ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಕಾಮಕ್ಕ ಎನ್ನುವವರಿಗೆ ವಾತ್ಸಲ್ಯ ಮನೆ ಮಂಜೂರಾತಿ (House construction) ಆಗಿದ್ದು, ಇಂದು ಗುದ್ದಲಿ ಪೂಜೆಯನ್ನು ಯೋಜನಾಧಿಕಾರಿ ಸುಧಾ ಭಾಸ್ಕರ್ ನೆರವೇರಿಸಿದರು.
ಮಾಚೇನಹಳ್ಳಿಯ ಕಾಮಕ್ಕ ಎನ್ನುವವರಿಗೆ, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಪ್ರತಿ ತಿಂಗಳ ಮಾಸಾಶನ ( ಪಿಂಚಣಿ) ಸೌಲಭ್ಯ ಕಲ್ಲಿಸಿದ್ದು, ಪ್ರಸ್ತುತ ಅವರಿಗೆ ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ.
ಈ ವೇಳೆ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್, ರಂಗಣ್ಣ, ವಲಯದ ಮೇಲ್ವಿಚಾರಕರಾದ ಸುಪ್ರೀತ್, ತಾಲೂಕು ಸಮನ್ವಯಾಧಿಕಾರಿ ಛಾಯ, ಸೇವಾಪ್ರತಿನಿಧಿಗಳಾದ ಪುಟ್ಟತಾಯಮ್ಮ, ಆನಂದ್ ಸೇರಿದಂತೆ ಸಂಘದ ಸದಸ್ಯರು ಇದ್ದರು.