ಹರಿತಲೇಖನಿ ದಿನಕ್ಕೊಂದು ಕಥೆ: ಜಾಣ ರಾಜ| Daily story

Daily story: ಮರ ಕಡಿದು ಮಾರಾಟ ಮಾಡಿ ಬದುಕನ್ನು ಸಾಗಿಸುತ್ತಿದ್ದ ರಾಮು. ಪ್ರತಿ ದಿನವೂ ಕಾಡಿಗೆ ಹೋಗಿ ಮರ ಕಡಿದು ಎಷ್ಟು ಸಾಧ್ಯವೋ ಅಷ್ಟನ್ನು ಹೊತ್ತು ನಡೆದು ಪೇಟೆಯಲ್ಲೆಲ್ಲ ಮಾರಾಟ ಮಾಡುತ್ತಿದ್ದನು. ಬಂದ ಹಣದಿಂದ ಸುಖವಾದ ಜೀವನ ನಡೆಸುತ್ತಿದ್ದನು.

ನಿತ್ಯದಂತೆ ಅಂದೂ ಕಾಡಿಗೆ ಹೋಗಿ ಮರ ಕಡಿದು ಕಟ್ಟಿಗೆ ಮಾಡಿ ತಲೆಯಲ್ಲಿ ಹೊತ್ತುಕೊಂಡು ಬೀದಿಬೀದಿಗಳಲ್ಲೂ ಸುತ್ತಾಡಿದ. ಅಂದು ಯಾರೂ ಕಟ್ಟಿಗೆಯನ್ನು ಕೊಳ್ಳಲಿಲ್ಲ. ಹಸಿವಿನಿಂದ ಅವನು ಕಂಗಾಲಾದನು. ನಡೆಯುವುದೇ ಕಷ್ಟವೆಂಬ ಸ್ಥಿತಿ ಬಂದಿತು.

ಈ ಕಟ್ಟಿಗೆ ಮಾರಾಟವಾಗದಿದ್ದರೂ ಚಿಂತೆ ಇಲ್ಲ. ಇವನ್ನು ಅರಸನಿಗೆ ಕಾಣಿಕೆಯಾಗಿ ಒಪ್ಪಿಸಬೇಕು ಎಂದು ವಿಚಾರಿಸಿ ನಿಧಾನವಾಗಿ ಅರಮನೆಯತ್ತ ಹೆಜ್ಜೆ ಹಾಕಿದನು. ಅವನು ಅರಮನೆ ತಲುಪುವಷ್ಟರಲ್ಲಿಯೇ ರಾತ್ರಿಯಾಗಿತ್ತು. ಆದ್ದರಿಂದ ಅರಮನೆಯ ಬಾಗಿಲು ಮುಚ್ಚಿಕೊಂಡಿತ್ತು.

ಇನ್ನೇನು ಮಾಡುವುದು? ಒಂದಡಿ ಮುಂದಿಡುವುದೂ ಅಸಾಧ್ಯವಾಗಿತ್ತು. ಕಟ್ಟಿಗೆಯನ್ನು ಕೆಳಗಿಳಿಸಿಟ್ಟು ರಾಮು ಅರಮನೆಯ ಬಾಗಿಲು ಬಳಿಯಲ್ಲಿ ಮಲಗಿದನು. ಹಸಿವು, ನೀರಡಿಕೆ, ದಣಿವಿನಿಂದಾಗಿ ಮಲಗಿದ ಕೂಡಲೇ ನಿದ್ದೆ ಆವರಿಸಿತು.

ಆ ರಾಜ್ಯದ ಮಹಾರಾಜನಾದ ಉದಯವರ್ಮ ಮುದುಕನಾಗಿದ್ದನು. ಆತನಿಗೆ ಮಕ್ಕಳೇ ಇರಲಿಲ್ಲ. ತನ್ನ ಕಾಲಾನಂತರ ರಾಜ್ಯಭಾರವನ್ನು ಯಾರ ಕೈಗೆ ಒಪ್ಪಿಸಬೇಕೆಂಬ ಆಲೋಚನೆಯಲ್ಲಿ ಮುಳುಗಿ ಆತ ದಿನೇದಿನೇ ಸೊರಗುತ್ತಿದ್ದನು. ಅಂದು ರಾತ್ರಿ ನಿದ್ರೆಯಲ್ಲಿ ಉದಯವರ್ಮನಿಗೆ ಒಂದು ಶಕ್ತಿ ‘ಉದಯವರ್ಮ. ನಾಳೆ ಬೆಳಿಗ್ಗೆ ಅರಮನೆಯ ಬಾಗಿಲು ತೆರೆಯುವಾಗ ಮೊದಲು ಕಾಣುವ ವ್ಯಕ್ತಿಯನ್ನು ನೀನು ಮುಂದಿನ ಅರಸನನ್ನಾಗಿ ನೇಮಿಸು’ ಎಂದು ಹೇಳಿತು.

ಮಹಾರಾಜನಿಗೆ ಆ ಕ್ಷಣ ಎಚ್ಚರವಾಯಿತು. ಆ ಕೂಡಲೇ ಪ್ರಧಾನಮಂತ್ರಿಯನ್ನು ಕರೆದು ‘ನಾಳೆ ಬೆಳಿಗ್ಗೆ ನನ್ನ ಎದುರಿನಲ್ಲೇ ಅರಮನೆಯ ಬಾಗಿಲು ತೆರೆಯಬೇಕು’ ಎಂದು ಹೇಳಿದನು. ಪ್ರಧಾನಮಂತ್ರಿಗೆ ಅರ್ಥವಾಗಲಿಲ್ಲ. ಆದರೆ ರಾಜಾಜ್ಞೆಯಲ್ಲವೇ? ಹೇಳಿದಂತೆ ಕೇಳದಿರಲು ಸಾಧ್ಯವೇ?

