ಕೊಡಗು: ಅರಣ್ಯ ಇಲಾಖೆ ಮರ ಸಂಗ್ರಹದ ಡಿಪೋಕ್ಕೆ ಅಳವಡಿಸಿರುವ ಕಬ್ಬಿಣದ ಗೇಟ್ ಗೆ ಸಿಲುಕಿಕೊಂಡ ಕಾಡಾನೆಯೊಂದು (Elephant) ಸಂಗಾತಿಯ ಸಾಕಾಲಿಕ ನೆರವಿನಿಂದ ಅಪಾಯಕಾರಿ ಸನ್ನಿವೇಶದಿಂದ ಪಾರಾದ ರೋಚಕ ಘಟನೆಗೆ ಕೊಡಗು ಜಿಲ್ಲೆ ತಿತಿಮತಿ ಸಾಕ್ಷಿ ಆಯಿತು.
ಇಂದು ಬೆಳಿಗ್ಗೆ ಕಾಡಾನೆಗಳೆರೆಡು ಆಹಾರ ಅರಸಿಕೊಂಡು ತಿತಿಮತಿಯಲ್ಲಿರುವ ಅರಣ್ಯ ಇಲಾಖೆಯ ಮರ ಸಂಗ್ರಹಗಾರದತ್ತ ಬಂದಿವೆ.
ಈ ಪೈಕಿ ಆನೆಯೊಂದು ಅಲ್ಲಿದ್ದ ಕಬ್ಬಿಣದ ಗೇಟ್ ಅನ್ನು ನೂಕುವಾಗ ಸೊಂಡಿಲು ಸಮೇತ ಕುತ್ತಿಗೆಯ ಭಾಗ ಸಿಕ್ಕಿಕೊಂಡಿದೆ. ಅದರಿಂದ ಹೊರ ಬರಲಾಗದೇ ಘೀಳಿಡತೊಡಗಿದೆ.
ಈ ವೇಳೆ ಅದರ ಗೋಳು ನೋಡಲಾಗದೆ ಒಟ್ಟಿಗೆ ಇದ್ದ ಮತ್ತೊಂದು ಕಾಡಾನೆ ತಕ್ಷಣ ನೆರವಿಗೆ ಧಾವಿಸಿ ಗೇಟಿಗೆ ಗುದ್ದಲಾರಂಭಿಸಿದೆ.
ತುಸು ಕ್ಷಣದಲ್ಲಿ ಗೇಟಿಗೆ ಸಿಕ್ಕಿಕೊಂಡಿದ್ದ ಕಾಡಾನೆಯ ಕುತ್ತಿಗೆಯ ಭಾಗ ಹೊರಬಂದು ಕಂಟಕದಿಂದ ಪಾರಾಗಿದೆ.
ಆನೆಗಳ ಈ ಪರಸ್ಪರ ಸಹಕಾರ ಎಲ್ಲರನ್ನ ಮೂಖ ವಿಸ್ಮಿತರಾಗುವಂತೆ ಮಾಡಿದೆ.