ದೊಡ್ಡಬಳ್ಳಾಪುರ (harithalekhani): ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಹಾವನ್ನು ರಕ್ಷಸಿದ ಉರಗ ರಕ್ಷಕ ಸ್ನೇಕ್ ಉಲ್ಲಾಸ್ ಅವರು ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಘಟನೆ ನಗರದ ಖಾಸ್ ಬಾಗ್ ನಲ್ಲಿ ವರದಿಯಾಗಿದೆ.
ಖಾಸ ಬಾಗ್‌ನ ಮಲೇಮಹದೇಶ್ವರ ಬಡಾವಣೆಯಲ್ಲಿ ವಿದ್ಯಾವತಿ ಎನ್ನುವವರು ಮನೆಯ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾರೆ. ಕಳೆದ ರಾತ್ರಿ ಮಳೆಯ ವೇಳೆ ಹಾವೊಂದು ಮನೆಯ ಮುಂದೆ ಇರುವ ನೀರಿ ತೊಟ್ಟಿಗೆ ಬಿದ್ದಿದೆ.
ಇಂದು ಬೆಳಗ್ಗೆ ವಿದ್ಯಾವತಿ ಅವರ ಪತಿ ಮೋಹನ್ ಕುಮಾರ್ ಅವರು ಕಾಮಗಾರಿ ಪರಿಶೀಲನೆಗೆ ತೆರಳಿದ್ದ ವೇಳೆ ತೊಟ್ಟಿಯಲ್ಲಿ ಹಾವು ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಅವರ ಬಾವ ರಾಜ್ ವಡ್ಡಳ್ಳಿ ಅವರಿಗೆ ಮಾಹಿತಿ ನೀಡಿದ್ದು, ರಾಜ್ ವಡ್ಡಳ್ಳಿ ಅವರು ಸ್ನೇಕ್ ಉಲ್ಲಾಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉಲ್ಲಾಸ್ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇನ್ನೂ ರಕ್ಷಿಸಲಾದ ಹಾವನ್ನು ಕೊಳಕು ಮಂಡಲ ಕರೆಯುತ್ತಾರೆ ಎಂದು ಸ್ನೇಕ್ ಉಲ್ಲಾಸ್ ಮಾಹಿತಿ ನೀಡಿದ್ದಾರೆ. ಎರಡು ಅಡಿ ಉದ್ದವಿರುವ ಸುಮಾರು ಎರಡು ವರ್ಷ ಪ್ರಾಯದ ಕೊಳಕು ಮಂಡಲ ಹಾವಿನಲ್ಲಿ ವಿಷದ ಪ್ರಮಾಣ ಹೆಚ್ಚಿದ್ದು, ಅದು ಕಚ್ಚಿದ ಭಾಗ ನಿಧಾನವಾಗಿ ಕೊಳೆಯುತ್ತ ಬರುತ್ತದೆ ಎಂದು ಹೇಳಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						