ಬೆಂಗಳೂರು; ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅನುಮತಿ ನೀಡಿದರೆ ಪಾಕಿಸ್ತಾನದ ಮೇಲೆ ಸೂಸೈಡ್ ಬಾಂಬರ್ ಆಗಿ, ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯ ವೇಳೆ ಮಾತನಾಡಿದ ಅವರು, ವಿ ಆರ್ ಇಂಡಿಯನ್ಸ್, ವೀ ಆರ್ ಹಿಂದೂಸ್ಥಾನಿ. ಪಾಕಿಸ್ತಾನಕ್ಕೂ ನಮಗೂ ಸಂಬಂಧ ಇಲ್ಲ, ನಮಗೂ ಪಾಕಿಸ್ತಾನಕ್ಕೂ ಯಾವ ಸಂಬಂಧನೂ ಇಲ್ಲ.. ಯುದ್ದ ಮಾಡಬೇಕೆಂದರೆ ರೆಡಿ.
ಮಂತ್ರಿಯಾಗಿ ನನ್ನ ಕಳಿಸುವುದಾದರೆ ಹೇಳಿ ನಾನು ಹೋಗಲು ಸಿದ್ದ, ದೇಶಕ್ಕೋಸ್ಕರ ಯುದ್ದ ಮಾಡಲು ನಾನೇ ಹೋಗ್ತಿನಿ.
ನಡಿರಿ ಹೋಗ್ಬಿಡುವ, ನಾನು ಹೋಗ್ತಿನಿ, ಬೇಕಾದ್ರೆ ಸೂಸೈಡ್ ಬಾಂಬ್ ಆಗಲು ಸಿದ್ದ, ನಾನು ತಮಾಷೆಗೆ, ಜೋಷಲ್ ಹೇಳ್ತಾ ಇಲ್ಲ, ಇದೇ ದೇಶಕ್ಕೆ ನನ್ನ ಅಗತ್ಯ ಇದ್ದರೆ ಸೂಸೈಡ್ ಬಾಂಬರ್ ಆಗಲು ಸಿದ್ದ.
ಅಮಿತ್ ಶಾ, ಮೋದಿ ಅನುಮತಿ ಕೊಡಲಿ ಅಲ್ಲ ಮೇಲೆ ಆಣೆ, ದೇವರ ಮೇಲೆ ಆಣೆ ನನ್ನ ದೇಹಕ್ಕೇ ಬಾಂಬ್ ಕಟ್ಟಿಕೊಂಡು ಯುದ್ಧ ಮಾಡಲು ಪಾಕಿಸ್ತಾನಕ್ಕೆ ಹೋಗುತ್ತೇನೆ.
ಇದೇ ವೇಳೆ ಪಹಲ್ಲಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, ಇದು ಮುಗ್ಧ ನಾಗರಿಕರ ವಿರುದ್ದ ಉಗ್ರರ ಹೇಯ ಕೃತ್ಯ ಎಂದು ಟೀಕಿಸಿದರು.
ಪ್ರತಿಯೊಬ್ಬ ಭಾರತೀಯರೂ ಈ ಸಮಯದಲ್ಲಿ ಒಗ್ಗಟ್ಟಿನಿಂದ ನಿಲ್ಲಬೇಕು. ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಮೀರ್ ನುಡಿದರು.