ಉಡುಪಿ: ಸೈನಿಕರ ಕ್ಷೇಮ, ದೇಶದ ಸುರಕ್ಷತೆಗೆ ಪ್ರಾರ್ಥಿಸಿ ಉಡುಪಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ (Sri Pejawar Sri Vishwaprasannatheertha Swamiji) ಮಾರ್ಗ ದರ್ಶನದಲ್ಲಿ ಮುಚ್ಚುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸುದರ್ಶನ ಮಂತ್ರ ಯಾಗ (Sudarshan Yaga) ನಡೆಯಿತು.
ದೇಶದ ಗಡಿ ಭಾಗದಲ್ಲಿ ಶತ್ರು ರಾಷ್ಟ್ರಗಳ ಸವಾಲುಗಳನ್ನೆ ದುರಿಸಿ ಯುದ್ಧ ಸನ್ನದ್ದ ಸ್ಥಿತಿಯಲ್ಲಿ ದಿಟ್ಟತನ ದಿಂದ ದೇಶವನ್ನು ಕಾಯುತ್ತಾ ಸೈನಿಕರ ಯೋಗಕ್ಷೇಮ ಮತ್ತು ದೇಶದ ಸುರಕ್ಷೆ ಸಮೃದ್ಧಿಗಾಗಿ ಪ್ರಾರ್ಥಿಸಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪ ನಾನುಸಾರ ಈ ಯಾಗ ಹಮ್ಮಿಕೊಳ್ಳಲಾಗಿತ್ತು.
ಉಡುಪಿಯ ಪ್ರಾಚೀನ ಮುಚ್ಚು ಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವ ಸ್ಥಾನದಲ್ಲಿ ಸಂಜೆ ಮಹಾಸುದರ್ಶನ ಮಂತ್ರ ಯಾಗ, ವಿದ್ವಾನ್ ಯಾಗ ಹೋಮ ನೆರವೇರಿದವು.
ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಶ್ರೀಗಳು ದೇವ ಸೇನಾಧಿಪತಿ ಯಾದ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಸಿದ ಈ ಯಾಗದ ಪೂರ್ಣ ಶ್ರೇಯಸ್ಸು ದೇಶದ ಗಡಿಕಾಯುವ ಸೈನಿಕರ ಶ್ರೇಯಸ್ಸಿ ಗಾಗಿ ಮತ್ತು ದೇಶದ ಸುರಕ್ಷತೆಗಾಗಿ ಅರ್ಪಿಸೋಣ ಎಂದರು.