ಜಾರ್ಖಂಡ್: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೆಲಿಕಾಪ್ಟರ್ ಅನ್ನು ಜಾರ್ಖಂಡ್‌ನ ಗೊಡ್ಡಾದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅನುಮತಿ ನೀಡದೆ ನಿಲ್ಲಿಸಿರುವ ಘಟನೆ ನಡೆದಿದೆ.
ಎಟಿಸಿಯಿಂದ ತೆರವು ಮಾಡದ ಕಾರಣ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಅನ್ನು ಗೊಡ್ಡಾದಲ್ಲಿ ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದರು.
HUGE BREAKING 🚨⚡
— Ankit Mayank (@mr_mayank) November 15, 2024
LoP Rahul Gandhi’s helicopter denied permission from flying in Jharkhand
It’s been more than 2 hours but no permission granted yet 🚨
Why is Modi & BJP so scared? pic.twitter.com/WJltLvaB5p
ಪ್ರಧಾನಿ ಮೋದಿ ಭೇಟಿಯಿಂದಾಗಿ ರಾಹುಲ್ ಹೆಲಿಕಾಪ್ಟರ್‌ಗೆ ಅನುಮತಿ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಪರ ಮತ ಯಾಚಿಸಲು ರಾಹುಲ್ ಗಾಂಧಿ ಶುಕ್ರವಾರ ಮಹಾಗಾಮಾಕ್ಕೆ ಬಂದಿದ್ದರು. ಕಾರ್ಯಕ್ರಮದ ಮುಕ್ತಾಯದ ನಂತರ ಅವರು ಹಿಂತಿರುಗಬೇಕಾಯಿತು. ಆದರೆ ಎಟಿಸಿಯಿಂದ ಅನುಮತಿ ಇಲ್ಲದ ಕಾರಣ ಅವರ ಹೆಲಿಕಾಪ್ಟರ್ ಹಾರಾಟವನ್ನು ನಿಲ್ಲಿಸಲಾಯಿತು.
ಈ ಘಟನೆ ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ರಾಹುಲ್ ಗಾಂಧಿ ಎಂದರೆ ಮೋದಿ ಮತ್ತು ಬಿಜೆಪಿಗೆ ಯಾಕೆ ಇಷ್ಟೊಂದು ಭಯ ಎಂದು ಪ್ರಶ್ನಿಸಿದ್ದಾರೆ.