ಬೆಳಗಾವಿ: ಮಳೆಗೆ (Rain) ಮನೆಯ ಗೋಡೆ ಕುಸಿದು 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಗೋಕಾಕ್ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕೀರ್ತಿಲಾ ನಾಗೇಶ್ ಪೂಜಾರಿ (3) ಎಂದು ಗುರುತಿಸಲಾಗಿದೆ.
ಒಂದು ರೂಮ್ ನಲ್ಲಿ ಮಲಗಿದ್ದ ಅಕ್ಕತಂಗಿ, ಮತ್ತೊಂದು ರೂಮ್ ನಲ್ಲಿ ತಂದೆ ತಾಯಿ ಮಲಗಿದ್ದರು. ಬೆಳಗಿನ ಜಾವ ಕುಸಿದು ಮಕ್ಕಳು ಮಲಗಿದ್ದ ಭಾಗದ ಗೋಡೆ ಕುಸಿದಿದೆ.
ಘಟನೆಯಲ್ಲಿ ಮತ್ತೋರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿ ಶವ ಗೋಕಾಕ್ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಮೃತ ಬಾಲಕಿಯ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಸ್ಥಳಕ್ಕೆ ಗೋಕಾಕ್ ಶಹರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.