Uttarakhand delegation visits Doddaballapur Municipal Council..!

ದೊಡ್ಡಬಳ್ಳಾಪುರ ನಗರಸಭೆಗೆ ಗ್ರಾಮಗಳ ಸೇರ್ಪಡೆ; ಲೇಔಟ್‌ಗಳಿಗೆ ಸುಗ್ಗಿ.. ಗ್ರಾಪಂ ಜನರಿಗೆ ಬೀಳಲಿದೆ ಬರೆ..!

ದೊಡ್ಡಬಳ್ಳಾಪುರ: ಈಗಿರುವ ವಿಸ್ತೀರ್ಣಕ್ಕೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ನೀಡಲು ವಿಫಲವಾಗಿದೆ ಎಂಬ ಆರೋಪ ಎದುರಿಸುತ್ತಿರುವ ದೊಡ್ಡಬಳ್ಳಾಪುರ ನಗರಸಭೆ (Municipal Council) ಈಗ ನಗರಕ್ಕೆ ಹೊಂದಿಕೊಂಡ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದೆ.

ಹೌದು ಗ್ರಾಮಪಂಚಾಯಿತಿಗಳಿಂದ ಒಪ್ಪಿಗೆ ಸೂಚಿಸಿರುವ ಠರಾವು ಪ್ರತಿ ಹಾಗೂ ಕಛೇರಿಯಿಂದ ಶಿಪಾರಸ್ಸು ಪತ್ರದೊಂದಿಗೆ ಸಲ್ಲಿಸಲು ನಗರಸಭೆಯಿಂದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆಯಲಾಗಿದೆ.

ಈ ಪತ್ರದಲ್ಲಿ ಈ ಮೊದಲು ಪುರಸಭೆಯಾಗಿದ್ದ ದೊಡ್ಡಬಳ್ಳಾಪುರ ನಗರದಲ್ಲಿ 2011ರ ಜನಗಣಿತಿಯಂತೆ 93105 ಜನಸಂಖ್ಯೆ ಇದ್ದು, ಪ್ರಸ್ತುತ 2023ರಲ್ಲಿ 121055 ಜನಸಂಖ್ಯೆ ಎಂದು ಅಂದಾಜಿಸಲಾಗಿರುತ್ತದೆ.

ಹಾಲಿ ನಗರದ ವಿಸ್ತೀರ್ಣವು 13.58 ಚದರ ಕಿ.ಮೀ ಇದ್ದು, ಮುಂದಿನ 15-20 ವರ್ಷಗಳಲ್ಲಿ ನಗರವು ಬೆಳವಣಿಗೆ ಹೊಂದುವ ಗುರಿಯನ್ನು ಗಮನದಲ್ಲಿಟ್ಟುಕೊಂಡು ನಗರದ ಸುತ್ತಮುತ್ತಲಿನ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೇರ್ಪಡೆಗೊಳಿಸಲು ಉದ್ದೇಶಿಸಿದೆ.

ಇದರಲ್ಲಿ ಮಾದಗೊಂಡನಹಳ್ಳಿ, ಹಸನಘಟ್ಟ, ಮಲ್ಲಾತಹಳ್ಳಿ, ಪಿಂಡಕೂರು ತಿಮ್ಮನಹಳ್ಳಿ, ತಿಮ್ಮಸಂದ್ರ, ಶಿವಪುರ, ಕೊನಘಟ್ಟ, ಸೊಣ್ಣಪ್ಪನಹಳ್ಳಿ, ತಿಪ್ಪಾಪುರ, ಅಲಹಳ್ಳಿ, ನಾಗಸಂದ್ರ, ಕಕ್ಕೇನಹಳ್ಳಿ, ಕೊಡಿಗೇಹಳ್ಳಿ, ಕುರುಬರಹಳ್ಳಿಣ ಕರೇನಹಳ್ಳಿ ಗ್ರಾಮ (ನಗರಸಭೆ ಭಾಗ ಹೊರತುಪಡಿಸಿ), ಮುತ್ಸಂದ್ರ ಗ್ರಾಮ (ನಗರಸಭೆ ಭಾಗ ಹೊರತುಪಡಿಸಿ), ಪಾಲನಜೋಗಿಹಳ್ಳಿ, ದರ್ಗಾಜೋಗಿಹಳ್ಳಿ ಗ್ರಾಮಗಳ ಸೇರ್ಪಡೆಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಗರಸಭೆಗೆ ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳು/ಗ್ರಾಮಗಳನ್ನು ಸೇರ್ಪಡೆ ಮಾಡಲು ಸೂಚಿಸಿರುವ ಸಂಬಂಧಪಟ್ಟ ಗ್ರಾಮಪಂಚಾಯಿತಿಗಳ ಠರಾವು ಪ್ರತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿರವರ ಶಿಪಾರಸ್ಸು ಪತ್ರದೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.

