ಬೆಂಗಳೂರು; ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ‘ಪೋಟೋ ಟುಡೇ’ (Photo Today) ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಉದ್ಘಾಟಿಸಿದರು.
ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಷಿಯೇಶನ್, ಬೈಸೇಲ್ ಇನ್‍ಟ್ರಾಕ್ಷನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಹಕರು ಸಹಯೋಗದಲ್ಲಿ ‘ಪೋಟೋ ಟುಡೇ’ (Photo TODAY) ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ಜೂನ್ 27, 28 ಹಾಗೂ 29ರಂದು ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಸಾಮಾಜಿಕ ಭದ್ರತೆ ಕಾಯ್ದೆ ಅಡಿಯಲ್ಲಿ ನೊಂದಣಿ ಕಾರ್ಯವನ್ನು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರು ಮಾಡಿಕೊಳ್ಳಬೇಕಿದೆ.

ಇಂತಹ ವಸ್ತು ಪ್ರದರ್ಶನಗಳು ಛಾಯಾಗ್ರಾಹಕರು ಆಧುನಿಕತೆಯ ಉತ್ಪನ್ನಗಳ ಕೊಳ್ಳುವಿಕೆಗೆ ಸಹಕಾರಿಯಾಗಿದ್ದು, ಅತಿ ಹೆಚ್ಚು ಮಂದಿ ಬಳಸಿಕೊಳ್ಳಬೇಕಿದೆ ಎಂದರು.
ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಬ್ಬಯ್ಯ ಪ್ರಸಾದ್ ಮಾತನಾಡಿ, 25ನೇ ವರ್ಷದ ಈ ಕಾರ್ಯಕ್ರಮ ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಕಡಿಮೆ ಇಲ್ಲದಂತೆ ನಡೆಯುತ್ತಿರುವುದು ಪ್ರಶಂಸನೀಯ.
ಲಕ್ಷಾಂತರ ಜನ ಜೀವನ ರೂಪಿಸಿಕೊಳ್ಳಲು ಛಾಯಾಗ್ರಾಹಣ ಕ್ಷೇತ್ರ ಸಹಕಾರಿಯಾಗಿದೆ. ಆಧುನಿಕತೆಗೆ ತಕ್ಕಂತೆ ಛಾಯಾಗ್ರಾಹಕರು ಬದಲಾವಣೆ ಮಾಡಿಕೊಳ್ಳಬೇಕಿದೆ. ಅನೇಕ ಪ್ರತಿಭೆಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಈ ವೇದಿಕೆ ಸಹಕಾರಿಯಾಗಿದೆ.
ಪೋಟೋ ಗ್ರಾಫರ್‌ಗಳಂತಹ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಯೋಜನೆ ಒದಗಿಸಲು ಮುಂದಾಗಿರುವ ಸಚಿವರಾದ ಸಂತೋಷ್ ಲಾಡ್ ಕಾರ್ಯ ಪ್ರಶಂಸನೀಯ ಎಂದರು.

ಈ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹರಿತಲೇಖನಿ (Harithalekhani) ಮುಖ್ಯ ಸಂಪಾದಕ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿಯ ಸಂತೋಷ್ ಕೆ.ಎಂ., ಹಿಂದೂ (Hindu) ಪತ್ರಿಕೆಯ ಫೋಟೋ ಜರ್ನಲಿಸ್ಟ್ ಬಳ್ಳಾರಿಯ ಶ್ರೀಧರ್ ಕಾವಲಿ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಕರ್ನಾಟಕ “ಛಾಯಾರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಅಲ್ಲದೆ ಛಾಯಾಗ್ರಾಹಕ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ 5 ಮಂದಿ ಮಹಿಳೆಯರು ಹಾಗೂ 38 ಮಂದಿ ಪುರುಷರನ್ನು ಸನ್ಮಾನಿಸಲಾಯಿತು.

ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಷಿಯೇಶನ್ ಅಧ್ಯಕ್ಷ ಬೆಂಜಮಿನ್ ಭಾಸ್ಕರ್, ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಕೃಷ್ಣಪ್ಪ, ದೊಡ್ಡಬಳ್ಳಾಪುರದ ಅಂತರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜು, ದಾವಣಗೆರೆ ಅಧ್ಯಕ್ಷ ಕಿರಣ್ ಬಾಸ್ಕಿ, ವಿಜಯನಗರ ಖಾಜಾಪೀರ್, ತಮಿಳುನಾಡು ಫೋಟೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಮುತ್ತುರಾಜ್, ಸೇರಿದಂತೆ ಅನೇಕರು ಹಾಜರಿದ್ದರು.
ಜೂ.27ರ ಆರಂಭವಾಗಿರುವ ‘ಪೋಟೋ ಟುಡೇ’ (Photo TODAY) ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಜೂ. 29 ರ ವರೆಗೆ ನಡೆಯಲಿದೆ.
ಕ್ಯಾಮರಾ, ಅಲ್ಬಮ್ ಸಾಫ್ಟ್‌ವೇರ್, ಪ್ರಿಂಟರ್, ಪ್ರೇಮ್, ಲ್ಯಾಮಿನೆಕನ್ ಸೇರಿದಂತೆ ಛಾಯಾಗ್ರಹಣ ಕ್ಷೇತ್ರದ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ 200ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯಾಪಾರ ವೈವಾಟುಗಳನ್ನು ಮಾಡುವುದರ ಜೊತೆಗೆ 5,000ಕ್ಕೂ ಹೆಚ್ಚು ಛಾಯಾಗ್ರಹಣ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಿದೆ.