ದೊಡ್ಡಬಳ್ಳಾಪುರ (Doddaballapur): ಇಂದು ರಾತ್ರಿ ಸಂಭವಿಸಲಿರುವ ಚಂದ್ರ ಗ್ರಹಣದ ಅಂಗವಾಗಿ ತಾಲೂಕಿನ ಪ್ರಸಿದ್ದ ಶ್ರೀಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಕನಸವಾಡಿ ಪುಣ್ಯಕ್ಷೇತ್ರ (ಚಿಕ್ಕಮಧುರೆ) ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯಗಳು ಸೇರಿದಂತೆ ತಾಲೂಕಿನ ಎಲ್ಲಾ ದೇವಾಲಯಗಳನ್ನು ಸಂಜೆ 4:30ಕ್ಕೆ ಮುಚ್ಚಲಾಗಿದೆ.
ಹಿಂದೂ ಧರ್ಮದಲ್ಲಿ ಚಂದ್ರ ಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಖಗೋಳ ಘಟನೆಯಾಗಿದ್ದು, ಇದು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ದೇವಾಲಯನ್ನು ಮುಚ್ಚಲಾಗಿದ್ದು, ನಂತರ ಮರುದಿನ ಬೆಳಗಿನ ಜಾವ ಸ್ವಾಮಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿ, ಭಕ್ತಾದಿಗಳ ದರ್ಶನಕ್ಕೆ ಅವಕಾಶ ದೊರಕಲೊದೆ.
ಚಂದ್ರ ಗ್ರಹಣ.
ಸ್ಪರ್ಶ ಕಾಲ: 09:56PM
ಮಧ್ಯ ಕಾಲ: 11:42PM
ಮೋಕ್ಷ ಕಾಲ: 01:27AM
ಶತಭಿಷ ನಕ್ಷತ್ರ ಕುಂಭ ರಾಶಿ ಮತ್ತು ಪೂರ್ವಾಭಾದ್ರ ನಕ್ಷತ್ರ ಮೀನ ರಾಶಿಗೆ ಗ್ರಹಣದ ದೋಷ ಉಂಟು ಮಾಡುವ ಸಾಧ್ಯತೆ.
ಗ್ರಹಣ ದೋಷಕ್ಕೆ ಪರಿಹಾರ
ಅಕ್ಕಿ, ಉದ್ದಿನ ಬೇಳೆ, ಹುರಳಿಕಾಳು, ಬಿಳಿ ಹೂವು, ಬಿಳಿ ವಸ್ತ್ರ, ದಕ್ಷಿಣೆ ಸಮೇತ ವಿಳೆದೆಲೆ ಅಡಿಕೆ ಮತ್ತು “ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು | ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |” ಈ ಶ್ಲೋಕವನ್ನು ಒಂದು ಬಿಳಿ ಹಾಳೆಯಲ್ಲಿ ಬರೆದು ತಮ್ಮ ಬಳಿ ಇಂದು ರಾತ್ರಿ ಇಟ್ಟುಕೊಂಡು ನಾಳೆ ಬೆಳಿಗ್ಗೆ ದಾನ ಕೊಡಬೇಕು ಎಂದು ವಿದ್ವಾನ್ ಎಸ್.ನವೀನ್ ತಿಳಿಸಿದ್ದಾರೆ.