ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ಅವರಿಗೆ ವಾರ್ನಿಂಗ್ ಕೊಟ್ಟಿರುವ ಕಾರಣ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಕೆರಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರಿತು ವಾಚಾಮಗೋಚರಾಗಿ ವಾಗ್ದಾಳಿ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಯಡಿಯೂರಪ್ಪ ಕುಟುಂಬದ ಕುರಿತು ಅನೇಕ ಅಸ್ತ್ರಗಳನ್ನು ನೀಡಿದ್ದಾರೆ.
ಯತ್ನಾಳ್ ವಾಗ್ದಾಳಿ ಹೀಗಿದೆ:
ರಮೇಶ್ ಜಾರಕಿಹೊಳಿ 17 ಜನ ಬಿಜೆಪಿಗೆ ಬರದೇ ಹೋಗಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾ ಇದ್ರಾ..? ಮಾನ್ಯ ವಿಜಯೇಂದ್ರ ಅವರೆ..
ಯಡಿಯೂರಪ್ಪ ಮುಖ್ಯಮಂತ್ರಿ ಆಗೋದಕ್ಕೆ ಕಾರಣ ರಮೇಶ್ ಜಾರಕಿಹೋಳಿ ಅವರು.. ನೀವು ಇಷ್ಟೆಲ್ಲ ದುಡ್ ಮಾಡಲು ಕಾರಣ ರಮೇಶ್ ಜಾರಕಿಹೊಳಿ ಅವರು..
ನೀವೆಷ್ಟು ದುಡ್ ಮಾಡುದ್ರಿ ಅಂತ ಎಲ್ಲಾ ಜಗತ್ತಿಗೆ ಗೊತ್ತಿದೆ.. ಉಮೇಶ್ ಅನ್ನೋ ಬಿಟಿಎಸ್ ಕಂಡಕ್ಟರ್ ಮನೆಯಲ್ಲಿ ಎರಡು ಕೌಂಟಿಂಗ್ ಮಿಷನ್ ಸಿಗುತ್ತೆ.. ಸಾವಿರಾರು ಕೋಟಿಯ ಖರೀದಿ ಬಾಂಡ್ ಸಿಗ್ತಾವೆ, ಸಾವಿರಾರು ಕೋಟಿ ನಗದು ಸಿಗುತ್ತೆ ಇಡಿ ಅವರಿಗೆ.. ಇದು ಯಾರದ್ದು ವಿಜಯೇಂದ್ರ ಅವರೇ…? ಅದುಕ್ಕೆಲ್ಲ ಆಶಿರ್ವಾದ ರಮೇಶ್ ಜಾರಕಿಹೊಳಿದು..
ರಮೇಶ್ ಜಾರಕಿಹೊಳಿಯ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಅವರು ಎಸ್ಟಿ ಜನಾಂಗದವರು, ವಾಲ್ಮೀಕಿ ಜನಾಂಗದವರು.. ಅವರು ನೀರಾವರಿ ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡ್ತಾ ಇದ್ದರು. ಅವರನ್ನ ಬಲಿ ಕೊಟ್ಟಿದ್ದು ಯಾರು ವಿಜಯೇಂದ್ರ..? ನಿಮ್ಮ ಪಾಲೇನಿದೆ ಅಂತ ಎಲ್ಲಾ ಗೊತ್ತಿದೆ.
ಎಷ್ಟೋ ಕಾರ್ಯಕರ್ತರು ಸೈಕಲ್ ಹೊಡಿತಾ ಅಲ್ಲ, ನಡ್ಕೋತಾ ಅಡ್ಡಾಡಿ, ಉಪಾಸ ಬಿದ್ದು, ಒಂದ್ ಒಂದ್ ಹಳ್ಳಿಗ್ ಬಿಜೆಪಿ ಕಾರ್ಯಕರ್ತರು ಓದ್ರೆ… ನೀರು ಕೊಟ್ಟಿಲ್ಲ. ಅಷ್ಟೆಲ್ಲ ಮಾಡಿದ್ರಿಂದ ಪಕ್ಷ.
ಅನಂತ ಕುಮಾರ್, ಜಗನಾಥ್ ಜೋಶಿ ಅವರು ಪಕ್ಷಕ್ಕೆ ಮಾಡಿದ ಸೇವೆಯನ್ನು ಸ್ಮರಿಸಬೇಕು. ಅದೇ ರೀತಿ ಬಸವರಾಜ ಪಾಟೀಲ್ರು, ಈಶ್ವರಪ್ಪ ಅವರು, ರಾಮಚಂದ್ರ ವೀರಪ್ಪ ಒಬ್ಬ ದಲಿತ ಸಮುದಾಯದ ಮುಖಂಡ ಅವರ ಸೇವೆ ಎಷ್ಟಿದೆ ಗೊತ್ತೆ.. ಎಲ್ಲಾ ಸಮುದಾಯ ಬಂದ ಮೇಲೆನೆ ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು ಒಬ್ಬನೆ ಸೈಕಲ್ ಹೊಡೆದು ಅಲ್ಲ.
