ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಚೌತಿ ಜನವರಿ.18.2025 ಶನಿವಾರ: ವಿಶೇಷವಾಗಿ ಈ ದಿನ ನೀಲಿಯ ವಸ್ತ್ರಗಳನ್ನು ಧರಿಸುವುದಕ್ಕೆ ಪ್ರಾಧಾನ್ಯತೆ ನೀಡಿ ಜೊತೆಗೆ ಶಿವನಿಗೆ ಅಭಿಷೇಕ ಪೂಜೆಯನ್ನು ಮಾಡುವುದರಿಂದ ಶುಭವೂ ಅಧಿಕವಾಗುತ್ತದೆ. Astrology
ಮೇಷ ರಾಶಿ: ಆರೋಗ್ಯವಂತರಾಗುವುದಕ್ಕೆ ನಾನಾ ರೀತಿಯ ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಹಣದ ಸಮಸ್ಯೆ ನಿಧಾನವಾಗಿ ನೀಗುತ್ತದೆ.. ವಿದ್ಯಾರ್ಥಿಗಳಿಗೆ ವಿದ್ಯೆಯ ಅವಕಾಶ ಹೆಚ್ಚಾಗಿರುತ್ತದೆ, ಮನಸ್ಥಿತಿ ದೃಢವಾಗಿರುತ್ತದೆ. (ಪರಿಹಾರಕ್ಕಾಗಿ ಸೂರ್ಯನನ್ನು ಆರಾಧನೆ ಮಾಡಿ)
ವೃಷಭ ರಾಶಿ: ಅತ್ಯಂತ ಒಳ್ಳೆಯ ದೇಹ ಸ್ಥಿತಿ, ಗಂಭೀರವಾದ ಮಾತು, ಅನಾವಶ್ಯಕವಾದ ಮಾತುಗಳು ಬೇಡ, ಎಚ್ಚರಿಕೆಯಿಂದ ವರ್ತಿಸಿ, ಚಿಂತೆ ಇಲ್ಲದಿರುವುದು ಅತ್ಯಂತ ವಿಶ್ವಾಸವನ್ನು ಉಂಟುಮಾಡುತ್ತದೆ. (ಪರಿಹಾರಕ್ಕಾಗಿ ಶ್ರೀ ಚೌಡೇಶ್ವರಿ ಅಮ್ಮನನ್ನು ಪೂಜೆ ಮಾಡಿ)
ಮಿಥುನ ರಾಶಿ: ಸ್ವಲ್ಪ ಮಟ್ಟಿನ ಒಳ್ಳೆಯ ವಾತಾವರಣ, ಮನಸ್ಸಿನಲ್ಲಿ ಕಿರಿಕಿರಿ.. ಭಾವನೆಗಳ ಜೊತೆ ಜಟಾಪಟಿ, ದುಃಖದಿಂದ ನಿಧಾನವಾಗಿ ಸಮಾಧಾನದ ಕಡೆ ಹೆಜ್ಜೆ. (ಪರಿಹಾರಕ್ಕಾಗಿ ವಜ್ರೇಶ್ವರಿ ದೇವಿ ಆರಾಧನೆ ಮಾಡಿ)
ಕಟಕ ರಾಶಿ: ಅನುಕೂಲವಾಗುತ್ತದೆ, ದುರದೃಷ್ಟ ಎಂಬುದು ಯಾರನ್ನು ಬಿಡುವುದಿಲ್ಲ. ಕಾರಣ ಕಾರ್ಯದಿಂದ ಈ ರೀತಿಯ ದುಃಖ ಬಂದಿದೆ.. ನಿಧಾನವಾಗಿ ಹಿಂದೆ ಸರಿಯುತ್ತದೆ, ಶುಭ ದಿನ ಬಹಳ ಹತ್ತಿರದಲ್ಲಿ ಇದೆ.. ಶುಭವಾಗುತ್ತದೆ ಚಿಂತೆ ಬೇಡ. (ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ಪೂಜೆ ಮಾಡಿ)
ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಶುಭ.. ಧನಾಗಮ, ಸ್ವಲ್ಪ ನಿಧಾನ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.. ಮನಸ್ಸಿನಲ್ಲಿ ದುಃಖವನ್ನು ಹಾಗೆ ಇರಿಸಿಕೊಳ್ಳಬೇಡಿ ಹೊರಹಾಕಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಸರಸ್ವತಿಯ ಪೂಜೆಯನ್ನು ಮಾಡಿ)
ಕನ್ಯಾ ರಾಶಿ: ಅನಾರೋಗ್ಯ ಬಾಧೆ, ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.. ಕೊಟ್ಟಮಾತಿನಿಂದ ತೊಂದರೆಯಾಗುವ ಸಾಧ್ಯತೆ. ಎಚ್ಚರಿಕೆಯಿಂದ ಮಾತನಾಡಬೇಕು, ದೀರ್ಘ ದರ್ಶಿಗಳಾಗಿ ಯೋಚಿಸುವುದನ್ನು ರೂಢಿ ಮಾಡಿಕೊಳ್ಳಿ..
(ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ಪೂಜೆಯನ್ನು ಮಾಡಿಸಿ)
ತುಲಾ ರಾಶಿ: ವಿಚಾರಗಳನ್ನು ಎಲ್ಲರ ಜೊತೆ ಚರ್ಚಿಸಿ ಅನುಕೂಲವಾದ ರೀತಿಯಲ್ಲಿ ವರ್ತಿಸಿ. ಅತಿಯಾದ ಪ್ರಶ್ನೆ ಬೇಡ.. ಎಲ್ಲವನ್ನು ಅನಾವಶ್ಯಕವಾಗಿ ನಂಬಬೇಡಿ, ಎಚ್ಚರಿಕೆ ಬಹಳ ಅಗತ್ಯ. ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ವೃಶ್ಚಿಕ ರಾಶಿ: ನೋವಿನ ಮಾತುಗಳು, ಮನಸ್ಸಿಗೆ ಸ್ವಲ್ಪ ನೋವು, ಆನಂದವಾಗಿರುವಂತೆ ಬಂದು ಮಿತ್ರರ ಸಲಹೆ. ಎಲ್ಲ ರೀತಿಯಲ್ಲೂ ನಿಧಾನವಾದ ಅನುಕೂಲ, ಮೊದಲೇ ಯೋಚಿಸಿದ್ದರೆ ಈ ರೀತಿಯ ತೊಂದರೆ ಆಗುತ್ತಿರಲಿಲ್ಲ ಎಂಬ ಭಾವನೆ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಪೂಜೆ ಮಾಡಿಸಿ)
ಧನಸ್ಸು ರಾಶಿ: ಸಂತೋಷ ಜೊತೆಗೆ ವಿದ್ಯೆಯನ್ನು ಕಲಿಯುತ್ತಿರಿ.. ನೋವುಗಳನ್ನು ಮರೆಯಬೇಕು, ಜೊತೆಗೆ ಸಾಧನೆ ಅವಶ್ಯ.. ಯಾರಿಗೂ ಸಹ ಮಾತನ್ನು ಕೊಡಬೇಡಿ. ಜೀವನದ ಬಗ್ಗೆ ಅತ್ಯಂತ ವಿಶ್ವಾಸವಿರಲಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮಿದೇವಿಯ ದೇವಸ್ಥಾನದಲ್ಲಿ ಕ್ಷೀರಭಿಷೇಕ ಮಾಡಿಸಿ)
Astrology
ಮಕರ ರಾಶಿ: ಎಲ್ಲ ಕಾರ್ಯದಲ್ಲೂ ಉತ್ತಮ ರೀತಿಯ ಅನುಕೂಲ. ಆದರೆ ಮನಸ್ಸಿನಲ್ಲಿ ಚಿಂತೆ, ಚಿಂತೆಯಿಂದ ದೂರಾಗಲು ಭಗವಂತನ ಆಶ್ರಯ ಬೇಕು.. ಶುಭವಾಗುತ್ತದೆ, ವಿದ್ಯೆಯಲ್ಲಿ ಸ್ವಲ್ಪ ಕುಂಠಿತ ವ್ಯವಹಾರಗಳಲ್ಲಿ ಜಯ. (ಪರಿಹಾರಕ್ಕಾಗಿ ರಾಮರ ಮಂತ್ರವನ್ನು ಜಪಿಸಿ)
ಕುಂಭ ರಾಶಿ: ಒಳ್ಳೆಯದಾಗಿದೆ ಆದರೆ ಈ ಸಮಯದಲ್ಲಿ ಸ್ವಲ್ಪ ನಿಧಾನವಾಗುತ್ತದೆ. ಮಾಡಿದ ಕೆಲಸಗಳು ಪ್ರತಿಫಲವನ್ನು ಸ್ವಲ್ಪ ನಿಧಾನವಾಗಿ ಕೊಡುತ್ತವೆ, ಸಮಯ ಬರಬೇಕು, ಧನಾಗಮದ ಕೊರತೆ, ವಿದ್ಯಾರ್ಥಿಗಳಿಗೆ ಶುಭ, ಎಲ್ಲದಕ್ಕೂ ಸ್ವಲ್ಪ ನಿಧಾನಿಸಿ. (ಪರಿಹಾರಕ್ಕಾಗಿ ದುರ್ಗಾ ದೇವಿಯನ್ನು ಆರಾಧನೆ ಮಾಡಿ)
ಮೀನ ರಾಶಿ: ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ದೃಢವಾಗಿರಲಿ. ಉಪಕಾರವನ್ನು ಸ್ಮರಣೆ ಮಾಡಿಕೊಳ್ಳಿ, ಹಣದ ಬಗ್ಗೆ ಚಿಂತೆ ಬೇಡ. ನಿಧಾನವಾಗಿ ಬಂದು ಸೇರುತ್ತದೆ, ಶ್ರಮವಹಿಸಿ ಅಭ್ಯಾಸವನ್ನು ಮಾಡಿ, ವಿದ್ಯಾರ್ಥಿಗಳಿಗೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರನ್ನು ಆರಾಧನೆ ಮಾಡಿ)
ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AMರಿಂದ 12-00PM
ಹೆಚ್ಚಿನ ಮಾಹಿತಿಗೆ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572