ಹೊತ್ತು ಮೂಡಿತು. ಮಹಾರಾಜ ಹಾಗೂ ಮಂತ್ರಿಗಳ ಸಮ್ಮುಖದಲ್ಲಿ ಅರಮನೆಯ ಬಾಗಿಲನ್ನು ತೆರೆಯಲಾಯಿತು. ರಾಮು ಬಾಗಿಲು ತೆರೆಯುವುದನ್ನೇ ಕಾದು ಅಲ್ಲಿ ನಿಂತಿದ್ದನು. ಅರಸ ಓಡಿ ಹೋಗಿ ಅವನನ್ನು ಹಿಡಿದೆಬ್ಬಿಸಿ ‘ಇಂದಿನಿಂದ ನೀನು ಈ ರಾಜ್ಯದ ಅರಸ. ಇಂದಿನಿಂದ ನೀನು ಕಟ್ಟಿಗೆ ಮಾರುವುದನ್ನು ಬಿಟ್ಟು ಬಿಡು’ ಎಂದು ಹೇಳಿದನು.

ರಾಮುವಿಗೆ ಮೃಷ್ಟಾನ್ನ ಭೋಜನವನ್ನು ನೀಡಲಾಯಿತು. ನಂತರ ಸಿಂಹಾಸನದಲ್ಲಿ ಕೂರಿಸಿ ಬಂಗಾರದ ಕೀರಿಟವನ್ನು ತೊಡಿಸಲಾಯಿತು. ಅರಮನೆಯ ಆಸ್ಥಾನ ಪುರೋಹಿತನು ‘ತಾವೀಗ ಈ ರಾಜ್ಯದ ಮಹಾರಾಜರು, ಮಂತ್ರಿಗಳನ್ನು ಹಾಗೂ ಸಭೆಯ ಇತರರನ್ನು. ಈ ರಾಜ್ಯದ ಜನರನ್ನು ತಾವು ಹರಸಬೇಕು’ ಎಂದನು.

ಹೊಸ ಅರಸನು ಬಲಗೈ ಚಾಚಿ ಪ್ರಧಾನಮಂತ್ರಿಯನ್ನೂ, ಎಡಗೈ ಚಾಚಿ ಸೇನಾನಾಯಕನನ್ನೂ ಕರೆದ. ಅವರು ಬಳಿ ಬಂದು ನಿಂತಾಗ ‘ಈ ಸಿಂಹಾಸನದಿಂದ ಮೇಲೇಳಲು ನನಗೊಮ್ಮೆ ನೆರವಾಗಿರಿ’ ಎಂದನು.

ಅವರಿಬ್ಬರೂ ತಮ್ಮ ಮನದಲ್ಲಿ ನಿನ್ನೆತನಕ ಕಟ್ಟಿಗೆ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದವನು ಇಂದು ಹೇಳುತ್ತಾನೆ. ಕುಳಿತಲ್ಲಿಂದ ಮೇಲೆಳಲು ತನ್ನ ನೆರವಿಗೆ ಬನ್ನಿ ಅಂತ. ಅರಸನಾದ ಕೂಡಲೇ ಆತನಲ್ಲಿ ಹೇಗೆ ಮಾರ್ಪಾಟು ಬಂದುಬಿಟ್ಟಿತು ನೋಡಿ! ಇದೆಂತಹ ಅಹಂಕಾರ? ಎಂದುಕೊಳ್ಳುತ್ತಿದ್ದರು.

ಅವರು ಯೋಚಿಸುತ್ತಿರುವುದೇನೆಂಬುದು ರಾಮುವಿಗೆ ಅರ್ಥವಾಯಿತು. ‘ನೀವು ಮನದಲ್ಲಿ ಅಂದು ಕೊಳ್ಳುತ್ತಿರುವುದೇನೆಂಬುದನ್ನು ನಾನು ಊಹಿಸಿಕೊಳ್ಳಬಲ್ಲೆ. ನಿಮ್ಮ ಊಹೆ ನಿಜವು ಹೌದು. ಕಟ್ಟಿಗೆ ಎಷ್ಟೇ ಭಾರವಿದ್ದರೂ ನನ್ನಿಂದ ಹೊತ್ತು ನಡೆಯುವುದು ಸಾಧ್ಯ. ಆದರೆ ಇದು ರಾಜ್ಯದ ಭಾರ. ಈ ರಾಜ್ಯದ ಜನರ ಭಾರ. ನಿಮ್ಮ ನೆರವಿಲ್ಲದೆ ಈ ಭಾರ ಹೊತ್ತು ನಡೆಯುವುದು ನನ್ನಿಂದ ಸಾಧ್ಯವಿಲ್ಲ’ ಎಂದನು ಹೊಸ ರಾಜ

ಹೊಸ ಅರಸನ ಈ ಮಾತುಗಳನ್ನು ಕೇಳಿ ಎಲ್ಲರೂ ಸಂತೋಷಪಟ್ಟರು. ನಮಗೊಬ್ಬ ಜಾಣರಾಜ ದೊರೆತನೆಂದು ಹಿಗ್ಗಿದರು.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!