ಬೆಂಗಳೂರು: ಬಹುಭಾಷಾ ನಟ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ (DhanDhnyaDhan) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದ್ದಾರೆ.
ಧನಂಜಯ್ ಮತ್ತು ಡಾ.ಧನ್ಯತಾ (DhanDhnyaDhan) ಅವರ ನಿಶ್ಚಿತಾರ್ಥ ಕೆಲ ವಾರಗಳ ಹಿಂದೆಯಷ್ಟೇ ನೆರವೇರಿತ್ತು. ಫೆಬ್ರವರಿ 16ರಂದು ಬಾಳ ಬಂಧನಕ್ಕೆ ಕಾಲಿಡಲಿರುವ ಜೋಡಿ, ಭಾನುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದ್ದಾರೆ.
ಕೈಬರಹ: ಇನ್ನೂ ಮದುವೆಯ ಆಹ್ವಾನ ಪತ್ರ ವಿಶೇಷವಾಗಿದ್ದು, ಕೈಬರಹದ್ದಾಗಿದೆ. ಅದರಲ್ಲಿನ ಸಂದೇಶ ಈ ರೀತಿಯಿದೆ.
ನಮ್ಮ ಮದುವೆ card ರೆಡಿ ☺️#DhanDhanyaDhan pic.twitter.com/D0UR9iXdw7
— Dhananjaya (@Dhananjayaka) December 15, 2024
ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ.
ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ,
ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಬರಹ ಸಹ ಕೈಬರಹದ ಫಾಂಟ್ನಲ್ಲಿರುವುದು ವಿಶೇಷ.
ಸಿಎಂ ಟ್ವಿಟ್: ತಮ್ಮನ್ನು ಮದುವೆ ಸಮಾರಂಭಕ್ಕೆ ಆಹ್ವಾನಿಸಿ ಕಲ್ಯಾಣದ ಕರೆಯೋಲೆ ನೀಡಿರುವ ನವಜೋಡಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು.
— Siddaramaiah (@siddaramaiah) December 15, 2024
ಹೊಸ ಬದುಕಿಗೆ ಮುಂದಡಿಯಿಡುತ್ತಿರುವ ಜೋಡಿಗೆ ಶುಭ ಹಾರೈಸಿದೆ. pic.twitter.com/6rwt8BW9e2
ಈ ಕುರಿತು ತಮ್ಮ ಟ್ವಿಟ್ ಮಾಡಿರುವ ಸಿಎಂ, ಹೊಸ ಬದುಕಿಗೆ ಕಾಲಿಡುತ್ತಿರುವ ಜೋಡಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.