ನವದೆಹಲಿ: ತೀವ್ರ ವಿರೋಧದ ನಡುವೆಯೂ ಏಷ್ಯಾಕಪ್ (Asia Cup) ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಈಗಾಗಲೇ ಏಷ್ಯಾ ಕಪ್ ಐದು ಪಂದ್ಯಗಳ ಮುಕ್ತಾಯ ಕಂಡಿದ್ದು, ಬಹುನಿರೀಕ್ಷಿತ ಭಾರತ ಹಾಗೂ ಪಾಕ್ ತಂಡಗಳು ಇಂದು ಸಂಜೆ 8 ಗಂಟೆಗೆ ಯುಎಇ ಕ್ರೀಡಾಂಗಣದಲ್ಲಿ ಮುಖಮುಖಿಯಾಗಲಿದ್ದು, ಈ ಪಂದ್ಯ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಭಾರತವು ಯುಎಇ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರೆ, ಇತ್ತ ಪಾಕ್ ಕೂಡ ಒಮಾನ್ ವಿರುದ್ಧ ಜಯಗಳಿಸಿದೆ. ಇದರ ನಡುವೆಯೇ ಉಭಯ ತಂಡಗಳು ಇಂದು ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೆ ಪ್ರತಿಷ್ಠೆಯ ಪಂದ್ಯ ಇದಾಗಿದೆ.
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲವಾದರೆ ಕ್ರಿಕೆಟ್ ಪಂದ್ಯ ಹೇಗೆ ಸಾಧ್ಯ..?
"Terror aur Talk ek sath nahi ho sakte"
— 🇮🇳Rohit🇮🇳 (@Rohit_p__) September 13, 2025
"Terror aur Trade ek sath nahi chal sakte"
Aur
"Paani aur khoon bhi ek sath nahi beh sakte"
– Narendra Modi pic.twitter.com/R27l9igdzu
ಪಹಲ್ಲಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ (Ind Vs Pak) ನಡುವೆ ಇದ್ದ ಅಲ್ಪ ಸ್ವಲ್ಪ ಸಂಬಂಧ ಕೂಡ ಕಡಿತವಾಗಿದ್ದು, ಇದರಿಂದ ರಾಜಕೀಯ, ಆರ್ಥಿಕ, ಹಾಗೂ ಕ್ರೀಡೆ ಮೇಲೆ ಕೂಡ ಪ್ರಭಾವ ಬೀರಿದೆ.
ಆದರೆ ಇದೀಗ ಇವೆಲ್ಲದರ ನಡುವೆ ಸಾಕಷ್ಟು ವಿರೋಧದ ನಡುವೆಯೂ ಪಂದ್ಯ ನಡೆಯುತ್ತಿರುವುದು ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲವಾದರೆ ಕ್ರಿಕೆಟ್ ಪಂದ್ಯ ಹೇಗೆ ಸಾಧ್ಯ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ.
BJP का चाल, चरित्र और चेहरा pic.twitter.com/G1Jm3cDnjS
— Congress (@INCIndia) September 14, 2025
ಅಪರೇಷನ್ ಸಿಂಧೂರ ಜಾರಿಯಲ್ಲಿ ಇದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರು, ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಹೇಗೆ ನಡೆಸಲಾಗುತ್ತಿದೆ.
ದೇಶದ ಅಮಾಯಕ ಜನ ಸಾವನಪ್ಪಿದ್ದಾರೆ ಆದರೆ ಕೇಂದ್ರ ಸರ್ಕಾರ ಕ್ರಿಕೆಟ್ ಹೇಗೆ ನಡೆಸಲು ಅವಕಾಶ ನೀಡಿದೆ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿವೆ.
I am not going to watch India v/s Pak Asia Cup Cricket Match. 😡
— Shweta Gupta 💓 (@Tokyo_Nairobi_M) September 14, 2025
How many of you are with me?#BoycottINDvPAK pic.twitter.com/RQ6kyGLS7O
ಪಹಲ್ಗಾವ್ ದಾಳಿ ವೇಳೆ ಬಿಜೆಪಿ ಪೋಸ್ಟ್ ಮಾಡಿದ್ದ ಫೋಟೋವನ್ನು ಬಳಸಿತ್ತು. ಈಗ ಅದೇ ಪೋಟೋವನ್ನು ತಿದ್ದುಪಡಿ ಮಾಡಿ ಭಾರತ-ಪಾಕ್ ನಡುಗೆ ಇಂದು ನಡೆಯಲಿರುವ ಪಂದ್ಯಾವಳಿಯನ್ನು ಬಹಿಷ್ಕಾರಿಸಲು ಕರೆ ನೀಡಲಾಗುತ್ತಿದೆ.
