Daily story: ಹರಿತಲೇಖನಿ ದಿನಕ್ಕೊಂದು ಕಥೆ: ಶಕುನಿ ಗುಣವಂತನೇ..?

Daily story: ಮಹಾಭಾರತದಲ್ಲಿನ ಅತ್ಯಂತ ಕುತೂಹಲಕಾರಿ ಪಾತ್ರಗಳಲ್ಲಿ ‘ಶಕುನಿ’ ಪಾತ್ರ ಕೂಡ ಒಂದು. ಇಂದಿಗೂ ಕೂಡ ಜನರು ಶಕುನಿಯನ್ನು ದೂಷಿಸುತ್ತಾರೆ.

ಸೇಡು ತೀರಿಸಿಕೊಳ್ಳುವ ಮನೋಭಾವದವರನ್ನು, ಮೋಸ ಮಾಡುವ ಮನೋಭಾವದವರನ್ನು, ಕುತಂತ್ರ ಬುದ್ಧಿಯುಳ್ಳವರನ್ನು ನೋಡಿದಾಗಲೆಲ್ಲಾ ಅವರನ್ನು ಆಡು ಮಾತಿನಲ್ಲಿ ಅವನೊಬ್ಬ ಶಕುನಿಯೆಂದು ಹೇಳುವುದುಂಟು.

ಹಾಗಾದರೆ ಮಹಾಭಾರತದಲ್ಲಿನ ಶಕುನಿ ಅಷ್ಟೊಂದು ಕೆಡುಕನೇ..? ಶಕುನಿ ಗುಣವಂತನೇ..? ಅಥವಾ ಕೆಟ್ಟವನೇ..? ಇಲ್ಲಿದೆ ಶಕುನಿಯ ಕುರಿತಿರುವ ಆಸಕ್ತಿದಾಯಕ ಸಂಗತಿಗಳು.

ಶಕುನಿಯು ಗಾಂಧಾರ ರಾಜ ಸುಬಲನ ಪುತ್ರನಾಗಿದ್ದನು. ರಾಜ ಸುಬಲನಿಗೆ 100 ಗಂಡು ಮಕ್ಕಳು ಮತ್ತು ಒಬ್ಬಳೇ ಪುತ್ರಿಯಿದ್ದಳು. ಶಕುನಿ ಗಾಂಧಾರ ಕುಲದ ಕೊನೆಯ ಮಗನಾಗಿದ್ದರೆ, ಗಾಂಧಾರಿಯು ಗಾಂಧಾರ ಕುಲದ ಏಕೈಕ ಮಗಳಾಗಿದ್ದಳು.

ಶಕುನಿ ಸುಬಲ ರಾಜನ ಕೊನೆಯ ಮಗನಾಗಿದ್ದರೂ ಈತ ಉಳಿದೆಲ್ಲಾ ಸಹೋದರರಿಗಿಂತಲೂ ಅತ್ಯಂತ ಬುದ್ಧಿವಂತನಾಗಿದ್ದನು. ಈತ ಸುಬಲ ರಾಜನ ಕಿರಿಯ ಪುತ್ರನಾಗಿದ್ದರಿಂದ ಈತನನ್ನು ಸೌಬಲ ಎಂದು ಕರೆಯಲಾಗುತ್ತಿತ್ತು.

ಶಕುನಿಯು ಕೊನೆಯ ಮಗನಾಗಿದ್ದನು. ಈತ ಈಗಾಗಲೇ ಹೇಳಿರುವಂತೆ ಮಹಾನ್‌ ಬುದ್ಧಿವಂತನಾಗಿದ್ದ ಹಾಗೂ ಮಾಸ್ಟರ್‌ ಮೈಂಡ್‌ ಹೊಂದಿದವನಾಗಿದ್ದನು. ಸುಬಲ ರಾಜನ 100 ನೇ ಮಗನೇ ಈ ಶಕುನಿ. ಈತನ ಸೋದರಳಿಯರೆಂದರೆ 100 ಜನ ಕೌರವರು.

