
ದೊಡ್ಡಬಳ್ಳಾಪುರ: ರಸ್ತೆ ಬದಿಯಲ್ಲಿ ಒಣಗಿದ ಎರಡು ಮರಗಳು ಬಲಿಗಾಗಿ ಕಾದು ನಿಂತಿದ್ದು, (Doddaballapura) ವಾಹನ ಸವಾರರು ಆತಂಕದಲ್ಲಿಯೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ತಾಲೂಕಿನ ಹೊಸಹಳ್ಳಿ- ಜಕ್ಕೇನಹಳ್ಳಿ ನಡುವಿನ ರಸ್ತೆ ಬದಿಯಲ್ಲಿ ತಪಸಿಮರ ಹಾಗೂ ಮುಗುಳಿ ಮರ ಒಣಗಿ ರಸ್ತೆಗೆ ಬೀಳುವ ಹಂತಕ್ಕೆ ತಲುಪಿದೆ.
ದೊಡ್ಡಬಳ್ಳಾಪುರ – ಆರೂಢಿ, ಗೊರವನಹಳ್ಳಿ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನ ಸವಾರರು ಮೇಲೆ ಮರಗಳು ಬೀಳುವ ಆತಂಕದಲ್ಲಿಯೇ ಸಂಚರಿಸುತ್ತಿದ್ದಾರೆ.
ಇನ್ನೂ ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಮೂರ್ನಾಲ್ಕು ತಿಂಗಳು ಕಳೆದರು ಒಣಗಿದ ಮರಗಳನ್ನು ತೆರವು ಮಾಡದೆ ವಾಹನ ಸವಾರರ ಮೇಲೆ ಬೀಳಲೆಂದು ಕಾಯುತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಆರೂಢಿ ಗ್ರಾಮದ ಯುವ ಮುಖಂಡರಾದ ಕೆಂಪರಾಜು, ನಟರಾಜು, ಎಸಿ ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಣಗಿದ ಮರಗಳನ್ನು ತೆರವು ಮಾಡಿ ಸಂಭವಿಸಬಹುದಾದ ದುರ್ಘಟನೆಯನ್ನು ತಡೆಯುವ ಹೊಣೆಗಾರಿಕೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲಿದ್ದು, ತ್ವರಿತ ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						