ದೊಡ್ಡಬಳ್ಳಾಪುರ: ನಗರದ ಇತಿಹಾಸ ಪ್ರಸಿದ್ದ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಿಯ ಕರಗ ಮಹೋತ್ಸವ (Karaga Mahotsav of Sri Sapta Matrika Mariyamma Devi) ಮೇ 12 ರಂದು ನಡೆಯಲಿದ್ದು, ಕರಗದ ವ್ರತಾಚರಣೆಗಳಿಗೆ ಚಾಲನೆ ದೊರೆತಿದೆ.
ಸಪ್ತಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ಕರಗ ಮಹೋತ್ಸವದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ, ಕಳಸ ಸ್ಥಾಪನೆ, ವಿಶೇಷ ಗಣ ಹೋಮ,ನವಗ್ರಹ ಹೋಮ, ಚಂಡಿಕಾ ಹೋಮ, ಧ್ವಜಾರೋಹಣ, ಬಲಿ ಪೂಜೆ ಕರ್ಯಯಕ್ರಮಗಳು ಜರುಗಿದವು.
ಕರಗ ಹೊರುವ ಪೂಜಾರಿ ಮುನಿರತ್ನಂ ಬಾಲಾಜಿ ಅವರು ಪ್ರತಿದಿನ ಸ್ನಾನಾದಿ ವ್ರತಗಳನ್ನು ಪೂರೈಸಿ ಸಂಜೆ ನಗರ ಪ್ರದಕ್ಷಿಣೆ ಕೈಗೊಳ್ಳುತ್ತಿದ್ದಾರೆ.
ಆಂಧ್ರದ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ ಇದೇ 5ನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊರಲಿದ್ದಾರೆ.
ಶ್ರೀ ಸಪ್ತಮಾತೃಕಾ ಮಾರಿಯಮ್ಮ ಸೇವಾಭಿವೃದ್ದಿ ಮತ್ತು ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ನೇತೃತ್ವದಲ್ಲಿ ಕರಗ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿವೆ.
ಕರಗ ಉತ್ಸವದ ದಿನದವರೆಗೆ ನಿತ್ಯ ಅಭಿಷೇಕ, ಪೊಂಗಲ್ ಸೇವೆ, ಸ್ನಾನ ಪೂಜಾದಿ ಕರ್ಯಯಕ್ರಮಗಳು ಹಾಗೂ ನಗರ ಪ್ರದಕ್ಷಿಣೆ ನಡೆಯಲಿವೆ.
ಮೇ 11ರಂದು ಬೆಳಗಿನ ಜಾವ 4.30ಕ್ಕೆ ಹಸಿ ಕರಗ ಗಗನರ್ಯಕ ಮಠದ ಸನ್ನಿಯಿಂದ ಆರಂಭಗೊಳ್ಳಲಿದೆ.