ಸೈಕಲ್ ನಾವು, ಎಲ್ಲಾ ಕಾರ್ಯಕರ್ತರು ಹೊಡೆದಿದ್ದೆವೆ.. ನಾವೆಲ್ಲ ಅನುಭವಿಸಿದ್ದೇವೆ.. ಶಾಸಕ, ಸಂಸದ ಕೂಡ ಆಗಿದ್ದೇವೆ. ಆದರೆ ಅದೇಷ್ಟೋ ಕಾರ್ಯಕರ್ತರು ಜೀವನದಲ್ಲಿ ಏನೂ ಆಗಲಿಲ್ಲ.. ಅವರು ಆಸ್ಪತ್ರೆಗೆ ದಾಖಲಾದ್ರೆ ಕನಿಷ್ಠ ಯಾರು ಮಾತಾಡಿಸಲಿಲ್ಲ.
ಬಿಜೆಪಿಗೆ ದುಡಿದೆ ಕನಿಷ್ಠ ಮನೆಗೆ ಬಂದು ಸಾಂತ್ವಾನ ಹೇಳಲಿಲ್ಲ ಅಂತ ಅದೇಷ್ಟೋ ಕಾರ್ಯಕರ್ತರು ಕಣ್ಣೀರಾಕಿದ್ದಾರೆ. ಇವರ ಬಗ್ಗೆ ವಿಚಾರ ಮಾಡಿ ವಿಜಯೇಂದ್ರ, ಬರೀ ನಮ್ಮಪ್ಪ ಪೂಜ್ಯ ತಂದೆಯವರು ಮಾಡ್ಯಾರ ಅಂದ್ರೆ.. ಹೌದಪ್ಪ ನಿಮ್ ಅಪ್ಪ ನಾಕ್ ಸಲ ಮುಖ್ಯಮಂತ್ರಿ ಆಗ್ಯಾನ, ವಿರೋಧ ಪಕ್ಷದ ನಾಯಕ ಆಗ್ಯಾನ, ಸೋತಾಗ ಎಂಎಲ್ಸಿ ಮಾಡೈತಿ, ರಾಜ್ಯಾಧ್ಯಕ್ಷ ಮಾಡೈತಿ. ಎಂಪಿ ಮಾಡೈತಿ.
ನಾ ಪಕ್ಷಕ್ಕೆ ಬಂದ ಮೇಲೆ ನೀವ್ ಬಂದಿದ್ದೀಯಾ, ಸೀನಿಯರ್ ನಾ ಇದ್ದೀನಿ.. ಯಡಿಯೂರಪ್ಪ ಜೂನಿಯರ್.
ವಿಜಯೇಂದ್ರ ಯಾವಾಗ ಬಂದಿದ್ದಾನೆ.. ಬರೀ ಕಲೆಕ್ಷನ್ ಮಾಸ್ಟರ್ ಇವ, ಇವ ರಾಜ್ಯಾಧ್ಯಕ್ಷ ಆಗಿ ಪಾರ್ಟಿಗೆ ಏನ್ ಮಾಡಿದ್ದಾನೆ.? ಸುಡುಗಾಡು ಮಾಡಿಲ್ಲ.. ಯಡಿಯೂರಪ್ಪನ ಜೈಲಿಗೆ ಕಳಿಸಲು ಕಾರಣನೇ ಇವತ್ತಿನ ರಾಜ್ಯಾಧ್ಯಕ್ಷ..
ಧೀಮಂತ ಪೂಜ್ಯ ತಂದೆಯವರನ್ನ ಜೈಲಿಗೆ ಕಳುಹಿಸಿದ ಮಹಾನ್ ನಾಯಕ, ಅವರ ಹೆಸರಲ್ಲಿ ಯಾವ ಯಾವ ಸಹಿ ಮಾಡಿದ್ದಾನೋ ಗೊತ್ತಿಲ್ಲ.. ನಾ ಬಾಯಿ ಬಿಟ್ಟರೆ ಕೆಲಸ ಕೆಡುತ್ತೆ ಅದುನ್ನ ಮಾಡಬೇಡ ಎಂದು ಬಸನಗೌಡ ಪಾಟೀಲ ಯತ್ನಾಳ್ ಅವರು ವಿಜಯೇಂದ್ರಗೆ ಎಚ್ಚರಿಕೆ ನೀಡಿದರು.