ಆದುದರಿಂದ, ಸೇರ್ಪಡೆಗೊಳಿಸಿತ್ತಿರುವ ಗ್ರಾಮಗಳ ವಿವರ, ಗ್ರಾಮಗಳಿಗೆ ಸಂಬಂಧಪಟ್ಟ ಗ್ರಾಮಪಂಚಾಯಿತಿಳಿಂದ ಒಪ್ಪಿಗೆ ಸೂಚಿಸಿರುವ ಠರಾವು ಪ್ರತಿ ಹಾಗೂ ತಮ್ಮ ಕಛೇರಿಯಿಂದ ಶಿಪಾರಸ್ಸು ಪತ್ರದೊಂದಿಗೆ ಸಲ್ಲಿಸುವಂತೆ ಕೊಡಲಾಗಿದೆ.

ಪರ-ವಿರೋಧ

ಈ ಪತ್ರಕ್ಕೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ನಗರಸಭೆಗೆ ವ್ಯಾಪ್ತಿಗೆ ಸೇರಿದರೆ ಉತ್ತಮ ಸೌಲಭ್ಯ ದೊರೆಯುತ್ತದೆ ಎಂಬ ಚರ್ಚೆಯಾದರೆ, ತೆರಿಗೆಯ ಬಿಸಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರಿಗೆ ತಟ್ಟಲಿದೆ ಎಂಬ ಆರೋಪ ವ್ಯಕ್ತವಾಗಿದೆ.

ಈಗಾಗಲೇ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಅವ್ಯವಸ್ಥೆ, ಯುಜಿಡಿ ಲೋಪ, ನೀರಿನ ಪೂರೈಕೆಯಲ್ಲಿ ಸಮಸ್ಯೆ, ಬೀದಿ ದೀಪದ ಕೊರತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಕೊರತೆ ನಗರ ವಾಸಿಗಳನ್ನು ಕಾಡುತ್ತಿದೆ.

ಅಲ್ಲದೆ ನಗರದ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಅಕ್ಕಪಕ್ಕದ ಕೆರೆಗಳಿಗೆ ಹರಿಸಿ, ಜಲ ಮಾಲಿನ್ಯಕ್ಕೆ ನಗರಸಭೆ ಕಾರಣವಾಗಿದೆ ಎಂಬ ಆರೋಪ ಆ ಗ್ರಾಮಗಳ ಜನರಿಂದ ಬಹುದಿನಗಳಿಂದ ಇದೆ.

ಇದರ ಬೆನ್ನಲ್ಲೆ ಆಷಾಢದಲ್ಲಿ ಅಧಿಕಮಾಸ ಎಂಬಂತೆ ಅಕ್ಕಪಕ್ಕದ ಗ್ರಾಮಗಳನ್ನು ಸೇರಿಸಿಕೊಂಡು ತೋಟದಲ್ಲಿ ಮನೆ ಕಟ್ಟುವವರಿಗೆ ತೆರಿಗೆ, ಅನುಮತಿ, ಯೂಜಿಡಿ ಮತ್ತಿತರರ ಹೊರೆ ಹಾಕಿ ತೆರಿಗೆ ಹೆಚ್ಚಿಸಿಕೊಳ್ಳುವ, ಲೇಔಟ್ ಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಇದಾಗಿದ್ದು, ಅವೈಜ್ಞಾನಿಕ ತೀರ್ಮಾನ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದೆ.

ಗ್ರಾಮಸ್ಥರು ಎಚ್ಚೆತ್ತುಕೊಳ್ಳಿ

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ, ಒಂದು ಅಥವಾ ಎರಡು ದಿನಕ್ಕೆ ಉತ್ತಮ ನೀರಿನ ಪೂರೈಕೆ ಸೌಲಭ್ಯ, ಸುಚಿತ್ವಕ್ಕೆ ಹೆಚ್ಚಿನ ಮಹತ್ವ ದೊರಕುತ್ತಿದೆ. ಅಲ್ಲದೆ ನಗರಸಭೆಗೆ ಹೊಲಿಸಿದರೆ, ಗ್ರಾಮಪಂಚಾಯಿತಿ ವ್ಯಾಪ್ತಿಯ ತೆರಿಗೆ ಕಡಿಮೆ ಇದೆ‌ ಎನ್ನಲಾಗಿದೆ

ಆದರೆ ದೊಡ್ಡಬಳ್ಳಾಪುರ ನಗರ ಸಭೆಯ ವ್ಯಾಪ್ತಿಯಲ್ಲಿ ಅನೇಕ ಕಡೆ ಮಣ್ಣಿನ ರಸ್ತೆ ಇಂದಿಗೂ ಇದ್ದು, ಗುಣಮಟ್ಟದ ರಸ್ತೆಯನ್ನೇ ಕಂಡಿಲ್ಲ. ಅಲ್ಲದೆ ಒಂದು ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸಿಬ್ಬಂದಿಗಳ ಕೊರತೆಯಿಂದ ಈಗಲೇ ದೊಡ್ಡಬಳ್ಳಾಪುರ ಜನತೆ ನಗರಸಭೆಗೆ ಕೆಲಸ ಕಾರ್ಯ ಬಿಟ್ಟು ಅಲೆಯಬೇಕಾಗಿರುವುದನ್ನು ಸೇರ್ಪಡೆಯಾಗಲಿರುವ ಗ್ರಾಪಂ ವ್ಯಾಪ್ತಿಯ ಜನತೆ ತಿಳಿದುಕೊಳ್ಳಬೇಕಿದೆ.

