Daily story: Great Indian culture

ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೇಷ್ಠ ಭಾರತೀಯ ಸಂಸ್ಕೃತಿ

Daily story: ಕಳೆದ ಅನೇಕ ವರ್ಷಗಳಿಂದ ಅಭ್ಯಾಸಕ್ರಮದಲ್ಲಿ ಇತಿಹಾಸದ ಪುಸ್ತಕದಿಂದ ಹಿಂದುಸ್ಥಾನದ ಸತ್ಯ ಇತಿಹಾಸವನ್ನು ಹೇಳುವುದಿಲ್ಲ.

ಇದರ ಪರಿಣಾಮವೆಂದರೆ ವಿದ್ಯಾರ್ಥಿಗೆ ‘ನಮ್ಮ ಸಂಸ್ಕೃತಿಯಲ್ಲಿ’ ನಮ್ಮ ಇತಿಹಾಸದಲ್ಲಿ ಯಾರೂ ಪರಾಕ್ರಮಿಗಳಿರಲಿಲ್ಲ, ಯಾರೂ ಜ್ಞಾನಿಯಿರಲಿಲ್ಲ’, ಎಂದೆನಿಸುತ್ತದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರ ಜ್ಞಾನವಿದೆ. ನಮ್ಮ ದೇಶದಲ್ಲಿ ಜ್ಞಾನದ ಕೊರತೆಯಿದೆಯೆಂಬ ಸಂಸ್ಕಾರವನ್ನು ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಬಿಂಬಿಸಲಾಗುತ್ತದೆ.

ನಮ್ಮ ಉಜ್ವಲ ಪರಂಪರೆಯ ಪರಿಚಯ ಅವನಿಗೆ ಅಗುವುದಿಲ್ಲ. ಸ್ವಾಭಾವಿಕವಾಗಿಯೇ ಅವನ ಮನಸ್ಸಿನಲ್ಲಿ ಸ್ವರಾಷ್ಟ್ರಕ್ಕಿಂತ ಇತರ ರಾಷ್ಟ್ರಗಳ ಆಕರ್ಷಣೆಯು ವೃದ್ಧಿಯಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುವಾಗ ನಾವು ಸ್ವಧರ್ಮ ಮತ್ತು ಸಂಸ್ಕೃತಿಗೆ ದ್ರೋಹ ಮಾಡುತ್ತಿದ್ದೇವೆಯೆಂಬ ಅರಿವು ಅವನಿಗಿರುವುದಿಲ್ಲ. ಅದರ ಪರಿಣಾಮವಾಗಿ ಇಂದಿನ ಪೀಳಿಗೆಯು ಸಂಸ್ಕಾರಗಳನ್ನು ಕಳೆದುಕೊಂಡಿದೆ.

ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಗೊಳಿಸುವ ಸಾಮರ್ಥ್ಯವು ಹಿಂದೂ ಧರ್ಮಗ್ರಂಥಗಳಲ್ಲಿದೆ! ಮೊದಲು ದೀಪ ಹಚ್ಚುವ ಸಂದರ್ಭದಲ್ಲಿ ‘ಶುಭಂಕರೋತಿ’ ಹೇಳಲಾಗುತ್ತಿತ್ತು.

ಈಗ ಮಕ್ಕಳು ದೂರದರ್ಶನದ ಮುಂದೆ ಕುಳಿತು ‘ಕಾರ್ಟೂನು’ ಅಥವಾ ಇತರ ಮಾಲಿಕೆಗಳನ್ನು ನೋಡುತ್ತಾರೆ. ದೇಶಭಕ್ತ ಕ್ರಾಂತಿಕಾರರ ಕಾರ್ಯದ ಪರಿಚಯ ಸಹ ಮಕ್ಕಳಿಗೆ ಮಾಡಿಕೊಡಲಾಗುವುದಿಲ್ಲ.

ಸುತ್ತಮುತ್ತ ನಡೆಯುವ ಅನೇಕ ವ್ಯವಹಾರಗಳು (ಆಗುಹೋಗುಗಳು), ವಿಷಯಗಳು ವಿದ್ಯಾರ್ಥಿಗಳಿಗೆ ವೈಚಾರಿಕ, ಬೌದ್ಧಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ವಿಚಲಿತಗೊಳಿಸುತ್ತಿವೆ.

ಇಂದಿನ ಜೀವ ಹಿಂಡುವ ಸ್ಪರ್ಧಾತ್ಮಕ ವಾತಾವರಣದಲ್ಲಿ ಮಕ್ಕಳಲ್ಲಿ ಭಾವನಿಕವಾಗಿ ಉಸಿರುಗಟ್ಟುತ್ತಿದೆ. ಬೌದ್ಧಿಕದೃಷ್ಟಿಯಿಂದ ಸಾಮಾನ್ಯವಾಗಿರುವ ವಿದ್ಯಾರ್ಥಿಯು ನಿರಾಶೆಯೆಂಬ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಅದರಿಂದ ಹೊರಗೆ ಬರಲು ಅವನಿಗೆ ಮಾರ್ಗ ದೊರೆಯುವುದಿಲ್ಲ. ಹಾಗಾಗಿ ಅವನು ಆತ್ಮಹತ್ಯೆಯ ಮಾರ್ಗವನ್ನು ಸ್ವೀಕರಿಸುತ್ತಾನೆ.

ನಮ್ಮ ಸಂಸ್ಕೃತಿಯು ಧ್ಯೇಯನಿಷ್ಟೆ, ಮತ್ತು ಜೀವನನಿಷ್ಟೆಯನ್ನು ಕಲಿಸುತ್ತದೆ. ಆದುದರಿಂದ ನಿರಾಶೆಯು ಮನುಷ್ಯನ ಹತ್ತಿರ ಸುಳಿಯುವುದಿಲ್ಲ. ಗೀತೆಯಲ್ಲಿನ ಜ್ಞಾನವು ‘ಜೀವನ ಹೇಗೆ ಜೀವಿಸಬೇಕು’, ಎಂಬುದನ್ನು ಕಲಿಸುತ್ತದೆ.

ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿನ ಕಥೆಗಳು ಹೇಗೆ ವರ್ತಿಸಬೇಕು ಹಾಗೂ ಹೇಗೆ ವರ್ತಿಸಬಾರದು ಎಂಬ ಎರಡೂ ವಿಷಯಗಳನ್ನು ಹೇಳುತ್ತದೆ.

ನೈತಿಕತೆ, ಜೀವನ ಮೌಲ್ಯ ಹಾಗೂ ‘ನಾನು ಯಾರ ದೃಷ್ಟಿಯಲ್ಲಿಯೂ ಕೀಳ್ಮಟ್ಟಕ್ಕಿಳಿಯ ಬಾರದು’, ಎಂಬ ವಸ್ತವಸ್ಥಿತಿಯ ಪಾಠ ಕಲಿಸುವ ಆದರ್ಶವು ವಿದ್ಯಾರ್ಥಿಗಳ ಮುಂದಿಲ್ಲ.

ಶಿಕ್ಷಣತಜ್ಞರು ಇಂತಹ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟು ವಿದ್ಯಾರ್ಥಿಗಳಿಗೆ ಬೌದ್ಧಿಕ, ವೈಚಾರಿಕ, ಭಾವನಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಸುದೃಢಗೊಳಿಸುವ ದೃಷ್ಟಿಯಿಂದ ಅಭ್ಯಾಸಕ್ರಮಗಳನ್ನು ಆಯೋಜಿಸಬೇಕು.

ಮನಸ್ಸಿಗೆ ಒತ್ತಡ ಹಾಕದೆ ಜ್ಞಾನ ಸಂಪಾದಿಸಬಹುದು ಎಂಬ ವಿಷಯ ಇಂದು ಎಲ್ಲರು ಮರೆತ್ತಿದ್ದಾರೆ. ಶಾಸನ ಸಹ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿ ತಮ್ಮ ಮಕ್ಕಳಿಗೆ ನಿಜ ಇತಿಹಾಸವನ್ನು ಹೇಳುವ ಧೈರ್ಯ ತೋರಿಸಬೇಕು .

ವಿದ್ಯಾರ್ಥಿಗಳಿಗೆ ಕಲಿಸುವ ಅಧ್ಯಾಪಕವರ್ಗವು ಜ್ಞಾನಪಿಪಾಸು ಆಗಿರಬೇಕು. ಕೌಶಲ್ಯಪೂರ್ಣವಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಅಧಿಕಾರ ಅವನಲ್ಲಿರಬೇಕು.

‘ಜ್ಞಾನ ಸಂಪಾದನೆ ಮಾಡಿದಾಗ’ ತಂತಾನೇ ಗುಣ ಸಿಗುತ್ತದೆಯೆಂಬ’, ವಿಶ್ವಾಸವನ್ನು ವಿದ್ಯಾರ್ಥಿಯ ಮನಸ್ಸಿನಲ್ಲಿ ನಿರ್ಮಾಣ ಮಾಡಬೇಕು.

ನಮ್ಮ ವಿದ್ಯಾರ್ಥಿ ದೀಪ ಸ್ತಂಭದಂತಿರಬೇಕು, ಬಿರುಗಾಳಿ ಸಂಕಟದಲ್ಲಿ ನಿಶ್ಚಲವಾಗಿ, ಧೃಡವಾಗಿ ಮತ್ತು ಅಪರಾಜಿತ ಯೋದ್ಧನ ಹಾಗೆ ಕಾಲೂರಿ ನಿಲ್ಲುವವನು ಹಾಗೂ ನಮ್ಮ ಇತರ ಬಾಂಧವರಿಗೆ ಮಾರ್ಗದರ್ಶನ ಮಾಡುವವನಾಗಿರಬೇಕು.

ಇಂತಹ ಶಿಕ್ಷಣಪದ್ಧತಿ ಕೇವಲ ರಾಷ್ಟ್ರದಲ್ಲಿ ಮಾತ್ರವಲ್ಲ, ಸಂಪೂರ್ಣ ಮಾನವ ಜಾತಿಯ ಉದ್ಧಾರ ಮಾಡುವುದೆಂಬುದರಲ್ಲಿ ಸಂಶಯವಿಲ್ಲ.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

[ccc_my_favorite_select_button post_id="115546"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!