ಪುಣೆ: ‘ನನ್ನ ಕ್ಷೇತ್ರ ಪುಣೆಯ ಹಿಂಜೆವಾಡಿ ಮಾಹಿತಿ ತಂತ್ರಜ್ಞಾನ ಉದ್ಯಮ ವಲಯ’ (ಐಟಿ ಪಾರ್ಕ್) ಬೆಂಗಳೂರು ಮತ್ತು ಹೈದರಾಬಾದ್‌ಗೆ ಹೊರಟುಹೋಗುತ್ತಿದೆ. ನಾವು ಹಾಳಾದೆವು’ ಎಂದು ಬಾವುಕರಾದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar), ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದ ಪಿಂಪ್ರಿ ಚಿಂಕ್ವಾಡ್ ನಲ್ಲಿ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಪರಿಶೀಲನೆ ವೇಳೆಯ ಇದರ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಸರಪಂಚ್ ಗಣೇಶ್ ಜಂಭೂಲ್ಕರ್ ಜತೆ ಮಾತನಾಡುವಾಗ ಸಿಟ್ಟಿಗೆದ್ದ ಅಜಿತ್ ಪವಾರ್, ಹಿಂಜೆವಾಡಿ ಐಟಿ ಪಾರ್ಕ್ ಬೇರೆ ರಾಜ್ಯಕ್ಕೆ ಹೊರಟು ಹೋಗುತ್ತಿದೆ. ಈ ಬಗ್ಗೆ ನಿಮಗೆ ಸ್ವಲವೂ ಕಾಳಜಿ ಇಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.
"We are ruined. The entire IT park of Hinjewadi is moving out.
— News Arena India (@NewsArenaIndia) July 26, 2025
It's going out of my Pune, out of Maharashtra to Bengaluru."
– DCM Ajit Pawar's angry outburst pic.twitter.com/eiBqE55N7z
ಬೆಳಗ್ಗೆ 6ಕ್ಕೆ ನಾನೇಕೆ ಇಲ್ಲಿಗೆ ಬರಬೇಕು? ಅರ್ಥವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು. 2,800 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿರುವ ಹಿಂಜೆವಾಡಿ ಐಟಿ ಪಾರ್ಕ್‌ನಲ್ಲಿ 800 ಐಟಿ ಕಂಪನಿಗಳಿವೆ.