ಚಿಕ್ಕೋಡಿ: ಶಾಲೆಗಳಿಗೆ ಬೇಸಿಗೆ ರಜೆಯ ನಡುವೆ, ಬಿಸಿಲ ಬೇಗೆಯನ್ನು ತಣಿಸುವ ಸಲುವಾಗಿ ಈಜನ್ನು ಕಲಿಯಲು ಕೃಷಿ ಹೊಂಡದಲ್ಲಿ (Krushi Honda) ಈಜಲು (To swim) ಹೋದ ಮೂವರು ಬಾಲಕರು, ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇಂಗಳಿ ಗ್ರಾಮದ ಪೃಥ್ವಿರಾಜ್ ಕೆರಬಾ( 13 ವರ್ಷ), ಅಥರ್ವ ಸೌಂದಲಗೆ (15 ವರ್ಷ), ಸಮರ್ಥ ಗಡಕರಿ (13 ವರ್ಷ) ಮೃತ ವಿದ್ಯಾರ್ಥಿಗಳು.
ಈ ಮೂವರು ಈಜು ಕಲಿಯಲು ಮನೆಯಿಂದ ಸೈಕಲ್ ತೆಗೆದುಕೊಂಡು ಊರ ಹೊರಗಿರುವ ಕೃಷಿ ಹೊಂಡಕ್ಕೆ ಈಜು ಕಲಿಯಲು ಕೃಷಿ ಹೊಂಡಕ್ಕೆ ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮೂವರು ವಿದ್ಯಾರ್ಥಿಗಳಿಗೆ ಈಜು ಬರದೆ ಇದ್ದ ಕಾರಣಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೊಲದ ಮಾಲೀಕ ಸುತ್ತಾಡುತ್ತಿದ್ದಾಗ ಹೊಂಡದ ಪಕ್ಕದಲ್ಲಿ ಸೈಕಲ್ ಇದ್ದುದನ್ನು ಕಂಡು ಹೊಂಡ ಇಣುಕಿದಾಗ ಮೂವರು ಬಾಲಕರ ಶವ ಪತ್ತೆಯಾಗಿದೆ.
ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೇಸಿಗೆ ರಜೆಯಲ್ಲಿ ಮಕ್ಕಳ ಕಡೆ ಪೋಷಕರು ಹೆಚ್ಚಿನ ಗಮನ ಹರಿಸುವುದು ಎಷ್ಟು ಮುಖ್ಯ ಎಂಬುದು ಈ ಘಟನೆಯಿಂದ ಅರಿವಾಗಬೇಕಿದೆ.