ಬೆಂಗಳೂರು: ಸಾರಿಗೆ ಬಸ್ ಟಿಕೆಟ್ ದರ ಹೇರಿಕೆ ಕುರಿತು ನಿನ್ನೆ ಮೆಜೆಸ್ಟಿಕ್ ನಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು, ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ವರ್ತಿಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, Video ವೈರಲ್ ಆಗುತ್ತಿದೆ.
ಅಲ್ಲದೆ ಪ್ರತಿಭಟನೆ ತಡೆಯಲು ಮುಂದಾದ ಪೊಲೀಸ್ ಅಧಿಕಾರಿಗಳ ಕುರಿತು ಅಶೋಕ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಆರೋಪಿ ಮತ್ತೆ ವಿಡಿಯೋ ಟ್ವಿಟ್ ಮಾಡಿದ್ದು, ಫೇಕ್, ಎಡಿಟ್ ಫ್ಯಾಕ್ಟರಿ ಎಂದು ತಿರುಗೇಟು ನೀಡಿದ್ದ ಅಶೋಕ್ ಅವರಿಗೆ ಮತ್ತೆ ಕೌಂಟರ್ ನೀಡಿದೆ.
ಈ ಕುರಿತು ವಿಡಿಯೋ ಟ್ವಿಟ್ ಮಾಡಿರುವ ಕಾಂಗ್ರೆಸ್, ಆಪೋಸೀಷನ್ ಲೀಡರ್ ಅಶೋಕ ಅವರೇ, ಫೇಕ್ ಫ್ಯಾಕ್ಟರಿ ನಡೆಸುತ್ತಿರುವವರು, ಟೂಲ್ ಕಿಟ್ ರಾಜಕಾರಣ ಮಾಡುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ.
ತುಂಬಿದ ಕಲಾಪದಲ್ಲಿ, ಕ್ಯಾಮರಾಗಳ ಮುಂದೆ ದುಶ್ಯಾಸನಂತೆ ಮಹಿಳಾ ಸಚಿವರನ್ನು ಅವಾಚ್ಯವಾಗಿ, ಅಸಹ್ಯವಾಗಿ ನಿಂದಿಸಿದ್ದನ್ನೇ ‘ಹಾಗೆ ಹೇಳಿಯೇ ಇಲ್ಲ’ ‘ಎಡಿಟ್ ಮಾಡಲಾಗಿದೆ’ ಎಂದ ನಾಚಿಕೆಗೆಟ್ಟವರಿಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯ!
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅದರದೇ ಘನತೆ ಇದೆ. ಅದಕ್ಕೆ ಕಳಂಕ ತರಬೇಡಿ. ಮೊದಲು ನಿಮ್ಮ ನಾಲಿಗೆ ಶುದ್ಧ ಮಾಡಿಕೊಳ್ಳಿ!
ಆಪೋಸೀಷನ್ ಲೀಡರ್ @RAshokaBJP
— Karnataka Congress (@INCKarnataka) January 4, 2025
ಅವರೇ,
ಫೇಕ್ ಫ್ಯಾಕ್ಟರಿ ನಡೆಸುತ್ತಿರುವವರು, ಟೂಲ್ ಕಿಟ್ ರಾಜಕಾರಣ ಮಾಡುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ.
ತುಂಬಿದ ಕಲಾಪದಲ್ಲಿ, ಕ್ಯಾಮರಾಗಳ ಮುಂದೆ ದುಶ್ಯಾಸನಂತೆ ಮಹಿಳಾ ಸಚಿವರನ್ನು ಅವಾಚ್ಯವಾಗಿ, ಅಸಹ್ಯವಾಗಿ ನಿಂದಿಸಿದ್ದನ್ನೇ 'ಹಾಗೆ ಹೇಳಿಯೇ ಇಲ್ಲ' 'ಎಡಿಟ್ ಮಾಡಲಾಗಿದೆ' ಎಂದ… pic.twitter.com/WnnLvXp2oy
ಕೀಳು ಮನಸ್ಥಿತಿ ಯಾರದ್ದೆಂಬುದನ್ನು ರಾಜ್ಯವೇ ನೋಡಿದೆ. ನಿಮ್ಮ ‘ಅಮೃತವಾಣಿ’ಯ ಅಮೋಘ ದೃಶ್ಯವನ್ನು ನೀವೇ ಮತ್ತೊಮ್ಮೆ ಕಣ್ತುಂಬಿಕೊಳ್ಳಿ! ಎಂದು ಕಾಂಗ್ರೆಸ್ ಮತ್ತೊಮ್ಮೆ ವಿಡಿಯೋ ಟ್ವಿಟ್ ಮಾಡಿದೆ.
ಆರ್ ಅಶೋಕ ದೂರು
ಇದೇ ವಿಡಿಯೋ ಕುರಿತು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಜೊತೆ ಆರ್. ಅಶೋಕ್ ವಾಗ್ವಾದ ನಡೆಸಿದ್ದರು ಎನ್ನಲಾದ ವಿಡಿಯೋ ಹರಿದಾಡಿತ್ತು.
ಆದ್ರೆ ಈ ವಿಡಿಯೋ ಎಡಿಟೆಡ್ ವಿಡಿಯೋ. ತಮ್ಮ ವಿಡಿಯೋವನ್ನು ಎಡಿಟ್ ಮಾಡಿ ಈ ರೀತಿಯಾಗಿ ಹರಿಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಡಿಸಿಎಂ ಡಿಕೆ ಶಿವಕುಮಾರ್, ನಿಕೇತ್ ರಾಜ್ ಮೌರ್ಯ, ಸಹ ಅಧ್ಯಕ್ಷೆ ಐಶ್ವರ್ಯ ಮಹದೇವ್, ಉಪಾಧ್ಯಕ್ಷ ಸತ್ಯಪ್ರಕಾಶ್, ಕೆಪಿಸಿಸಿ ಸಾಮಾಜಿಕ ಮಾಧ್ಯಮ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ, ಸಂವಹನ ಅಧ್ಯಕ್ಷ ರಮೇಶ್ ಬಾಬು ವಿರುದ್ಧ ಆರ್ ಅಶೋಕ ಆರೋಪ ಮಾಡಿದ್ದಾರೆ.
ಈ ವಿಡಿಯೋವನ್ನು ಕೆಪಿಸಿಸಿ ತನ್ನ ಎಕ್ಸ್ ಮತ್ತು ಫೇಸ್ಟುಕ್ ಖಾತೆಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದೆ ಎಂದು ಆರ್.ಅಶೋಕ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಮತ್ತು ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.