ಶಕುನಿಗೆ ಭೀಷ್ಮನನ್ನು ನೋಡಿದರೆ ಎಲ್ಲಿಲ್ಲದ ಕೋಪವಿತ್ತು. ಯಾವಾಗಲೂ ಕೂಡ ಶಕುನಿ ಭೀಷ್ಮನ ವಿರುದ್ಧ ಸಂಚು ಸಾರುತ್ತಿದ್ದ. ಇದಕ್ಕೆ ಮುಖ್ಯ ಕಾರಣವೇನು ಗೊತ್ತಾ..? ಭೀಷ್ಮನು ಶಕುನಿಯ ಸಹೋದರಿಯಾದ ಗಾಂಧಾರಿಯು ಅಂಧ ಅಥವಾ ಕುರುಡ ಧೃತರಾಷ್ಟ್ರನನ್ನು ವಿವಾಹವಾಗುತ್ತಾನೆ ಮಾಡುತ್ತಾನೆ. ಆದ್ದರಿಂದ ಶಕುನಿಗೆ ಭೀಷ್ಮನ ಮೇಲೆ ಅಗಾಧವಾದ ಕೋಪವಿತ್ತು. ಶಕುನಿಗೆ ಪಾಂಡವರ ಮೇಲೆ ಯಾವುದೇ ಕೋಪವಿರುವುದಿಲ್ಲ. ಆದರೆ ಭೀಷ್ಮ ಪಿತಾಮಹನ ಸಂಪೂರ್ಣ ಕುಟುಂಬವನ್ನು ನಾಶ ಮಾಡುವ ಸೇಡನ್ನು ಹೊಂದಿದ್ದನು.

ಶಕುನಿಯು ಹೆಚ್ಚಾಗಿ ಹಸ್ತಿನಾಪುರದಲ್ಲೇ ತನ್ನ ದಿನಗಳನ್ನು ಕಳೆದಿರುವುದರಿಂದ ಆತನು ತನ್ನ ಕುಟುಂಬಕ್ಕೆ ಅಷ್ಟೊಂದು ಒತ್ತು ನೀಡಿರಲಿಲ್ಲ. ಆದರೆ ಶಕುನಿಗೆ ಉಲುಕ ಮತ್ತು ವೃಕಾಸುರ ಎನ್ನುವ ಇಬ್ಬರು ಗಂಡು ಮಕ್ಕಳಿದ್ದರು ಎಂದು ಹೇಳಲಾಗುತ್ತದೆ.

ಶಕುನಿಯ ಮಗನಾದ ಉಲೂಕ್‌ ಅಥವಾ ಉಲುಕನು ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದು ಹಿಂದಿರುಗುವುದರೊಳಗೆ ತನ್ನ ತಂದೆಯಾದ ಶಕುನಿಯನ್ನು ಪುನಃ ಗಾಂಧಾರಕ್ಕೆ ಕರೆದೊಯ್ಯಲು ಬಯಸಿದ್ದನು. ಆದರೆ ಶಕುನಿಯು ಇದಕ್ಕೆ ಒಪ್ಪದೇ ತಾನು ಕುರುಕ್ಷೇತ್ರವನ್ನು ಇಲ್ಲಿಯೇ ಕುಳಿತು ನೋಡಬೇಕೆಂದು ಬಯಸಿ ಹಸ್ತಿನಾಪುರದಲ್ಲೇ ಉಳಿದುಕೊಳ್ಳುತ್ತಾನೆ.

ಪಗಡೆಯಾಟ ಅಥವಾ ಜೂಜಿನಾಟವು ಮಹಾಭಾರತದ ಹಲವು ಪ್ರಮುಖ ಅಧ್ಯಾಯಗಳಲ್ಲಿ ಇದು ಕೂಡ ಒಂದಾಗಿತ್ತು. ಮಹಾಭಾರತದಲ್ಲಿ ಶಕುನಿ ಮಾತ್ರವಲ್ಲದೆ, ಆತನು ಜೂಜಿನಾಟದಲ್ಲಿ ಬಳಸುತ್ತಿದ್ದ ಮಾಂತ್ರಿಕ ದಾಳಗಳು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ.