ಐಶಾನ್ಯಾ ದ್ವಿವೇದಿ ಪ್ರತಿಕ್ರಿಯೆ
ಪಹಾಲ್ಗಾವ್ ದಾಳಿ ವೇಳೆ ಮಡಿದ ಶುಭಂ ದ್ವಿವೇದಿಯವರ ಪತ್ನಿ ಐಶಾನ್ಯಾ ದ್ವಿವೇದಿ ಪ್ರತಿಕ್ರಿಯೆ ನೀಡಿ, 26 ಕುಟುಂಬಗಳ ಹುತಾತ್ಮತೆಯ ಭಾವನೆಗಳನ್ನು ಬಿಸಿಸಿಐ ಅರ್ಥಮಾಡಿಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರ ಕುಟುಂಬದಿಂದ ಯಾರೂ ಸಾವನ್ನಪ್ಪಿಲ್ಲ. ನಾನು ಈ ಪಂದ್ಯವನ್ನು ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಅವರಿಗೆ ಹರ್‌ಘರ್‌ಗಳಿಂದ ಸಿಂಧೂರ..!
ಇನ್ನೂ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಉಗ್ರರ ದಾಳಿ ವೇಳೆ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದ ಪ್ರಧಾನಮಂತ್ರಿ ಮೋದಿ ಅವರು ಕ್ರಿಕೆಟ್ ಪಂದ್ಯ ನಡೆಸಲು ಹೇಗೆ ಅವಕಾಶ ನೀಡಿದ್ದಾರೆ.
ಭಾರತೀಯರ ದೇಶಾಭಿಮಾನವನ್ನು ಬಲಿ ಕೊಟ್ಟು ದುಡ್ಡು ಮಾಡುವ ಉದ್ದೇಶದಿಂದ ಕ್ರಿಕೆಟ್ ಆಡಿಸಲು ಅನುಮತಿ ನೀಡಿರುವುದು ಸರಿಯಲ್ಲ. ದೇಶ ಭಕ್ತಿಯನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಈ ಪಂದ್ಯದಿಂದ ಸಿಗುವ ದುಡ್ಡಿಗಾಗಿ ದೇಶ ಸಾಯಲಿ, ದೇಶದ ಜನ ಸಾಯಲಿ ನಮಗೆ ಚಿಂತೆ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂತವರು ನಮಗೆ ದೇಶ ಭಕ್ತಿಯ ಪಾಠ ಹೇಳಿಕೊಡಲು ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಇಂದು ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆಯ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದು, ಆಪರೇಷನ್ ಸಿಂಧೂರ ವೇಳೆ ಹರ್‌ಘರ್ ಸಿಂಧೂರ ಕಾರ್ಯಕ್ರಮ ಬಿಜೆಪಿ ಆಯೋಜಿಸಿತ್ತು. ಆದರೆ ಇಂದು ಕೇಂದ್ರ ಸರ್ಕಾರದ ದ್ವಿಮುಖ ನೀತಿ ಖಂಡಿಸಿ, ಮೋದಿ ಅವರಿಗೆ ಹರ್‌ಘರ್‌ಗಳಿಂದ ಸಿಂಧೂರ ಕಳಿಸುತ್ತೇವೆ ಎಂದಿದ್ದಾರೆ.
ಈಗಾಗಲೇ ಸಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಇಂದು ನಡೆಯಲಿರುವ ಪಂಧ್ಯದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯಾವಳಿ ಆರಂಭಕ್ಕೆ ಮುನ್ನ ಆಟಗಾರರು ಪಹಲ್ಗಾವ್ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸುವರೇ..? ಇವರ ಜೊತೆ ಪಾಕಿಸ್ತಾನದ ಕ್ರೀಡಾಪಟುಗಳು ಶ್ರದ್ಧಾಂಜಲಿ ಸಲ್ಲಿಸಿ, ತಮ್ಮದೇ ದೇಶದ ಉಗ್ರರ ದಾಳಿಯನ್ನು ಖಂಡಿಸುವರೇ ಎಂದು ಪ್ರಶ್ನೆ ಮಾಡಲಾಗುತ್ತಿದೆ.
India-Pakistan Match: हमारे 26 भारतीयों की जान की कीमत पैसों से बढ़कर नहीं है pic.twitter.com/NvsmkrOGes
— Asaduddin Owaisi (@asadowaisi) September 14, 2025
ಒಟ್ಟಾರೆ ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾವಳಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.