Daily story; punishment

ಹರಿತಲೇಖನಿ ದಿನಕ್ಕೊಂದು ಕಥೆ: ಮಿತ್ರಪ್ರೇಮ

Daily story: ತಮಿಳು ಮಹಾಕವಿ ಕಂಬನ ಹಾಗೂ ಅವನ ಮಿತ್ರನಾದ ಓಟುಕ್ಕುತ್ತರಸ್ವತಂತ್ರವಾಗಿ ತಮಿಳಿನಲ್ಲಿ ರಾಮಾಯಣವನ್ನು ರಚಿಸುವುದು, ಕಂಬನತಮಿಳುನಾಡಿನ ಪ್ರತಿಭಾವಂತ ಹಾಗೂ ಸೂಕ್ಷ್ಮದರ್ಶಿ ಮಹಾಕವಿಯಾಗಿದ್ದನು.

ಅವನಿಗೆ ಓಟುಕ್ಕುತ್ತನ ಎಂಬ ಹೆಸರಿನ ಮಿತ್ರನಿದ್ದನು. ಅವನೂ ಮಹಾನ ವಿದ್ವಾಂಸನಾಗಿದ್ದನು.

ಕಂಬನನು ರಾಮಾಯಣವನ್ನು ರಚಿಸುತ್ತಿರುವುದರ ಬಗ್ಗೆ ತಿಳಿದಾಗ ಓಟುಕ್ಕುತ್ತರಗೂ ಸ್ಪೂರ್ತಿ ಬಂದು ಅವನೂ ತಮಿಳಿನಲ್ಲಿ ರಾಮಾಯಣ ರಚನೆಯನ್ನು ಆರಂಭಿಸಿದನು. ಇಬ್ಬರ ರಾಮಾಯಣವು ಸ್ವತಂತ್ರವಾಗಿ ಆರಂಭವಾಗಿ ಕಾಲಾನುಸಾರವಾಗಿ ಪೂರ್ಣವಾಯಿತು.

ಕಂಬನನ ರಾಮಾಯಣವು ಜನಪ್ರಿಯವಾಗುವುದು

ಕಂಬನನ ರಾಮಾಯಣವು ಜನಪ್ರಿಯವಾಯಿತು. ಕಂಬನನು ತನ್ನ ರಾಮಾಯಣವನ್ನು ಹಾಡಿದರೆ ಶ್ರೋತೃಗಳು ತಲ್ಲೀನರಾಗಿ ವಾಹ್ ವಾಹ್ ಎಂದು ಹೇಳುತ್ತಿದ್ದರು. ಕಂಬನನು ಹೋದಲ್ಲಿ ಅವನ ಆದರ, ಸನ್ಮಾನವಾಗುತ್ತಿತ್ತು. ಎಲ್ಲಕಡೆಯೂ ಅವನ ಜಯಕಾರವಾಗುತ್ತಿತ್ತು.

ಓಟುಕ್ಕುತ್ತರ ರಾಮಾಯಣವು ಜನಪ್ರಿಯವಾಗದ ಕಾರಣ ಅವನು ನಿರಾಶೆಯಿಂದ ತಾನು ಬರೆದ ರಾಮಾಯಣವನ್ನು ಸುಟ್ಟು ಅದರ ಬೂದಿಯನ್ನು ಮೈಗೆ ಹಚ್ಚಿ ಗೋಸಾವಿಯಾಗಲು ನಿರ್ಧರಿಸುವುದು, ಓಟುಕ್ಕುತ್ತರತನ್ನ ರಾಮಾಯಣವನ್ನು ಓದಲು ಕುಳಿತಾಗ ನಗಣ್ಯ ಶ್ರೋತೃಗಳಿರುತ್ತಿದ್ದರು.

ಇದರಿಂದಾಗಿ ಓಟುಕ್ಕುತ್ತರ ನಿರಾಶೆಗೊಳ್ಳುತ್ತಿದ್ದನು. ಅವನಿಗೆ ತನ್ನ ಎಲ್ಲ ಶ್ರಮವೂ ವ್ಯರ್ಥವಾಯಿತು ಎಂದು ಅನಿಸುತ್ತಿತ್ತು. ತಾನು ಅಪೇಕ್ಷಿತ ರೀತಿಯಲ್ಲಿ ಜೀವಿಸಿ ಮರಣ ಹೊಂದುವೆನು ಎಂದು ವಿಚಾರ ಮಾಡಿ ಮಾಡಿ ಅವನಿಗೆ ಹಿಂಸೆಯಾಗುತ್ತಿತ್ತು. ಅವನ ಜೀವನದಲ್ಲಿ ಎಲ್ಲೆಡೆಯೂ ಅಂಧಕಾರ ಪಸರಿಸಿತು. ಕೊನೆಗೆ ಒಂದು ದಿನ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಟ್ಟು ಆ ರಾಮಾಯಣದ ಬೂದಿಯನ್ನು ಬಳಿದುಕೊಂಡು ಗೋಸಾವಿಯಾಗಬೇಕೆಂದು ನಿರ್ಧರಿಸಿದನು.

ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಡುತ್ತಿರುವಾಗ ಕಂಬನನು ಅಲ್ಲಿಗೆ ಬರುವುದು ಹಾಗೂ ಅವನು ತನ್ನ ಮಿತ್ರನ ಕೈ ಹಿಡಿದು ಅವನನ್ನು ತಡೆಯುವುದು, ಈ ಕೆಟ್ಟ ವಿಷಯವು ಕಂಬನನ ಕಿವಿಗೆ ಬಿತ್ತು. ಅವನು ಧಾವಿಸಿ ಮಿತ್ರನ ಬಳಿ ಹೋದನು. ಅವನು ನೋಡಿದಾಗ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಡುತ್ತಿದ್ದನು.

ಕಂಬನನು ‘ಅರೆ, ಹುಚ್ಚ ಏನು ಮಾಡುತ್ತಿರುವೆ ? ನೀನೇ ರಚಿಸಿರುವ ರಾಮಾಯಣವನ್ನು ಏಕೆ ಸುಡುತ್ತಿರುವೆ ?’ಎಂದು ಕೇಳಿದನು. ಅದಕ್ಕೆ ಓಟುಕ್ಕುತ್ತರ’ನಿನ್ನ ಮುಂದೆ ನಾನು ಒಂದು ಮಿಂಚು ಹುಳುವಾಗಿದ್ದೇನೆ, ನನ್ನ ರಾಮಾಯಣವನ್ನು ಯಾರೂ ಕೇಳುವುದಿಲ್ಲ. ಅದು ಧೂಳು ಹಿಡಿದು ಬಿದ್ದಿರುವುದಕ್ಕಿಂತಲೂ ಸುಟ್ಟು ಹೋದರೆ ಒಳ್ಳೆಯದು’ಎಂದು ಹೇಳಿದನು.

ಕಂಬನನು ಓಟುಕ್ಕುತ್ತರ ಕೈಹಿಡಿದನು. ಆಗ ಓಟುಕ್ಕುತ್ತರ ರಾಮಾಯಣದಲ್ಲಿನ ಬೆಂಕಿಯಿಂದ ಸುಡದೇ ಉಳಿದ ಉತ್ತರಕಾಂಡವನ್ನು ಕಂಬನನು ತೆಗೆದುಕೊಂಡನು.

ಕಂಬನನು ಓಟುಕ್ಕುತ್ತರ ರಾಮಾಯಣದಲ್ಲಿನ ಉತ್ತರಕಾಂಡದಿಂದ ತನ್ನ ರಾಮಾಯಣದ ಕಾವ್ಯವನ್ನು ಪೂರ್ತಿಗೊಳಿಸಿವುದು, ಕಂಬನನು ಓಟುಕ್ಕುತ್ತರಗೆ ‘ಹುಚ್ಚ, ನೀನು ನನ್ನ ಮಿತ್ರನಲ್ಲವೇ ! ಈ ಸ್ವಾಹಾಕಾರವನ್ನು ಮಾಡುವ ಮೊದಲು ನನಗೆ ಹೇಳಬೇಕಿತ್ತಲ್ಲವೇ ! ಈಗ ನಾನು ಹೇಳುವುದನ್ನು ಕೇಳು.

ನಿನ್ನ ರಾಮಾಯಣವು ಪೂರ್ಣವಾಗಿದೆ. ನನ್ನ ರಾಮಾಯಣದ ಉತ್ತರಕಾಂಡವು ಪೂರ್ಣವಾಗಬೇಕಿದೆ. ಈಗ ನಾನು ಅದನ್ನು ರಚಿಸುವುದಿಲ್ಲ. ನನ್ನ ರಾಮಾಯಣಕ್ಕೆ ನಿನ್ನ ಈ ಉತ್ತರಕಾಂಡವನ್ನು ಜೋಡಿಸುತ್ತೇನೆ, ಅಂದರೆ ರಾಮಾಯಣವು ಪೂರ್ಣವಾಗುತ್ತದೆ.

ಜನರು ನಮ್ಮಿಬ್ಬರನ್ನೂ ರಾಮಾಯಣ ಕರ್ತರೆಂದು ಗುರುತಿಸುತ್ತಾರೆ!. ಇದು ಮಿತ್ರಪ್ರೇಮದ ಆದರ್ಶವಾಗುವುದು !’,ಎಂದು ಹೇಳಿದನು.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!