ಶಕುನಿ ಬಳಸುತ್ತಿದ್ದ ದಾಳವು ಆತನ ತಂದೆಯ ಮರಣದ ನಂತರ ಕಾಲಿನ ಹಿಂಭಾಗದ ಅಥವಾ ತೊಡೆಯ ಮೂಲೆಯಿಂದ ಮಾಡಲ್ಪಟ್ಟಿದೆ ಎಂಬ ಕಥೆಯಿದೆ. ಆದರೆ ವಾಸ್ತವದಲ್ಲಿ ಶಕುನಿಯ ದಾಳಗಳು ದಂತಗಳಿಂದ ಮಾಡಲ್ಪಟ್ಟಿದ್ದು, ಶಕುನಿಯು ಮಾಯಾವಾದಿಯಾಗಿದ್ದರಿಂದ ಈತನ ದಾಳಗಳು ಕೂಡ ಮಾಯದ ದಾಳಗಳು ಎಂದು ಹೇಳಲಾಗುತ್ತದೆ.

ವೇದವ್ಯಾಸರು ಯುದ್ಧದಲ್ಲಿ ಮೌನಿಯಾಗಿರಲು ಇಚ್ಛಿಸಿದವರು. ವಾಸ್ತವವಾಗಿ ದಾಳಗಳು ಮೂಳೆಯಿಂದ ಮಾಡಲ್ಪಟ್ಟಿದೆ ಎನ್ನುವುದಕ್ಕೆ ಯಾವುದೇ ಸುಳಿವು ಇಲ್ಲದಿರುವ ಕಾರಣ ಅದು ದಂತದಿಂದ ಮಾಡಲ್ಪಟ್ಟ ದಾಳವಾಗಿರಬಹುದೆಂದು ವೇದವ್ಯಾಸರು ಹೇಳುತ್ತಾರೆ. ಈ ದಾಳವನ್ನು ಉಪಯೋಗಿಸುವ ಕಲೆ ಕೇವಲ ಶಕುನಿಗೆ ಮಾತ್ರ ತಿಳಿದಿತ್ತೆಂದು ಕೂಡ ಅವರು ಹೇಳುತ್ತಾರೆ.

ಕೃಪೆ: ಸಾಮಾಜಿಕ ಜಾಲತಾಣ

ರಾಜಕೀಯ

ರಾಜ್ಯ ಸರ್ಕಾರವನ್ನು ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆ.!?: ಪ್ರಧಾನಿಗೆ ಸಿಎಂ ಪತ್ರ

ರಾಜ್ಯ ಸರ್ಕಾರವನ್ನು ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆ.!?: ಪ್ರಧಾನಿಗೆ ಸಿಎಂ ಪತ್ರ

ರಾಜಕೀಯ ಕೆಸರೆರಚಾಟ, ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಸೋಮವಾರ ಮಧ್ಯಾಹ್ನ ಸಾಗರ ತಾಲೂಕಿನ ಸಿಗಂದೂರು ನೂತನ ತೂಗು ಸೇತುವೆಯನ್ನು (SigandooruBridge)

[ccc_my_favorite_select_button post_id="111123"]
ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ದೃಷ್ಟಿ ವಿಶೇಷ ಚೇತನರಿಗೆ KSRTC ಯ 200 ಬಸ್ಸುಗಳಲ್ಲಿ, ಅವರ ಆಯ್ಕೆಯ ಬಸ್ ಮಾರ್ಗವನ್ನು ಸೆಲೆಕ್ಟ್ ಮಾಡಲು ಧ್ವನಿ ಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (RamalingaReddy)

[ccc_my_favorite_select_button post_id="111154"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

[ccc_my_favorite_select_button post_id="111121"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!