ಹರಿದ್ವಾರದ: ಉತ್ತರಾಖಂಡದ ಹರಿದ್ವಾರದ ಮಾನಸ ದೇವಿ ದೇವಸ್ಥಾನದ ಬಳಿ ಕಾಲ್ತುಳಿತ (stampede) ಸಂಭವಿಸಿದ್ದು, 6 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ದೇವಾಲಯದ ಮೆಟ್ಟಿಲುಗಳ ಬಳಿ ವಿದ್ಯುತ್ ಶಾಕ್ ಹೊಡೆದಿದೆ ಎಂಬ ಗಾಳಿಸುದ್ದಿ ಹರಡಿದ ಪರಿಣಾಮ ಭಕ್ತರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿಹೋಗುವ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ದೋಬಾಲ್ ತಿಳಿಸಿದ್ದಾರೆ.
Haridwar, Uttarakhand: On the sudden stampede at Mansa Devi Temple, SSP Pramendra Singh Dobal says, "We received information about the stampede at Mansa Devi. Upon reaching the site, around 33 people were rescued, out of which 6 have died. The injured have been admitted to the… pic.twitter.com/3lzo3zOpVX
— IANS (@ians_india) July 27, 2025
ಘಟನಾ ಸ್ಥಳದಿಂದ ಗಾಯಾಳುಗಳನ್ನು ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
"Six people dead in a stampede after a huge crowd gathered at the Mansa Devi temple in Haridwar. I am leaving for the spot. A detailed report of the incident is awaited," Garhwal Division Commissioner Vinay Shankar Pandey has said.#stampede #haridwar #uttarakhand pic.twitter.com/qisLJPMz9V
— THE WEEK (@TheWeekLive) July 27, 2025
35 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.