ಸೇರ್ಪಡೆಯಾಗುತ್ತಿರುವ ಗ್ರಾಮ ಮತ್ತು ಸರ್ವೆ ನಂಬರ್

ಅರಳುಮಲ್ಲಿಗೆ ಗ್ರಾಮಪಂಚಾಯಿತಿ; ಆಲಹಳ್ಳಿ ಸರ್ವೆ ನಂ01 ರಿಂದ 72ರ ವರೆಗೆ. ಕರೇನಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ ಹಾಲಿ ನಗರಸಭೆಗೆ ಸೇರಿರುವುದು ಬಿಟ್ಟು ಉಳಿದ ಪ್ರದೇಶ)

ಕೊಡಿಗೇಹಳ್ಳಿ ಗ್ರಾಮಪಂಚಾಯಿತಿ; ಕೊಡಿಗೇಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 120 ರ ವರೆಗೆ.
ಹಸನಘಟ್ಟ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 94 ರ ವರೆಗೆ.
ಮಾದಗೊಂಡನಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 94 ರ ವರೆಗೆ.
ಕುರುಬರಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 59 ರ ವರೆಗೆ.
ಪಾಲನಜೋಗಿಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 82 ರ ವರೆಗೆ ಮತ್ತು ಪಾಲನಜೋಗಿಹಳ್ಳಿ ಅಮಾನಿ ಕೆರೆ ಸರ್ವೆ ನಂಬರ್ ವರೆಗಿನ ಪ್ರದೇಶ.

ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ: ದರ್ಗಾಜೋಗಿಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 58 ರ ವರೆಗೆ. ಕಕ್ಕೇ‌ನಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 22 ರ ವರೆಗೆ.
ನಾಗಸಂದ್ರ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 54 ರ ವರೆಗೆ.

ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ; ತಿಪ್ಪಾಪುರ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 135 ರ ವರೆಗೆ.

ಕಂಟನಕುಂಟೆ ಗ್ರಾಮಪಂಚಾಯಿತಿ; ಮಲತ್ತಾಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 110 ರ ವರೆಗೆ.

ರಾಜಘಟ್ಟ ಗ್ರಾಮಪಂಚಾಯಿತಿ; ಪಿಂಡಕೂರು ತಿಮ್ಮನಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 32 ರ ವರೆಗೆ, ತಿಮ್ಮಸಂದ್ರ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ ಗ್ರಾಮದ ಕೊನೆಯವರೆಗೆ.

ಕೊನಘಟ್ಟ ಗ್ರಾಮಪಂಚಾಯಿತಿ: ಕೊನಘಟ್ಟ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 361ರ ವರೆಗೆ.
ಶಿವಪುರ ಗ್ರಾಮಠಾಣ ಹಾಗೂ ಸರ್ವೆ ನಂಬರ್ 01 ರಿಂದ 197ರ ವರೆಗೆ, ಸೊಣ್ಣಪ್ಪನಹಳ್ಳಿ ಗ್ರಾಮಠಾಣ ಹಾಗೂ ಸರ್ವೆ ನಂಬರ್ 0ರಿಂದ ಗ್ರಾಮದ ಕೊನೆಯ ವರೆಗೆ.

ರಾಜಕೀಯ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ರಾಹುಕಾಲ: 01:30PM ರಿಂದ 3:00PM, ಗುಳಿಕಕಾಲ: 09:00AM ರಿಂದ 10:30AM, ಯಮಗಂಡಕಾಲ: 06:00AM ರಿಂದ 07:30AM, Astrology

[ccc_my_favorite_select_button post_id="115027"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಮನೆಯ ಬಾಗಿಲು ಮೀಟಿ ಕಳ್ಳತನ.. ಲಕ್ಷಾಂತರ ರೂ. ಒಡವೆ, ನಗದು ದೋಚಿ ಪರಾರಿ!

ದೊಡ್ಡಬಳ್ಳಾಪುರ: ಮನೆಯ ಬಾಗಿಲು ಮೀಟಿ ಕಳ್ಳತನ.. ಲಕ್ಷಾಂತರ ರೂ. ಒಡವೆ, ನಗದು ದೋಚಿ

ಮೊಮ್ಮಗನ ಜನ್ಮದಿನಕ್ಕೆ ತೆರಳಿದ್ದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆಯ ಬಾಗಲು ಮೀಟಿ ಲಕ್ಷಾಂತರ ರೂ. ಒಡವೆ, ನಗದು ದೋಚಿ (Theft) ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ

[ccc_my_favorite_select_button post_id="115029"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!