ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ (Upendra) ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮೊಬೈಲ್ ಅನ್ನು ವಂಚಕರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ
ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ನೀಡಿರುವ ಉಪೇಂದ್ರ ಮತ್ತು ಪ್ರಿಯಾಂಕಾ, ತಮ್ಮ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಕೊಡದಂತೆ ಮನವಿ ಮಾಡಿದ್ದಾರೆ.
Actor Upendra’s phone has been hacked.
— Tupaki (@tupaki_official) September 15, 2025
He requested everyone not to send money if they receive calls asking for money from his phone or his wife’s phone.#Upendra #Sandalwood #Hacked #Tupaki pic.twitter.com/XLJhD3QGdz
ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ವಂಚಕ, ನಿಮ್ಮ ಆರ್ಡರ್ ಡಿಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ ಎಂದು ಹ್ಯಾಶ್
ಟ್ಯಾಗ್ ಸಹಿತ ಒಂದು ನಂಬರ್ ಹೇಳಿದ್ದಾನೆ. ಆ ನಂಬರ್ ಡಯಲ್ ಮಾಡುವಷ್ಟರಲ್ಲಿ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿದೆ. ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದು ಕೊಂಡ ಪ್ರಿಯಾಂಕಾ ಅವರು ಪತಿ ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಅವರ ಫೋನ್ ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದಾರೆ. ಕೂಡಲೇ ಆ ಫೋನ್‌ಗಳೂ ಹ್ಯಾಕ್ ಆಗಿವೆ.
ಫೋನ್ ನಂಬರ್ ಹ್ಯಾಕ್ ಆದ ಬಳಿಕ ನಮ್ಮಿಬ್ಬರ ನಂಬರ್ ಗಳಿಂದ ಹಣ ಕೇಳಿಕೊಂಡು ಪರಿಚಿತರಿಗೆ ಮೆಸೇಜ್‌ಗಳು ಹೋಗಿವೆ. ಖಚಿತಪಡಿಸಲು ಅವರು ಕರೆ ಮಾಡಿದರೂ ನಮಗೆ ತಲುಪುತ್ತಿಲ್ಲ. ಕಾಲ್ ಫಾರ್ವರ್ಡ್ ಮಾಡಿಟ್ಟಿದ್ದಾರೆ. ನಮ್ಮ ಪರಿಚಿತರು ಮೂರ್ನಾಲ್ಕು ಜನ ತುರ್ತು ಅಗತ್ಯವಿರಬಹುದು ಎಂದು ಸುಮಾರು 50 ಸಾವಿರ ರೂ. ಹಣ ವರ್ಗಾಯಿಸಿದ್ದಾರೆ.
ನನ್ನ ಮಗ ಸಹ ಹಣ ವರ್ಗಾಯಿಸಿದ್ದಾನೆ. ಯಾರೂ ದಯವಿಟ್ಟು ನಂಬಿ ಹಣ ಕಳುಹಿಸಬೇಡಿ ಎಂದಿದ್ದಾರೆ.
ಮನೆಗೆ ಆರ್ಡರ್ ಮಾಡಿದ್ದ ಒಂದಷ್ಟು ವಸ್ತುಗಳು ಬರಬೇಕಿತ್ತು. ನಾನು ಅದೇ ಕಾಲ್ ಇರಬಹುದು ಎಂದು ಉತ್ತರಿಸಿದಾಗ, ಈ ರೀತಿ ಹ್ಯಾಕ್ ಮಾಡಿದ್ದಾರೆ. ಸ್ವಲ್ಪ ಅನುಮಾನವಿತ್ತು, ಆದರೆ ನಾನು ಗಡಿಬಿಡಿಯಲ್ಲಿ ಅವರು ಹೇಳಿದ ನಂಬರ್ ಡಯಲ್ ಮಾಡಿದಾಗ ಈ ರೀತಿ ಆಗಿದೆ.
ನಂತರ ನನ್ನ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದವರಿಗೆ, ತುರ್ತಾಗಿ ಹಣ ಬೇಕಿದೆ ಎಂದು ಕಳಿಸುವಂತೆ ಮೆಸೇಜ್ ಮಾಡಿದ್ದಾರೆ ಎಂದು ಪ್ರಿಯಾಂಕಾ ಉಪೇಂದ್ರ ತಿಳಿಸಿದ್ದಾರೆ.