ಬೆಂಗಳೂರು: ರಾಹುಲ್ ಗಾಂಧಿ ಮತಗಳ್ಳತನ ಆರೋಪ ಹಿಟ್ ಅಂಡ್ ರನ್ ಕೇಸ್ ರೀತಿ ಆರೋಪಗಳು ಇದರಲ್ಲಿ ಯಾವುದೇ ಉರಳಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿದರು.
ಜೆ.ಪಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಿನ್ನೆಯ ದಿನ ನಮ್ಮ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರು ಫ್ರೀಡಂ ಪಾರ್ಕ್ ನಲ್ಲಿ ಮತಕಳ್ಳತನ ಬಗ್ಗೆ ಕೆಲವೊಂದು ಆಪಾದನೆಗಳ ಮಾಡಿದ್ದಾರೆ ಅವೆಲ್ಲವೂ ಹಿಟ್ ಅಂಡ್ ರನ್ ಆರೋಪ ಇದಕ್ಕೆ ಹುರುಳಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ನಿನ್ನೆಯೇ ದಿನ ಚುನಾವಣಾ ಆಯೋಗ ಸ್ವಷ್ಟವಾಗಿ ಹೇಳಿದೆ. ಆ ರೀತಿ ಏನಾದ್ರು ಆಗಿದ್ರೆ, ಚುನಾವಣೆಯಾದ 45 ದಿನಗಳ ಪ್ರಕ್ರಿಯೆಯಲ್ಲಿ ಅವಕಾಶ ಇರುತ್ತೆ ಅದನ್ನು ಬಹಳಸಿಕೊಳ್ಳಬೇಕು. ಈಗ ಮತಕಳ್ಳತನ ಆಗಿದೆ, ಮತ್ತೊಂದು ಆಗಿದೆ ಅಂತ ಚರ್ಚೆ ಮಾಡಿದ್ರೆ, ಘೋಷಣಾ ಪತ್ರಕ್ಕೆ ಸಹಿ ಹಾಕಿ ಯಾಕೆ ಆಯೋಗಕ್ಕೆ ಸಲ್ಲಿಸಲು ಮುಂದಾಗಿಲ್ಲ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಬಿಹಾರ ರಾಜ್ಯದ ಜನತೆಯನ್ನ ದಿಕ್ಕುತಪ್ಪಿಸಲು ರಾಹುಲ್ ಗಾಂಧಿ ಹುನ್ನಾರ
ರಾಜ್ಯಕ್ಕೆ ರಾಹುಲ್ ಗಾಂಧಿ ಅವರು ಸುಮ್ಮನೆ ಬಂದ್ರು ಮಾತಾಡಿದ್ರು ಹೊರಟರು. ಯಾಕೇ ರಾಹುಲ್ ಗಾಂಧಿ ಮುಂದೆ ಬರ್ತಾ ಇಲ್ಲ. ಇದು ಹಿಟ್ ಅಂಡ್ ರನ್ ಕೇಸ್. ಮುಂದೆ ಬಿಹಾರ ಚುನಾವಣೆಯನ್ನು ಎದುರು ನೋಡ್ತಾ ಇದ್ದೇವೆ.ಈ ಚುನಾವಣೆ ಯನ್ನ ಮುಂದಿಟ್ಟುಕೊಂಡು, ಬಿಹಾರ ರಾಜ್ಯದ ಜನತೆಯನ್ನು ದಿಕ್ಕುತಪ್ಪಿಸಲು ರಾಹುಲ್ ಗಾಂಧಿ ಸೇರಿ ರಾಜ್ಯ ನಾಯಕರು ಹುನ್ನಾರ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಆರೋಪ ಅಷ್ಟೇ, ಆರೋಪದಲ್ಲಿ ಏನು ಹುರಳಿಲ್ಲ
ಚುನಾವಣಾ ಆಯೋಗವನ್ನು ಏಜೆಂಟ್ ಆಗಿ ಬಿಜೆಪಿ ಬಳಸುತ್ತಿದೆ ಎಂಬ ಆರೋಪಕ್ಕೆ ಮಾತನಾಡಿದ ಅವರು;
ಇದು ಆರೋಪ ಅಷ್ಟೇ, ಆರೋಪದಲ್ಲಿ ಏನು ಹುರಳಿಲ್ಲ ಇದರಲ್ಲಿ ಸತ್ಯ ಇಲ್ಲ. ಚುನಾವಣಾ ಆಯೋಗ ಯಾವುದೇ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಲ್ಲ.
ಕುಮಾರಣ್ಣನ ವೋಟರ್ ಐಡಿಯನ್ನ ಆಧಾರ್ ಗೆ ಲಿಂಕ್ ಮಾಡಿ ಅಂತ ಸಲಹೆ ನೀಡಿದ್ದಾರೆ
ಮಹದೇವ ಪುರ ಕ್ಷೇತ್ರದ ಬಗ್ಗೆ ಅವರು ಮಾಡಿರುವ ಆರೋಪಕ್ಕೆ ಅರವಿಂದ ಲಿಂಬಾವಳಿ ಉತ್ತರ ಕೊಟ್ಟಿದ್ದಾರೆ. ಚುನಾವಣಾ ಗುರುತಿನ ಚೀಟಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಬೇಕು. ಹಾಗೇನಾದ್ರೂ ಆಗಿದ್ರೆ ರಾಮನಗರ ಚನ್ನಪಟ್ಟಣದಲ್ಲಿ ನಾನು ಕೂಡಾ ಸೋಲ್ತಾ ಇರಲಿಲ್ಲ ಎಂದು ಹೇಳಿದರು.
ಇದೇ ರಾಮನಗರ, ಚನ್ನಪಟ್ಟಣಕ್ಕೆ ಬಂದರೆ ಕುಮಾರಣ್ಣ ಅವರು ಒಂದು ಮಾತು ಹೇಳಿದ್ದಾರೆ. ವೋಟರ್ ಐಡಿಯನ್ನ ಆಧಾರ್ ಲಿಂಕ್ ಮಾಡಿ ಅಂತ ಸಲಹೆ ನೀಡಿದ್ದಾರೆ. ಈ ರೀತಿ ಆಗಿದ್ದರೆ ನಾನು ಸೋಲ್ತಾ ಇರಲಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಬಂದಾಗ ಮತಗಳ್ಳತನ ಆಗಿರಲಿಲ್ವ. ಈಗ ಮಾತ್ರ ಲೋಕಸಭೆ ಹಿನ್ನಡೆ ಆಯ್ತು ಅಂತ ಮತಗಳ್ಳತನಾ.? ಆಧಾರ್ ಗೆ ವೋಟರ್ ಲಿಂಕ್ ಮಾಡಿದ್ರೆ ತೆರೆ ಎಳೆಯಬಹುದು. ಕಾಂಗ್ರೆಸ್ ಕ್ಷೇತ್ರಗಳಲ್ಲಿ ಡಬಲ್ ಡಬಲ್ ಮತಗಳಿವೆ. ಆಧಾರ್ ಕಾರ್ಡ್ ಗೆ ವೋಟರ್ ಐಡಿ ಲಿಂಕ್ ಮಾಡಿದ್ರೆ ಕಡಿವಾಣ ಹಾಕಬಹುದು ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.