ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಮತದಾರರಿಗೆ ನೀಡಿದ ಆಮೀಷದಿಂದಾಗಿ ಕರ್ನಾಟಕದ ಎಲ್ಲಾ ಕ್ಷೇತ್ರದ ಮತದಾರರು ನಮ್ MLA ಸಾಯ್ಲಿ ಅಂತ ಬಯಸುವಂತಾಗಿದೆ ಎಂದು ಹಿರಿಯ ರಾಜಕಾರಣಿ ಸಿ.ಎಂ.ಇಬ್ರಾಹಿಂ (cm ibrahim news) ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿಖಿಲ್ ಕುಮಾರಸ್ವಾಮಿ ಪ್ರಸ್ಮೀಟ್ ನೋಡಿ ಅಯ್ಯೋ ಅನಿಸಿತು. ಯೋಗೇಶ್ ಇಂಡಿಪೆಂಡೆಂಟ್ ಆಗಿ ನಿಂತಿದ್ದರು ಗೆಲ್ತಿದ್ದ..
ಲೋಕಲ್ ಗಿರಾಕಿ 20,30 ವರ್ಷದಿಂದ ಕೆಲಸ ಮಾಡ್ತಾ ಇದ್ದಾನೆ. ನಿಖಿಲ್ ಕುಮಾರಸ್ವಾಮಿ ಒಕ್ಕಲಿಗ ಜನಾಂಗದಲ್ಲಿ ಎಷ್ಟು ಜನಾನುರಾಗಿ ಇದ್ದಾರೋ, ಯೋಗೇಶ್ವರ್ ಕೂಡ ಅಷ್ಟೇ ಜನಾನುರಾಗಿ ಇದ್ದಾರೆ. ಆದ್ದರಿಂದ ಈ ಜಾತಿವಾದದ ರಾಜಕಾರಣ ಬಿಟ್ಟು, ಸರಿಯಾದ ಸನ್ಮಾರ್ಗದಲ್ಲಿ ಬಂದರೆ ಈಗಲೂ ಭವಿಷ್ಯ ಇದೆ.
ನಿಮಗಿರುವ ಬಂಡವಾಳ ನಿಮ್ ಅಜ್ಜ, ನಿಮ್ಮ ಅಜ್ಜರಿಗಿದ್ದ ಬಂಡವಾಳ ಸಿದ್ದಾಂತ. ಆ ಸಿದ್ದಾಂತವನ್ನು ಬಲಿಕೊಟ್ಟು ಮೇಲೆ ನಿಮ್ ತಾತನ 32ಕಡೆ ಕರ್ಕೊಂಡ್ ಹೋಗಿ ಭಾಷಣ ಮಾಡಿಸಿದ್ದೀರಿ. ನೀನು, ನಿಮ್ ಅಪ್ಪ, ನಿಮ್ ಅವ್ವ ಎಲ್ರೂ..
ದುಡ್ ನೀವು ಖರ್ಚು ಮಾಡುದ್ರೀ ಅವರು ಮಾಡಿದ್ದಾರೆ. ಇದರಿಂದ ಏನಾಯ್ತು ಅಂದರೆ ಕರ್ನಾಟಕದ ಪ್ರತಿ ಕ್ಷೇತ್ರದ ಜನ ಪ್ರಾರ್ಥನೆ ಮಾಡ್ತಾವ್ರೆ ಪರಮಾತ್ಮ ನಮ್ MLAಗೆ ಸಾವು ಕೊಡು.. ಇವ ಸತ್ ಬೈ ಎಲೆಕ್ಷನ್ ಬಂದರೆ ನಮಗೂ ದುಡ್ ಸಿಗುತ್ತೆ ಅಂತ..
