ಹೈದರಾಬಾದ್: ಕೌಟುಂಬಿಕ ಕಲಹದ ಕುರಿತು ಪ್ರತಿಕ್ರಿಯೆ ಕೇಳಲು ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ತೆಲುಗು ನಟ ಮೋಹನ್ ಬಾಬು ವಿರುದ್ಧ ಪ್ರಕರಣ (FIR) ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟರಾದ ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮನೋಜ್ ನಡುವಿನ ವಿವಾದದ ಬಗ್ಗೆ ವರದಿ ಮಾಡಲು ಜಲಪಲ್ಲಿ ನಿವಾಸಕ್ಕೆ ಭೇಟಿ ನೀಡಿದಾಗ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಮೋಹನ್ ಬಾಬು ಹಾಗೂ ಹಿರಿಯ ಮಗ ವಿಷ್ಣು ಪತ್ರಕರ್ತರ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದಾರೆ ಎಂದು ಪತ್ರಕರ್ತರೊಬ್ಬರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
మీడియా పై దాడికి పాల్పడ్డ మోహన్ బాబు pic.twitter.com/jP88QpZFmp
— Telugu Scribe (@TeluguScribe) December 10, 2024
‘ನಟ ಮೋಹನ್ ಬಾಬು ಅವರು ನಮ್ಮ ಮೈಕ್ರೋಫೋನ್ ಅನ್ನು ಕಿತ್ತುಕೊಂಡು, ಅವಾಚ್ಯ ಪದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಮಾಧ್ಯಮವೊಂದರ ಛಾಯಾಗ್ರಾಹಕರು’ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹನ್ ಬಾಬು ಅವರ ಹಿರಿಯ ಪುತ್ರ ಮಂಚು ವಿಷ್ಣು, ನಮ್ಮ ವಿಷಯದಲ್ಲಿ ಕೆಲವರು ಮಾಧ್ಯಮದ ಮಿತಿಯನ್ನು ದಾಟಿದ್ದಾರೆ. ಮಾಧ್ಯಮದ ವ್ಯಕ್ತಿಗಳಿಗೂ ತಂದೆ, ಸಹೋದರರು ಇದ್ದಾರೆ.. ಯಾರ ಕುಟುಂಬವೂ ಪರಿಪೂರ್ಣವಲ್ಲ. ಪ್ರತಿ ಮನೆಯಲ್ಲೂ ಸಂಘರ್ಷಗಳಿವೆ.
మా విషయంలో కొంత మంది మీడియా లిమిట్స్ క్రాస్ చేశారు
— Telugu Scribe (@TeluguScribe) December 11, 2024
మీడియా వ్యక్తులకు కూడా తండ్రి, అన్నదమ్ములు ఉంటారు.. ఎవరి కుటుంబం పర్ఫెక్ట్గా ఉండదు
ప్రతి ఇంట్లో గొడవలు ఉంటాయి
మోహన్ బాబు మీడియాకు రెస్పెక్ట్ ఇస్తారు.. మూడు తరాలుగా మోహన్ బాబు గురించి అందరికి తెలుసు – మంచు విష్ణు pic.twitter.com/UlOPbjdUwe
ಮೋಹನ್ ಬಾಬು ಮಾಧ್ಯಮಗಳಿಗೆ ಗೌರವ ಕೊಡುತ್ತಾರೆ.. ಮೋಹನ್ ಬಾಬು ಬಗ್ಗೆ ಮೂರು ತಲೆಮಾರುಗಳಿಂದ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