ದೊಡ್ಡಬಳ್ಳಾಪುರ: ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಮೆಡಿ ವೇಸ್ಟ್ಗಳನ್ನು (Medi Waste) ಸಮರ್ಪಕವಾಗಿ ವಿಲೇವಾರಿ ಮಾಡಬೇಕೆಂಬ ಸರ್ಕಾರದ ಆದೇಶವಿದ್ದರು, ಕೆಲ ಖಾಸಗಿ ಆಸ್ಪತ್ರೆಗಳ ಬೇಜವಬ್ದಾರಿ ವರ್ತನೆಯಿಂದ ಅರಳು ಮಲ್ಲಿಗೆ ಕೆರೆಯ ಆವರಣ ಮೆಡಿ ವೇಸ್ಟ್ ತಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಸತೀಶ್, ಖಾಸಗಿ ಆಸ್ಪತ್ರೆಗಳ ಬೇಜವಬ್ದಾರಿಯಿಂದ ಕೆರೆಯ ಆವರಣ ಹಲವು ನೂರಕ್ಕೂ ಹೆಚ್ಚು ಕೆ.ಜಿ ಮೆಡಿ ವೇಸ್ಟ್ ತುಂಬುತ್ತಿದೆ.
ಈ ವ್ಯಾಪ್ತಿಯಲ್ಲಿ ಎಲ್ಲೆಡೆ ಸಿರಿಂಜ್, ರಕ್ತ ಸಿಕ್ತ ಬ್ಯಾಂಡೇಜ್, ಪ್ಲ್ಯಾಸ್ಟಿಕ್ ಬಾಟಲಿಗಳು, ಸೂಜಿಗಳು, ಗ್ಲೂಕೋಸ್ ಪೈಪ್ ಸೇರಿದಂತೆ ಅಪಾಯಕಾರಿ ತ್ಯಾಜ್ಯ ಎಸೆಯಲಾಗಿದೆ.
ಕೆರೆ ಖಾಲಿ ಇರುವ ಕಾರಣ ಮೇವನ್ನು ಹುಡುಕುತ್ತಾ ಬರುವ ಜಾನುವಾರುಗಳಿಗೆ ಇದು ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಸ್ಥಳಕ್ಕೆ ದೊಡ್ಡಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿ ಶಾರಧ ನಾಗನಾಥ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪರಿಸರ ಮಾಲಿನ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತ್ಯಾಜ್ಯ ತೆರವಿಗೆ ಕ್ರಮಕೈಗೊಂಡರು.
ಅಲ್ಲದೆ ತ್ಯಾಜ್ಯ ಎಸೆದಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.