ನವದೆಹಲಿ; ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷತೆಯಲ್ಲಿ ನಿನ್ನೆ ರಾತ್ರಿ ನಡೆದ ಸುದೀರ್ಘ ಸಂಧಾನ ಸಭೆ ಬಳಿಕ ಭಾರತ ಒಪ್ಪಿದ್ದ ಕದನ ವಿರಾಮವನ್ನು, ನಾಯಿ ಬಾಲ ಡೊಂಕು ಎಂಬಂತೆ ಪಾಕಿಸ್ತಾನ (Pakistan) ಕದನ ವಿರಾಮ ಉಲ್ಲಂಘನೆ ಮಾಡಿದೆ.
ಹೌದು ಭಾರತೀಯ ಸೇನೆಯ ಅಪರೇಷನ್ ಸಿಂಧೂರ (Operation Sindoora) ದಾಳಿಗೆ ತತ್ತರಿಸಿದ ಪಾಪಿ ಪಾಕಿಸ್ತಾನ, ಮಹಾಪ್ರಭು ರಕ್ಷಿಸಿ.. ಎಂಬಂತೆ ಅಮೇರಿಕಾಗೆ ಮೊರೆಯಿಟ್ಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಡೆದ ಸುದೀರ್ಘ ನಡೆದ ಸಭೆಯ ಬಳಿಕ, ಇಂದು ಸಂಜೆ 5 ಗಂಟೆಯಿಂಸ ಯಾವುದೇ ದಾಳಿ ನಡೆಸುವುದಿಲ್ಲ ಎಂದು ಭಾರತ ಕದನ ವಿರಾಮ ಘೋಷಿಸಿತ್ತು.
ಆದರೆ ಘೋಷಣೆಯಾದ ಕೆಲವೇ ನಿಮಿಷಗಳ ಬಳಿಕ ಒಡಂಬಡಿಕ ಮುರಿದ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಶ್ರೀನಗರ ವ್ಯಾಪ್ತಿಯಲ್ಲಿ ಡ್ರೋನ್ ದಾಳಿ ನಡೆಸಿದೆ.
ದೊಡ್ಡಣ್ಣನ ಮಾತು ನಂಬಿ ಕದನ ವಿರಾಮಕ್ಕೆ ಒಪ್ಪಿದ್ದ ಭಾರತ, ಪಾಪಿ ಪಾಕಿಸ್ತಾನದ ಕದನ ವಿರಾಮದಿಂದ ಕೆರಳಿದ್ದು, ಮತ್ತೆ ಪ್ರತಿ ದಾಳಿಗೆ ಭಾರತೀಯ ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡುವುದಾಗಿ ಕೇಂದ್ರ ಸರ್ಕಾರದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆ ಬಳಿಕ ಕೆಲವೇ ನಿಮಿಷಗಳಲ್ಲಿ ಪಾಕ್ ಪ್ರಧಾನ ಸುದ್ದಿಗೋಷ್ಠಿ ಕರೆದಿದ್ದು ಯಾವ ಹೇಳಿಕೆ ನೀಡಲಿದ್ದಾರೆ ಕಾದು ನೋಡಬೇಕಿದೆ.