
ವೈರಲ್ ನ್ಯೂಸ್: ಮನೆಯ ಹಿಂಬದಿಯಲ್ಲಿ ಕಾಣಿಸಿಕೊಂಡ ನಾಗರಹಾವಿನೊಂದಿಗೆ ಸಾಕು ನಾಯಿ ಒಂದು ಸೆಣಸಾಡಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸಾಕು ನಾಯಿ ಹೆಡೆ ಬಿಚ್ಚಿರುವ ನಾಗರಹಾವನ್ನು ಗುರುತಿಸಿ, ಕೇವಲ ಬೊಗಳುವುದಕ್ಕೆ ನಿಲ್ಲದೆ, ಹಾವನ್ನು ಕಚ್ಚಿ ತುಂಡು ತುಂಡು ಮಾಡಿ ದೂರ ಎಸೆದಿದೆ.
ಈ ದೃಶ್ಯವನ್ನು ನೋಡಿದವರಿಗೆ ಭಯ ಮತ್ತು ಆಶ್ಚರ್ಯ ಏಕಕಾಲದಲ್ಲಿ ಉಂಟಾಗುತ್ತದೆ.
ನಾಯಿಯ ಈ ಕ್ರಿಯೆಯನ್ನು ನೋಡಿದ ನೆಟ್ಟಿಗರು ಅದರ ಧೈರ್ಯವನ್ನು ಹೊಗಳುತ್ತಿದ್ದಾರೆ. ಇದೇ ವೇಳೆ, ಕೆಲವರು ಹಾವನ್ನು ಹಿಡಿದು ದೂರ ಬಿಡುವುದು ಸಾಕಾಗಿತ್ತು, ಅದನ್ನು ಕೊಲ್ಲುವ ಅಗತ್ಯವಿರಲಿಲ್ಲ ಎಂದು ಅನೇಕರು ನಾಯಿಯ ಮಾಲೀಕರನ್ನು ಟೀಕಿಸುತ್ತಿದ್ದಾರೆ.
ವೀಡಿಯೋದಲ್ಲಿ ನಾಯಿಯ ಮಾಲೀಕರು “ಹಿಟ್ಲರ್ ಹಿಟ್ಲರ್” ಎಂದು ಕೂಗುತ್ತಾ ನಾಯಿಯನ್ನು ಹಾವಿನಿಂದ ದೂರವಿರಿಸಲು ಪ್ರಯತ್ನಿಸುವುದನ್ನು ಕಾಣಬಹುದು. ಆದರೆ, ಅದಕ್ಕೂ ಮುಂಚೆಯೇ ನಾಯಿ ಹಾವನ್ನು ತುಂಡು ತುಂಡು ಮಾಡಿದ್ದು ಕಾಣಸಿಗುತ್ತದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						