ಯಾಗಲಿದೆ. ಸಮಾಧಾನ.
ಮಿಥುನ ರಾಶಿ: ರೈತರಿಗೆ ಇಂದು ಹೆಚ್ಚಿನ ವ್ಯಾಪಾರವಾಗಲಿದೆ.ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಕ್ತಿ ಹೆಚ್ಚಿಸಿಕೊಂಡು ನಿಮ್ಮ ಮೇಲೆ ನಿಯಂತ್ರಣ ಹೊಂದಿ. ನಿಮ್ಮ ಮೇಲೆ ನಿಮಗೆ ಭರವಸೆ ಇಡಿ. ಇಡೀ ಜನರ ಸಹಕಾರ ದೊರೆಯುತ್ತದೆ.
ಕಟಕ ರಾಶಿ: ವೈಯಕ್ತಿಕ ಜೀವನಕ್ಕೂ ಕೊಂಚ ಸಮಯ ನೀಡಿ. ಬಹುಮಾನ ಗಳಿಸಲಾಗದು ಎಂಬ ಬೇಸರ ಬೇಡ. ಸ್ಪರ್ಧೆಯಲ್ಲಿ ಭಾಗವಹಿಸಿ.
ಸಿಂಹ ರಾಶಿ: ಪ್ರಶಸ್ತಿ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ನಿಮ್ಮ ಕೀರ್ತಿ ಪಸರಿಸಲಿದೆ. ಸಂವೇದನಾಶೀಲ ಸಂಗತಿಯಾಗಿರುವ ಸಂದರ್ಭ ಗಳು ಎದುರಾಗಬಹುದು.
ಕನ್ಯಾ ರಾಶಿ: ಯಾರದ್ದೋ ಮಾತು ಕೇಳಿ ನಿಮ್ಮ ಮೂಲ್ಯ ಸಮಯ, ಹಣ ವ್ಯರ್ಥ ಮಾಡಿಕೊಳ್ಳದಿರಿ. ಎಚ್ಚರಿಕೆ. ಇತರರ ಅಗತ್ಯಗಳನ್ನು ಪೂರೈಸಲಿದ್ದೀರಿ. ಎಲ್ಲರನ್ನೂ ಎಲ್ಲಾ ವಿಚಾರದಲ್ಲಿ ತೃಪ್ತಿಪಡಿಸುವುದು ಅಸಾಧ್ಯ. ಬೇಸರ ಬೇಡ. ಮುನ್ನಡೆಯಿರಿ.
ತುಲಾ ರಾಶಿ: ನಿಮ್ಮ ಕಾರ್ಯ ವೈಖರಿಗೆ ಮೆಚ್ಚಿ ಹೆಚ್ಚಿನ ಪುರಸ್ಕಾರ ದೊರೆಯಲಿದೆ. ಶುಭದಿನ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮಾತು ಗಳನ್ನು ವಿವರಿಸಲು ಸ್ವಲ್ಪ ಕಷ್ಟವಾಗಬಹುದು.
ವೃಶ್ಚಿಕ ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ಹೊಸ ಆಲೋಚ ನೆಗಳನ್ನು ಪರೀಕ್ಷೆಗೆ ಒಳಪಡಿಸ ಲು ಸೂಕ್ತ ಸಮಯ.
ಧನಸ್ಸು ರಾಶಿ: ಹಲವು ದಿನಗಳನ್ನು ಮಾಡಬೇಕು ಎಂಬ ಕೆಲಸ ಯಶಸ್ವಿಯಾಗಿ ಮುಗಿಯಲಿದೆ. ಶುಭದಿನ.
ಮಕರ ರಾಶಿ: ಹೊಸ ಪ್ರದೇಶಕ್ಕೆ ಹೋಗುವ ಅವಕಾಶವೊಂದು ನಿಮಗೆ ಒದಗಿ ಬರಲಿದೆ. ಪ್ರೀತಿಪಾತ್ರರ ಜೊತೆ ವಾದಗಳನ್ನು ಉಂಟುಮಾಡುವ ವಿವಾದಾತ್ಮಕ ಸಮಸ್ಯೆಗಳನ್ನು ನೀವು ತಪ್ಪಿಸಬೇಕು.
ಕುಂಭ ರಾಶಿ: ದಿಢೀರ್ ಧನಲಾಭದಿಂದ ಹಳೆಯ ಸಾಲ ತೀರಲಿದ್ದು, ಹೊಸ ಯೋಜನೆ ರೂಪಿಸುವಿರಿ. ಯಾರೋ ಮಾಡಿದ ತಪ್ಪಿಗೆ ನಿಮಗೆ ಸಣ್ಣದೊಂದು ಶಿಕ್ಷೆ ಉಂಟಾಗುವ ಸಾಧ್ಯತೆ.
ಮೀನ ರಾಶಿ: ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಕೆಲಸವು ಯೋಗ್ಯವಾಗಿದೆ ಎಂದೆನಿಸಿದರೆ, ಅದನ್ನು ನೀವೇ ಮಾಡುವುದು ಉತ್ತಮವಾಗಿರುತ್ತದೆ.
ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM