ಬೆಂಗಳೂರು: ಒಕ್ಕಲಿಗರ ಸಂಘದ (Vokkaligara sangha) ನೂತನ ಅಧ್ಯಕ್ಷರಾಗಿ ಬಿ.ಕೆಂಚಪ್ಪಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
Vokkaligara sangha ಸಂಘದ ಅಧ್ಯಕ್ಷ ಸೇರಿದಂತೆ ಇತರ ಹಲವು ಹುದ್ದೆಗಳಿಗೆ ಭಾನುವಾರ ನಡೆದ ಚುನಾವಣೆಯ ಫಲಿತಾಂಶವನ್ನು ಸಂಘವು ಪ್ರಕಟಿಸಿದೆ.
ಉಪಾಧ್ಯಕ್ಷರಾಗಿ ಎಲ್.ಶ್ರೀನಿವಾಸ್ ಮತ್ತು ರೇಣುಕಾಪ್ರಸಾದ್ ಕೆ.ವಿ ಚುನಾಯಿತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿವೃತ್ತ ಡಿವೈಎಸ್ಪಿ ಟಿ.ಕೋನಪ್ಪ ರೆಡ್ಡಿ ಅವರು ಪ್ರಧಾನ ಕಾರ್ಯದರ್ಶಿಯಾಗಿ, ಆರ್.ಹನುಮಂತರಾಯಪ್ಪ ಅವರು ಸಹಾಯಕ ಕಾರ್ಯದರ್ಶಿ ಮತ್ತು ಎನ್. ಬಾಲಕೃಷ್ಣ (ನಲ್ಲಿಗೆರೆ ಬಾಲು) ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ.