ಚಿಕ್ಕಬಳ್ಳಾಪುರ (Chikkaballapura): ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ ಸೂಲುಕುಂಟೆ ಗ್ರಾಮದ ನಿವಾಸಿ ರಾಮು ಅವರ ಹೆಂಡತಿ ಜಯಮ್ಮ (24 ವರ್ಷ) ಮತ್ತು ಮಗಳಾದ ಐಶ್ವರ್ಯ (4 ವರ್ಷ) ಇವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರಿಗೂ ಹೇಳದೆ ಕೇಳದೆ ನಾಪತ್ತೆಯಾಗಿರುತ್ತಾರೆ.
ನಂತರ ಮನೆಯ ಸುತ್ತಮುತ್ತ, ಸ್ನೇಹಿತರ ಮನೆಯಲ್ಲಿ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಕಾರಣ ನನ್ನ ಹೆಂಡತಿ ಮತ್ತು ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಮನವಿ ಮಾಡಿದ್ದಾರೆ.
ಚಹರೆ: ಜಯಮ್ಮ 24 ವರ್ಷ, ಜಾತಿ: ಹಕ್ಕಿಪಿಕ್ಕಿ ಜನಾಂಗ, 4.5 ಅಡಿ ಎತ್ತರವಿದ್ದು, ಉದ್ದ ಮುಖ, ಗೋಧಿ ಮೈಗೆಂಪು ಬಣ್ಣ, ಸಾಧರಣ ಮೈ ಕಟ್ಟು, ಬ್ಲೂ ಕಲರ್ ಸೀರೆ ಧರಿಸಿದ್ದು, ಕನ್ನಡ, ತೆಲುಗು, ಹಕ್ಕಿಪಿಕ್ಕಿ ಮಾತನಾಡುತ್ತಾರೆ,
ಐಶ್ವರ್ಯ 4 ವರ್ಷ, ಎತ್ತರ 2 ಅಡಿ, ಉದ್ದ ಮುಖ, ಗೋಧಿ ಮೈಗೆಂಪು ಬಣ್ಣ, ಸಾಧರಣ ಮೈ ಕಟ್ಟು, ಚೂಡಿದಾರ ಧರಿಸಿದ್ದು, ಹಕ್ಕಿಪಿಕ್ಕಿ ಭಾಷೆ ಮಾತನಾಡುತ್ತಾಳೆ.
ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆ ಹಾಗೂ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪೊಲೀಸ್ ಸಬ್ ಇನ್ಸ್ ಪೇಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.