ಬೆಂಗಳೂರು: ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ (Operation Sindoora) ಹೆಸರಲ್ಲಿ ಯಶಸ್ವಿ ದಾಳಿ ನಡೆಸುತ್ತಿದೆ.
ಆದರೆ ಪಾಕಿಸ್ತಾನದ ಕಡೆಯಿಂದ ಭಾರತೀಯರಲ್ಲಿ ಗೊಂದಲ ಸೃಷ್ಟಿಸಲು ಸಾಮಾಜಿಕ ಜಾಲತಾಣದ ಮೂಲಕ ಗೊಂದಲ ಮಾಹಿತಿ ಹರಡುತ್ತಿದೆ. ಈ ರೀತಿ ಮಾಹಿತಿ ಕಂಡು ಬಂದಲ್ಲಿ ರಿಪೋರ್ಟ್ ಮಾಡುವಂತೆ PIB ಮನವಿ ಮಾಡಿದೆ.
ಈ ಕುರಿತಂತೆ ಟ್ವಿಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸಾಮಾಜಿಕ ಮಾಧ್ಯಮವು ಪಾಕಿಸ್ತಾನ (Pakistan) ಪ್ರಾಯೋಜಿತ ಅಪಪ್ರಚಾರದಿಂದ ತುಂಬಿರುತ್ತದೆ.
ಪ್ರತಿಯೊಂದು ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಬಹಳ ಮುಖ್ಯ.
ನೀವು ಅನುಮಾನಾಸ್ಪದ ವಿಷಯವನ್ನು, ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ ಅಥವಾ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡರೆ, ಅದನ್ನು #PIBFactCheck ಗೆ ವರದಿ ಮಾಡಿ ಎಂದು PIB ಸೂಚನೆ ನೀಡಿದೆ
ವಾಟ್ಸ್ಯಾಪ್: +91 8799711259
ಇಮೇಲ್: [email protected]