ಬೆಂಗಳೂರು: ಇಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ 68ನೇ ಜನ್ಮದಿನದ ಸಂಭ್ರಮ.
ಆದರೆ ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಹೋರಾಡುತ್ತಿರುವಾಗ ನನ್ನ ಜನ್ಮದಿನಾಚರಣೆ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ.
“ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ” ಎಂದು ಡಿಸಿಎಂ ಹೇಳಿದ್ದಾರೆ.
ಅಲ್ಲದೆ “ನನ್ನ ಜನ್ಮದಿನದ ಹೆಸರಿನಲ್ಲಿ ಯಾರೊಬ್ಬರೂ ಸಂಭ್ರಮಾಚರಣೆ ಮಾಡಬಾರದು. ನಾನು ಊರಿನಲ್ಲಿ ಇರುವುದಿಲ್ಲ. ಅಂದು ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸ, ಕಚೇರಿಗೆ ಬರುವುದು ಬೇಡ. ಯಾರೂ ಅನ್ಯತಾ ಭಾವಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು” ಎಂದು ಡಿಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ವಿನಂತಿ ಮಾಡಿದ್ದಾರೆ.
ಆದರೆ ಡಿಕೆ ಶಿವಕುಮಾರ್ ಅವರಿಗೆ ಇರುವ ಅಪಾರ ಬೆಂಬಲಿಗರು ಸುಮ್ನಿರ್ತಾರಾ..! ಈ ಬಾರಿ ಅವರ ಬರ್ತ್ ಡೇಯನ್ನು ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಲು ಪ್ಲಾನ್ ಮಾಡಿದ್ದಾರೆ.
ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳು ವಿವಿಧ ರೀತಿಯ ಪೋಟೋ, ವಿಡಿಯೋ ಕ್ರಿಯೇಷನ್ ಮಾಡಿ, ಶುಭಾಶಯಗಳನ್ನು ಕೋರುತ್ತಿದ್ದಾರೆ.
ಇದರಲ್ಲಿ ಒಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಹೌದು AI ತಂತ್ರಜ್ಞಾನ ಬಳಸಿ ವಿಡಿಯೋ ಕ್ರಿಯೇಟ್ ಮಾಡಲಾಗಿದ್ದು, ಡಿಕೆ ಶಿವಕುಮಾರ್ ಅವರ ಬಾಲ್ಯ ಪ್ರೌಢ, ಯವ್ವನ ಹಾಗೂ ರಾಜಕೀಯದ ಕೆಲ ಸನ್ನಿವೇಶಗಳ ಫೋಟೋ ಬಳಸಿ ವಿಡಿಯೋ ತಯಾರು ಮಾಡಲಾಗಿದೆ.
ಸದ್ಯ ಡಿಕೆ ಶಿವಕುಮಾರ್ ಅವರ ಈ AI ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ವಿಡಿಯೋ ವಿನ್ಯಾಸ ಎಲ್ಲರ ಮೆಚ್ಚುಗೆ ಗಿಟ್ಟಿಸಿದೆ.
ಅಲ್ಲದೆ ಅಭಿಮಾನಿಗಳು “THE DKS” ರಾತ್ರೋರಾತ್ರಿ ಸೃಷ್ಟಿಯಾದ ಬ್ರಾಂಡ್ ಅಲ್ಲ. ವಿದ್ಯಾರ್ಥಿ ನಾಯಕತ್ವದಿಂದ ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗುವವರೆಗೆ ಈ ಬಂಡೆ ಅಚಲವಾಗಿ ನಿಂತಿದೆ. ಹೋರಾಟವೇ ಇವರ ಜೀವನ, ಇಂಥ ನಾಯಕನನ್ನು ಪಡೆದ ನಾವೇ ಧನ್ಯ.
ಹುಟ್ಟುಹಬ್ಬದ ಶುಭಾಶಯಗಳು @DKShivakumar ಅಣ್ಣಾ ಎಂದು ಹರಸುತ್ತಿದ್ದಾರೆ.