ಒಂದು ಓಟಿಗೆ ಎರಡು ಸಾವಿರ, ಐದು ಸಾವಿರ, ಅಕ್ಕಿ ಮೂಟೆ, ಬೆಳ್ಳಿ ಬಟ್ಟಲು, ಮೂಗುತ್ತಿ.. ಅವರು ಸ್ತ್ರೀ ಭಾಗ್ಯ ಕೊಟ್ರು, ನೀವ್ ಎಲ್ಲಾ ಭಾಗ್ಯ ಕೊಟ್ರಿ ಗಂಡ ಒಂದ್ ಬಿಟ್ಟು.. ಆದರೆ ರಿಸೆಲ್ಟೂ..? ಸಾವಿರ ಎರಡು ಸಾವಿರ ಅಲ್ಲ, ಇಪ್ಪತ್ತೈದು ಸಾವಿರ ಎಂದು ಲೇವಡಿ ಮಾಡಿದರು.
ಇನ್ನೂ ಆ ಒಂದು ಸಮುದಾಯದ ಮತಗಳು ಸಿಗದ ಕಾರಣಕ್ಕೆ ನಾನು ಚನ್ನಪಟ್ಟಣದಲ್ಲಿ ಸೋಲು ಅನುಭವಿಸಿದೆ. ನಮ್ಮ ಅವಶ್ಯಕತೆ ಆ ಸಮುದಾಯಕ್ಕೆ ಇಲ್ಲ: ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂಬ ಎನ್‌ಡಿಎ ಪರಾಭವ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಸಿಎಂ ಇಬ್ರಾಹಿಂ, ಆಗ ನೀನಿನ್ನೂ ಹುಟ್ಟಿರಲ್ಲಿಲ್ಲ ಅನ್ಸುತೆ, ಅಂದು ನಿಮ್ಮ ಅಜ್ಜ ಹೆಚ್.ಡಿ.ದೇವೇಗೌಡ ಅವರು ಸಾಬ್ರು ಮತಗಳಿಂದಲೇ ಮುಖ್ಯಮಂತ್ರಿ ಆಗಿದ್ದರು. ಮುಂದೆ ಪ್ರಧಾನಿಯೂ ಆದ್ರು ಎಂದು ತಿರುಗೇಟು ನೀಡಿದರು.
ಅಪ್ಪಾ.ನಿಖಿಲಾ.. ಚನ್ನಪಟ್ಟಣದಲ್ಲಿ ಎಷ್ಟಿದ್ದಾರೆ ಅಲ್ಪ ಸಂಖ್ಯಾತರ ಮತಗಳು ಎಂದು ಪ್ರಶ್ನಿಸಿರುವ ಇಬ್ರಾಹಿಂ, 25 ಸಾವಿರ ಮತಗಳ ಅಂತರದಿಂದ ಯೋಗೇಶ್ವರ್ 1 ಲಕ್ಷದ 5 ಸಾವಿರ ಮತಗಳನ್ನು ಪಡೆದು ಗೆದ್ದಿದ್ದಾರೆ. 85 ಸಾವಿರ ಮತಗಳು ಯಾರದ್ದು ಹೇಳು? ಅದರಲ್ಲಿ ಒಕ್ಕಲಿಗರು, ದಲಿತರು, ಅಹಿಂದ ಮತಗಳಿಲ್ವಾ ಎಂದು ಕೇಳಿದ್ದಾರೆ.
ಇನ್ನೂ ಯಾಕೆ ನೀವು ನಿಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳೋಕೆ ಮುಸ್ಲಿಮರನ್ನು ಅಪಮಾನ ಮಾಡುತ್ತೀರಿ. ನಿಮ್ಮದೌರ್ಬಲ್ಯದಿಂದಲೇ ನೀವು ಸೋತಿದ್ದೀರಿ. ನಿಮ್ಮಪ್ಪಗೆ ನಮ್ಮವರು ವೋಟ್ ಕೊಟ್ಟಿಲ್ವಾ? ಮಗಾ ನಿಖಿಲಾ… ನಿಮ್ಮಜ್ಜನಿಗೆ 32 ಸಾವಿರ ಜನ ಸಾಬ್ರು ರಾಮನಗರದಲ್ಲಿ ಮತ ನೀಡಿದ್ದಕ್ಕೇ ಅಂದು ಅವರು ಸಿಎಂ ಆದ್ರು ಎಂದು ಮಾತಲ್ಲೇ ಇಬ್ರಾಹಿಂ ತಿವಿದಿದ್ದಾರೆ.