ದೊಡ್ಡಬಳ್ಳಾಪುರ: ಪದೇ ಪದೇ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ (Lokayukta) ಅಧಿಕಾರಿಗಳು ನಗರಸಭೆ ಮೇಲೆ ದಾಳಿ ನಡೆಸಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಮಧ್ಯಾಹ್ನ 3.15 ರ ಸುಮಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಅಧಿಕಾರಿ ಎಸ್ ಪಿ ಪವನ್ ನೆಜೂರ್ ನೇತೃತ್ವದಲ್ಲಿ 5 ಕಾರುಗಳಲ್ಲಿ ಬಂದ 15 ಕ್ಕೂ ಹೆಚ್ಚು ಅಧಿಕಾರಿಗಳು ನಗರಸಭೆ ಮೇಲೆ ದಾಳಿ ನಡೆಸಿದರು, ಸಾರ್ವಜನಿಕರನ್ನು ಹೊರಗೆ ಕಳಿಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರ ಕಚೇರಿಯಲ್ಲಿ ಕೂಡ ಕಡತಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಇದೀಗ ಬಂದ ಮಾಹಿತಿ ಅನ್ವಯ ಒಂದು ಕಂಪ್ಯೂಟರ್ ಮತ್ತು ಓರ್ವ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಎಸ್‌ಪಿ ಪವನ್ ನೆಜೂರ್, ಡಿವೈಎಸ್ ಪಿ ಗಿರೀಶ್ ರೋಡ್ಕರ್, ಇನ್ಸ್ ಪೆಕ್ಟರ್ ಉಮಾಮಹೇಶ್, ಬಾಳಪ್ಪ, ಪಿ.ಮಹೇಶ್, ನಂದಕುಮಾರ್, ರಮೇಶ್ ಹಾಗೂ ಸಿಬ್ಬಂದಿ ಇದ್ದಾರೆ.