ಅನ್ನಮಯ್ಯ: ಆಂಧ್ರಪ್ರದೇಶದ ದೇವರಚೆರವು ಬಳಿ ಆಯೋಜಿಸಲಾಗಿದ್ದ ಮಾತಾಂಗ ಮಹಾಪೀಠದ ಶಿಲಾಶಾಸನ ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ (KH Muniyappa) ಭಾಗವಹಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀ ನರಸಿಂಹ ಪೀಠಾಧಿಪತಿ ಶ್ರೀ.ಶ್ರೀ.ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಸಂಕಲ್ಪದಂತೆ ಅನ್ನಮಯ್ಯ ಜಿಲ್ಲೆಯ ಲಕ್ಕಿರೆಡ್ಡಿಪಲ್ಲಿ ದೇವರಚೆರುವು ಬಳಿ ಶ್ರೀ ಮಾತಂಗ ಮಹಾ ಪೀಠದ ಶಿಲಾಶಾಸನ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ, ವೈಭವದೊಂದಿಗೆ ನೆರವೇರಿದ್ದು.
ಪ್ರಥಮ ಬಾರಿಗೆ ಮಾತಾಂಗ ಮಹಾ ಪೀಠದ ನಿರ್ಮಾಣ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಎಲ್ಲಾ ಜಾತಿಗಳನ್ನು ಸಮಾನವಾಗಿ ನೋಡುವದರೊಂದಿಗೆ ಸನ್ಯಾಸ ದೀಕ್ಷೆ ಮತ್ತು ಮಠ ನಿರ್ಮಾಣಕ್ಕೆ ಆಶೀರ್ವಾದ ನೀಡಿದ ಶ್ರೀ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದರು.
ರಾಜಕೀಯಕ್ಕೂ ಮೀರಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಠಗಳು ಸಮಾಜಕ್ಕೆ ಸಂಸ್ಕಾರ ಕಲಿಸುವುದರ ಜೊತೆಗೆ ಸರಿಯಾದ ಶಿಕ್ಷಣವನ್ನು ನೀಡುವುದೇ ಸನ್ಮಾರ್ಗಕ್ಕೆ ಮೂಲ ಎಂದು ಹೇಳಿದರು.
ಮಠವು ಒಂದು ವರ್ಷದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ವೇದಗಳು ಮತ್ತು ಉಪನಿಷತ್ತನ್ನು ಅಧ್ಯಯನ ಮಾಡುವವರು ಮತ್ತು ಬೋಧಿಸುವ ಪಂಡಿತರಿಗೆ ಇಲ್ಲಿಗೆ ಆಹ್ವಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ವಾರ್ತ ಮತ್ತು ಪ್ರಚಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಮುರಗನ್, ತೆಲಂಗಾಣ ಸರ್ಕಾರದ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಾಮೋದರ ರಾಜನರಸಿಂಹ, ಭುವನೇಶ್ವರ ಪೀಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಕಮಲಾನಂದ ಭಾರತೀ ಮಹಾಸ್ವಾಮಿಗಳು, ಬ್ರಹ್ಮಂಗಾರಿ ಮಠದ ಶ್ರೀ ಅಚಲಾನಂದ ಆಶ್ರಮದ ಶ್ರೀ ವಿರಜಾನಂದ ಸ್ವಾಮಿಗಳು, ಮತ್ತು ಮಾತಾಂಗ ಮಹಾ ಪೀಠಾಧಿಪತಿ ಶ್ರೀ ಮಾತಾಂಗಾನಂದಗಿರಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.